ಮುಳ್ಳೂರು, ಜೂ. ೨೪ : ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರು ಕ್ರೀಡಾ ಕ್ಷೇತ್ರ ಮತ್ತು ಆಟದ ಮೈದಾನವನ್ನು ಅಭಿವೃದ್ಧಿಪಡಿಸಲು ಹಾಗೂ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ವೈಯಕ್ತಿಕವಾಗಿ ವಾಲಿಬಾಲ್ ಕ್ರೀಡಾ ಅಂಕಣಕ್ಕೆ ಟರ್ಫ್ ಅಳವಡಿಸಲು ಆರ್ಥಿಕ ನೆರವು ನೀಡಿದ್ದಾರೆ.
ಸಮೀಪದ ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಗ್ರಾಮದ ಯುವಕ ಸಂಘದÀ ಆಟದ ಮೈದಾನದಲ್ಲಿ ವಾಲಿಬಾಲ್ ಕ್ರೀಡಾ ಅಂಕಣಕ್ಕೆ ರೂ. ೨ ಲಕ್ಷÀ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಆಸ್ಟೊçà ಟರ್ಫ್ ಅಳವಡಿಕೆ ಮತ್ತು ಅಂಕಣದಲ್ಲಿ ಇಂಟರ್ಲ್ಯಾಕ್ ಅಳವಡಿಸಲು ವೈಯಕ್ತಿಕವಾಗಿ ಹಣ ನೀಡಿದ್ದಾರೆ. ಈಗಾಗಲೇ ಇದರ ಕಾಮಗಾರಿ ನಡೆಯುತ್ತಿದ್ದು, ವಾಲಿಬಾಲ್ ಅಂಕಣಕ್ಕೆ ಆಸ್ಟೊçÃಟರ್ಫ್ ಅಳವಡಿಸುವ ಕಾಮಗಾರಿ ಮುಗಿದಿದ್ದು ಅಂಕಣದಲ್ಲಿ ಇಂಟರ್ಲಾಕ್ ಅಳವಡಿಸುವ ಕಾಮಗಾರಿ ಮಾತ್ರ ಬಾಕಿ ಇದೆ. ಸದ್ಯದಲ್ಲೇ ಮಾಲಂಬಿ ಗ್ರಾಮದ ಯುವಕ ಸಂಘದ ಆಟದ ಮೈದಾನವು ವ್ಯವಸ್ಥಿತ ಮತ್ತು ಆಕರ್ಷಿತ ವಾಲಿಬಾಲ್ ಆಸ್ಟೊçÃಟರ್ಫ್ ಅಂಕಣವಾಗಿ ಸಿದ್ಧವಾಗಲಿದೆ.