ಸುಂಟಿಕೊಪ್ಪ, ಜೂ. ೨೪: ಮುಸ್ಲಿಂ ಸಮುದಾಯದ ನೂತನ ವರ್ಷ ಆಚರಣೆಯ ಮೊಹರಂ ಹಬ್ಬದ ಅಂಗವಾಗಿ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಗಳ ಮುಖಂಡರೊAದಿಗೆ ಸೌಹಾರ್ದ ಸಭೆಯನ್ನು ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ನೇತೃತ್ವದಲ್ಲಿ ನಡೆಸಲಾಯಿತು.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಂಟಿಕೊಪ್ಪ ಪಟ್ಟಣವು ಶಾಂತಿ ಸೌಹರ್ದತೆಯನ್ನು ಹಿಂದಿನಿAದಿಲೂ ಕಾಯ್ದುಕೊಂಡು ಬಂದಿದೆ. ಇದನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಮುಂಜಾಗ್ರತಾ ಕ್ರಮ ವಿಶೇಷ ಬಂದೋಬಸ್ತ್ ಒದಗಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಮೊಹರಂ ಹಬ್ಬವನ್ನು ಆಚರಿಸುವ ವಿಧಾನದ ಬಗ್ಗೆ ಧಾರ್ಮಿಕ ಮುಖಂಡರುಗಳಿAದ ಮಾಹಿತಿ ಪಡೆದುಕೊಂಡರು. ಈ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಎಂದಿನAತೆ ಪ್ರಾರ್ಥನೆ ಮಾತ್ರ ನೆರವೇರಿಸಲಾಗುತ್ತದೆ. ಇದಕ್ಕೆ ಯಾವುದೇ ರೀತಿಯ ವಿಶೇಷತೆಯನ್ನು ನೀಡಲಾಗುವುದಿಲ್ಲ ಎಂದು ಧಾರ್ಮಿಕ ಮುಖಂಡರು ಹೇಳಿದರು.
ಸಭೆಯಲ್ಲಿ ವಿವಿಧ ಧಾರ್ಮಿಕ ಕೇಂದ್ರದ ಮುಖಂಡರುಗಳಾದ, ಹೆಚ್.ಯು. ರಫೀಕ್‌ಖಾನ್, ಕೆ.ಇ. ಕರೀಂ, ಎಂಎ. ಉಸ್ಮಾನ್, ಅದೂಸಾ, ಗರಗಂದೂರು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯೂನಸ್, ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಅಜೀಜ್, ಸುಹೈಲ್, ಫಯಾಜ್, ಶರೀಫ್ ಸೇರಿದಂತೆ ವಿವಿಧ ಗ್ರಾಮದ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.