ಸೋಮವಾರಪೇಟೆ, ಜೂ. ೨೪: ಇಲ್ಲಿನ ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಸಂಸ್ಥೆಯು ಉತ್ತಮ ಕಾರ್ಯಗಳಿಗಾಗಿ ಗೋಲ್ಡ್ ಕ್ಲಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಮೈಸೂರು ರೋಟರಿ ಕ್ಲಬ್ ವತಿಯಿಂದ ನಾರ್ತ್ ಅವೆನ್ಯೂ ಗ್ರೌಂಡ್‌ನಲ್ಲಿ ನಡೆದ ಅನುಬಂಧ ಆವಾರ್ಡ್ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷೆ ವೀಣಾ ಮನೋಹರ್ ಪ್ರಶಸ್ತಿ ಪಡೆದುಕೊಂಡರು. ೨೦೨೫ರಿಂದ ಹನ್ನೆರಡು ತಿಂಗಳುಗಳ ಕಾಲ ತಾಲೂಕಿನಲ್ಲಿ ಕೈಗೊಂಡ ಉತ್ತಮ ಜನಪರ ಕೆಲಸಗಳನ್ನು ಗುರುತಿಸಿ ಈ ಆವಾರ್ಡ್ ನೀಡಿದ್ದಾರೆ. ಜಿಲ್ಲಾ ಪ್ರಾಂತಪಾಲ ರಾಮಕೃಷ್ಣ ಅವರು ಪ್ರಶಸ್ತಿ ವಿತರಿಸಿದರು. ನಿರ್ದೇಶಿತ ಜಿಲ್ಲಾ ಪ್ರಾಂತಪಾಲ ಯಶಸ್ವಿ ಸೋಮಶೇಖರ್, ಮಾಜಿ ಸಹಾಯಕ ಪ್ರಾಂತಪಾಲರಾದ ವಿಕ್ರಂ ದತ್ತ, ಪಿ.ಕೆ.ರವಿ, ಸೋಮವಾರಪೇಟೆ ಕ್ಲಬ್‌ನ ಮುಂದಿನ ಸಾಲಿನ ಅಧ್ಯಕ್ಷ ಬಿ.ಎಸ್.ಸುಂದರ್, ಪದಾಧಿಕಾರಿಗಳಾದ ಎಸ್.ಎಸ್. ಮನೋಹರ್, ಬಿ.ಸಿ ವೆಂಕಟೇಶ್, ಪಿ. ನಾಗೇಶ್ ಮತ್ತಿತರರು ಇದ್ದರು.