ಗೋಣಿಕೊಪ್ಪಲು, ಜೂ. ೨೫: ಕ್ರೀಡೆಗೆ ಅಕ್ಷರಶಃ ತವರೂರು ನಮ್ಮ ಕೊಡಗು ಜಿಲ್ಲೆ. ಇಲ್ಲಿನ ಮಣ್ಣಿನಲ್ಲೇ ಕ್ರೀಡಾ ಸ್ಫೂರ್ತಿ ಇದೆ. ಆದರೆ, ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಷ್ಟಿçÃಯಮಟ್ಟದ ತರಬೇತಿ ಪಡೆಯಲು ಹೊರಜಿಲ್ಲೆ ಅಥವಾ ಹೊರರಾಜ್ಯಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಇದ್ದು, ಇನ್ನು ಆ ದಿನಗಳು ದೂರವಾಗಲಿದೆ. ಕ್ರೀಡಾಪ್ರೇಮಿಗಳ ಪಾಲಿನ ಕನಸಿನ ಯೋಜನೆಗೆ ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವಿ. ಬಾಡಗ ಗ್ರಾಮದಲ್ಲಿ ಚಾಲನೆ ದೊರೆತಿದೆ.

ವೀರಾಜಪೇಟೆ ಸಮೀಪದ ವಿ. ಬಾಡಗ ಗ್ರಾಮದಲ್ಲಿ ಅಂದಾಜು ೪೫ ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ನೂತನ ಕ್ರೀಡಾ ವಸತಿ ಸಮುಚ್ಚಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದು ಕೇವಲ ಒಂದು ಕಟ್ಟಡವಲ್ಲ, ಕೊಡಗಿನ ಯುವ ಕ್ರೀಡಾಪಟುಗಳ ಪಾಲಿನ ಆಶಾದಾಯಕ ಕೇಂದ್ರ. ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಬಹುನಿರೀಕ್ಷಿತ ಹಾಗೂ ಕನಸಿನ ಕೂಸಾಗಿರುವ ಈ ಯೋಜನೆ, ಕೊಡಗಿನ ಕ್ರೀಡಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ.

ರಾಷ್ಟಿçÃಯ ಮಟ್ಟದ ಅತ್ಯಾಧುನಿಕ ಸೌಲಭ್ಯಗಳು, ಕ್ರೀಡಾಪಟುಗಳಿಗೆ ತರಬೇತಿ ಮತ್ತು ವಸತಿ ಎರಡೂ ಒಂದೇ ಸೂರಿನಡಿ ಲಭ್ಯವಾಗುತ್ತಿದೆ. ಹೊರರಾಜ್ಯಗಳಲ್ಲಿ ಸಿಗುವ ತರಬೇತಿಯ ಸೌಲಭ್ಯಗಳು ಇನ್ನು ಮುಂದೆ ನಮ್ಮ ಕೊಡಗಿನಲ್ಲೇ ಲಭ್ಯವಾಗುತ್ತಿರುವುದು ಕೊಡಗಿನ ಕ್ರೀಡಾಪಟುಗಳಿಗೆ ವರದಾನವಾಗಲಿದೆ.

ಈ ಕ್ರೀಡಾ ಸಮುಚ್ಚಯವು ಸಿದ್ಧವಾದರೆ ಮುಂದಿನ ದಿನಗಳಲ್ಲಿ ಕೊಡಗಿನಿಂದ ಅಂತರರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು ಎಂಬುದು ಕ್ರೀಡಾಭಿಮಾನಿಗಳ ಆಶಯ. ಕ್ಷೇತ್ರದ ಶಾಸಕರ ದೂರದೃಷ್ಟಿಯ ಈ ಯೋಜನೆ, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರ ವಹಿಸಲಿದೆ. ನಮ್ಮ ಕೊಡಗಿನ ಕ್ರೀಡಾ ಕಿರೀಟಕ್ಕೆ ಮತ್ತೊಂದು ಗರಿ ಸಿಗುವ ಕಾಲ ಸನ್ನಿಹಿತವಾಗಿದೆ.

