ಕ್ಯಾರಕಾಸ್, ಜೂ. ೨೫ : ಗುರುವಾರ ದಕ್ಷಿಣ ಅಮೇರಿಕಾದ ಪುಟ್ಟ ರಾಷ್ಟç ವೆನೆಜುವೆಲಾದಲ್ಲಿ ಸಂಭವಿಸಿದ ೨ ಪ್ರಬಲ ಭೂಕಂಪಗಳು ದೇಶವನ್ನೇ ತತ್ತರಗೊಳಿಸಿದ್ದು ೧೬೪ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಒಂದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ವೆನೆಜುವೆಲಾದ ಉತ್ತರ ಕರಾವಳಿ ಪ್ರದೇಶದಲ್ಲಿ ೭.೫ ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಇದಕ್ಕೂ ಮುನ್ನ ಕೇವಲ ೪೦ ಸೆಕೆಂಡುಗಳಲ್ಲಿ ೭.೨ ತೀವ್ರತೆಯ ಮತ್ತೊಂದು ಭೂಕಂಪನ ನಡೆದಿದೆ.
ಈ ಎರಡು ಕಂಪನಗಳು ವ್ಯಾಪಕ ವಿನಾಶವನ್ನು ಸೃಷ್ಟಿಸಿವೆ.ಕೇವಲ ೪೦ ಸೆಕೆಂಡುಗಳ ಅಂತರದಲ್ಲಿ ಎರಡೆರಡು ಬಾರಿ ಭೂಕಂಪ ಸಂಭವಿಸಿದ್ದು, ಪ್ರಮುಖವಾಗಿ ರಾಜಧಾನಿ ಕ್ಯಾರಕಾಸ್ನಲ್ಲಿ ಹಲವು ಕಟ್ಟಡಗಳು ಹಾನಿಗೊಳಗಾಗಿ ಇನ್ನೂ ಅನೇಕ ಕಟ್ಟಡಗಳು ಕುಸಿದುಬಿದ್ದಿವೆ. ಭೂಕಂಪನ ತುಂಬಾ ಪ್ರಬಲವಾಗಿದ್ದ ಕಾರಣ ಜನರು ತಮ್ಮ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕುಟುಂಬದವರೊAದಿಗೆ ಮನೆಗಳು ಮತ್ತು ಕಚೇರಿಗಳಿಂದ ಹೊರ ಓಡಿ ಬೀದಿಗಳಲ್ಲಿ ಆಶ್ರಯ ಪಡೆದಿದ್ದಾರೆ.
ಸಮರೋಪಾದಿ ರಕ್ಷಣೆ
ವೆನೆಜುವೆಲಾದಲ್ಲಿ ರಕ್ಷಣಾ ಕಾರ್ಯಾಚರಣೆಗಳು ತೀವ್ರಗತಿಯಲ್ಲಿ ನಡೆಯುತ್ತಿವೆ. ಸರ್ಕಾರ ಮತ್ತು ಅಂತರರಾಷ್ಟಿçÃಯ ಸಂಸ್ಥೆಗಳು ನೆರವು ನೀಡುತ್ತಿವೆ. ಜನರು ತುಂಬಾ ಆತಂಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಆಫ್ಟರ್ ಶಾಕ್ಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಜಪಾನ್-ಅಮೆರಿಕದಲ್ಲೂ ಕಂಪನ
ಜಪಾನ್ನಲ್ಲಿ ೬.೯ ತೀವ್ರತೆಯ ಭೂಕಂಪವೂ ಸಂಭವಿಸಿದೆ. ಅಲ್ಲದೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ೫.೬ ತೀವ್ರತೆಯ ಭೂಕಂಪ ದಾಖಲಾಗಿದೆ. ಒಂದೇ ದಿನ ಮೂರು ದೇಶಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿರುವುದರಿAದ ಜನರಲ್ಲಿ ‘ಇವುಗಳಿಗೆ ಸಂಬAಧವಿದೆಯೇ?’ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ತಜ್ಞರು ಈ ಭೂಕಂಪಗಳು ಪರಸ್ಪರ ಸಂಬAಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ (USಉS) ಪ್ರಕಾರ, ಭೂಕಂಪದ ಕೇಂದ್ರಬಿAದು ಮಾಂಟಲ್ಬನ್ ಪ್ರದೇಶದಿಂದ ಸುಮಾರು ೨೮ ಕಿಲೋಮೀಟರ್ ವಾಯುವ್ಯಕ್ಕೆ ಇತ್ತು. ಈ ಪ್ರದೇಶವು ವೆನೆಜುವೆಲಾದ ದೊಡ್ಡ ತೈಲ ಸಂಸ್ಕರಣಾ ಘಟಕಗಳಿಗೆ ಹತ್ತಿರವಾಗಿದೆ.
ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇದೇ ವೇಳೆ ನೆರೆಯ ರಾಷ್ಟ್ರಗಳು ತಮ್ಮ ರಕ್ಷಣಾ ಕಾರ್ಯಾಚರಣೆ ತಂಡಗಳನ್ನು ವೆನೆಜುವೆಲಾಗೆ ಕಳುಹಿಸಿವೆ. ಈ ಮಧ್ಯೆ ಭೂವಿಜ್ಞಾನಿಗಳು ವೆನೆಜುವೆಲಾದಲ್ಲಿ ಮತ್ತೆ ಭೂಕಂಪನಗಳು ಸಂಭವಿಸುವ ಅಪಾಯವಿದೆ ಎಂದು ಹೇಳಿದ್ದು, ಭಾರೀ ಪ್ರಮಾಣದಲ್ಲಿ ಜೀವಹಾನಿಯ ಎಚ್ಚರಿಕೆಯನ್ನು ನೀಡಿದ್ದಾರೆ.
ತುರ್ತು ಪರಿಸ್ಥಿತಿ ಘೋಷಣೆ
ಡೆಲ್ಸಿ ರೊಡ್ರಿಗಸ್ ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿರುವುದಲ್ಲದೆ, ರಕ್ಷಣಾ ಕಾರ್ಯಾಚರಣೆಗಳಿಗೆ ಆದೇಶ ಹೊರಡಿಸಿದ್ದಾರೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವುದು ಸರ್ಕಾರದ ಪ್ರಾಥಮಿಕ ಆದ್ಯತೆ ಎಂದು ರೊಡ್ರಿಗಸ್ ಹೇಳಿದ್ದಾರೆ.
ಕ್ಯಾರಕಾಸ್ನ ಪಶ್ಚಿಮಕ್ಕೆ ಸುಮಾರು ೧೬೦ ಕಿ.ಮೀ (೧೦೦ ಮೈಲುಗಳು) ದೂರದಲ್ಲಿ, ೭.೨ ತೀವ್ರತೆಯ ಮೊದಲ ಭೂಕಂಪನ ಸಂಭವಿಸಿದ್ದರೆ, ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ೭.೫ ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿದೆ. ಎರಡು ಪ್ರಬಲ ಭೂಕಂಪಗಳ ನಂತರ ೨೦ಕ್ಕೂ ಹೆಚ್ಚು ಉಪಕಂಪನಗಳನ್ನೂ ಕೂಡ ಪತ್ತೆಮಾಡಲಾಗಿದೆ. ಲಾ ಗೈರಾದಲ್ಲಿ ಡಜನ್ಗಟ್ಟಲೇ ಕಟ್ಟಡಗಳು ಕುಸಿದಿದ್ದು, ಈ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಾವಿರಾರು ಜನ ಸಿಲುಕಿಕೊಂಡಿರುವ ಸಾಧ್ಯತೆ ಇದೆ.
ಹೆಚ್ಚಿನ ಸಾವುನೋವುಗಳು ಮತ್ತು ವ್ಯಾಪಕ ಹಾನಿ ಸಂಭವಿಸುವ ಸಾಧ್ಯತೆಯಿದ್ದು, ವಿಪತ್ತು ಮರುಕಳಿಸುವ ಸಾಧ್ಯತೆಯಿದೆ” ಎಂದು ಯುಎಸ್ಜಿಎಸ್ ಹೇಳಿದೆ.
ಸರಣಿ ಭೂಕಂಪನಗಳ ಬಳಿಕ ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ವೆನೆಜುವೆಲಾ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್, ಈ ರಾಷ್ಟಿçÃಯ ವಿಪತ್ತಿನ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕನೂ ತನ್ನ ಮತ್ತು ತನ್ನವರ ಹಾಗೂ ನೆರೆಹೊರೆಯವರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು. ಸರ್ಕಾರ ಜನರ ಪ್ರಾಣ ಮತ್ತು ಆಸ್ತಿ-ಪಾಸ್ತಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ ಎಂದು ಭರವಸೆ ನೀಡಿದರು.