ಚೆಯ್ಯಂಡಾಣೆ, ಜೂ. ೨೪: ಭಾರೀ ಗಾಳಿ ಮಳೆಗೆ ಮನೆ ಯೊಂದು ಕುಸಿದು ಬಿದ್ದು ಬಾಲಕ ಪ್ರಾಣಪಾಯ ದಿಂದ ಪಾರಾದ ಘಟನೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಕೀಮಲೆಕಾಡು ಗ್ರಾಮದಲ್ಲಿ ಸಂಭವಿಸಿದೆ. ಕಳೆದ ಸೋಮವಾರ ಗ್ರಾಮದಲ್ಲಿ ಸುರಿದ ಭಾರೀ ಗಾಳಿ, ಮಳೆಗೆ ಗ್ರಾಮದ ನಿವಾಸಿ ಮಂಜುನಾಥ್ ಎಂಬವರ ಮನೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಮನೆ ಕುಸಿದು ಬೀಳುವ ಸಂದರ್ಭ ಮನೆಯಲ್ಲಿದ್ದ ಮಂಜುನಾಥ್ ಪುತ್ರ ರಕ್ಷಿತ್ ಮನೆಯಿಂದ ಹೊರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಜುನಾಥ್ ಹಾಗೂ ಪತ್ನಿ ಮಂಜುಳಾ ಕೆಲಸಕ್ಕೆ ತೆರಳಿದ್ದ ಸಂದರ್ಭ ಈ ಘಟನೆ ಸಂಭವಿಸಿದ್ದು ಅನಾಹುತ ತಪ್ಪಿದಂತಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಅಮೃತ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.