ಕೊಡಗಿನಲ್ಲಿ ಪ್ರಥಮ ಬಾರಿಗೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸುಮಾರು ರೂ. ೪೫ ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುಚ್ಚಯದ ಮೊದಲ ಹಂತದ ಕಟ್ಟಡ ಕಾಮಗಾರಿಯೂ ಆರಂಭಗೊAಡಿದೆ. ದಕ್ಷಿಣ ಕೊಡಗಿನ ವಿ. ಬಾಡಗದ ೧೧.೫೦ ಎಕರೆ ವಿಸ್ತೀರ್ಣದ ಭೂಮಿಯಲ್ಲಿ, ಆಧುನಿಕ ಕ್ರೀಡಾಂಗಣ, ಅಂತರರಾಷ್ಟಿçÃಯ ಮಟ್ಟದ ಸೌಲಭ್ಯಗಳು, ಈಜುಕೊಳ ಸಹಿತ ವ್ಯಾಪಕ ಸೌಲಭ್ಯ

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಜಿಮ್, ಒಳಾಂಗಣ ಆಟದಲ್ಲಿ ಆಧುನಿಕ ಸೌಲಭ್ಯಗಳು ಈ ಒಂದು ಸಮುಚ್ಚಯದಲ್ಲಿ ದೊರೆಯಲಿದೆ.

ಕ್ರೀಡೆಯ ತವರೂರು ಕೊಡಗು ಜಿಲ್ಲೆಯಲ್ಲಿ ಅತಿ ದೊಡ್ಡದಾದ ಯೋಜನೆ ಇದಾಗಿದ್ದು, ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆಗೆ ಆರಂಭದಲ್ಲಿ ಒಟ್ಟು ೪೫ ಕೋಟಿ ಹಣವನ್ನು ವಿನಿಯೋಗ ಮಾಡಲಾಗುತ್ತಿದೆ. ಸಂಕೀರ್ಣದಲ್ಲಿ ನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿ ತೆಗೆಯಲಾಗಿದೆ. ಸಾಕಷ್ಟು ನೀರಿನ ವ್ಯವಸ್ಥೆ ಲಭ್ಯವಾಗಿದೆ. ಮೊದಲ ಹಂತದ ಕಟ್ಟಡ ಕಾಮಗಾರಿಯು ಭರದಿಂದ ಸಾಗುತ್ತಿದೆ

ರಾಜ್ಯಸಭಾ ಸದಸ್ಯರ ಕೊಡುಗೆ

ದೆಹಲಿ ಮೂಲದ ಅಜಯ್ ಮಾಕನ್ ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದರು. ರಾಜ್ಯಸಭೆ ಸದಸ್ಯ ಅಜಯ್ ಮಾಕನ್ ತಮ್ಮ ೬ ವರ್ಷದ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಪೂರ್ಣ ಅನುದಾನವನ್ನು ಕ್ರೀಡಾ ಸಂಕೀರ್ಣಕ್ಕೆ ವಿನಿಯೋಗಿಸಲು ಮುಂದಾಗಿದ್ದಾರೆ. ಪ್ರತಿ ವರ್ಷವೂ ಹಂತಹAತವಾಗಿ ಬಿಡುಗಡೆಯಾಗುವ ಅನುದಾನವನ್ನು ಈ ಯೋಜನೆಗೆ ಸದ್ಬಳಕೆ ಮಾಡಲಾಗುತ್ತಿದೆ.

ಶಾಸಕ ಪೊನ್ನಣ್ಣನವರಿಗೆ ರಾಜ್ಯಸಭಾ ಸದಸ್ಯ ಅಜಯ್ ಮಾಕನ್ ಅವರ ಆತ್ಮೀಯತೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲು ಅವಕಾಶವಾಗಿದೆ. ಅಲ್ಲದೆ ಕರ್ನಾಟಕ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಈ ಯೋಜನೆಗೆ ಬಿಡುಗಡೆಗೊಳಿಸಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅನುದಾನವು ಈ ಯೋಜನೆಗೆ ಹಂತಹAತವಾಗಿ ಮಂಜೂರಾಗಲಿದೆ.