ಐಗೂರು: ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಶಿಕ್ಷಕಿ ಸರಳಕುಮಾರಿ ಯೋಗಾಭ್ಯಾಸದಿಂದ ದೊರಕುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಐಗೂರು: ಐಗೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಸೂರ್ಯ ನಮಸ್ಕಾರ, ಶವಾಸನ, ಭುಜಂಗಾಸನ, ಮತ್ತು ವೃಕ್ಷಾಸನಗಳನ್ನು ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಯಶವಂತ ಕುಮಾರ್, ದೈಹಿಕ ಶಿಕ್ಷಣದ ಶಿಕ್ಷಕ ಕೃಷ್ಣಪ್ಪ, ಶಿಕ್ಷಕ ವೃಂದದ ಜಿ. ಮಂಜುನಾಥ, ರಂಜನಿ, ರೇಖಾ ಎ.ಬಿ. ಭಾಗವಹಿಸಿದ್ದರು.ಕುಶಾಲನಗರ: ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ ಮತ್ತು ಸೋಮಶೇಖರ್ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕುಶಾಲನಗರ: ಕುಶಾಲನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆ ಆಶ್ರಯದಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ದೈಹಿಕ ಶಿಕ್ಷಣ ಅಧಿಕಾರಿ ಚಂದ್ರಾವತಿ, ಮುಖ್ಯ ಶಿಕ್ಷಕರಾದ ಪೆರುಮಾಳ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು. ಶಾಲೆಯ ಶಿಕ್ಷಕ, ಶಿಕ್ಷಕಿಯರು ಇದ್ದರು.ಕುಶಾಲನಗರ: ಕುಶಾಲನಗರ ಫಾತಿಮಾ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ೧೨ನೇ ವರ್ಷದ ಯೋಗ ಕಾರ್ಯಕ್ರಮ ಜರುಗಿತು. ದೈಹಿಕ ಶಿಕ್ಷಣ ಅಧಿಕಾರಿ ಡಾ ಸದಾಶಿವ ಪಲ್ಲೇದ್ ಅವರ ಮಾರ್ಗದರ್ಶನದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಯಾಗಿ ಲಕ್ಷಿö್ಮ ಸದಾಶಿವ ಪಲ್ಲೇದ್, ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಆಗ್ನೆಸ್, ಕರೆಸ್ಪಾಂಡೆನ್ಸ್ ಸಿಸ್ಟರ್ ಫ್ಲೋರೆಟ್, ಆಡಳಿತ ಅಧಿಕಾರಿ ಸಿಸ್ಟರ್ ಅರ್ಪಿತ ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಕರಾದ ಸಂತೋಷ್ ಜಾನ್ಸನ್ ಡೀನ ಮತ್ತು ಶಿಕ್ಷಕರು ಇದ್ದರು.ಕಡಂಗ: ಕಡಂಗದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ದೈಹಿಕ ಶಿಕ್ಷಕ ರೋಹಿತ್ ಮತ್ತು ಯೋಗ ಟ್ರೈನರ್ ಸುಷ್ಮಾರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು. ಯೋಗದ ಕುರಿತು ಮುಖ್ಯ ಶಿಕ್ಷಕಿ ಗೀತಾ ಭೋಜಮ್ಮನವರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯ ಶಿಕ್ಷಕ ಶಿಕ್ಷಕಿಯರು ಯೋಗದಲ್ಲಿ ಪಾಲ್ಗೊಂಡಿದ್ದರು.ಸೋಮವಾರಪೇಟೆ: ಇಲ್ಲಿನ ನಿರಂತರ ಯೋಗ ಕೇಂದ್ರದ ವತಿಯಿಂದ ಮಾನಸ ಸಭಾಂಗಣದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕೇಂದ್ರದ ಶಿಕ್ಷಕ ಗಣೇಶ್ ಅವರು ಯೋಗದ ಮಹತ್ವದ ಬಗ್ಗೆ ವಿವರಿಸಿದರು. ಕೇಂದ್ರದ ಯೋಗಬಂಧುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಸಿದ್ದಾಪುರ: ಇಂಜಲಗರೆ ಎಸ್.ಎನ್.ಡಿ.ಪಿ ವನಿತಾ ಶಾಖೆಯ ವತಿಯಿಂದ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ಇಂಜಲಗರೆಯ ಶಾಖಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮ್ಮತ್ತಿಯ ಯೋಗ ತರಬೇತುದಾರರಾದ ಬೀನಾ ಬೋಪಣ್ಣ ಅವರ ನೇತೃತ್ವದಲ್ಲಿ ಮಹಿಳೆಯರು ಹಾಗೂ ಮಕ್ಕಳು ಯೋಗಾಭ್ಯಾಸ ಮಾಡಿದರು. ಇದೇ ವೇಳೆ ಯೋಗ ಮಾಡುವುದರ ಉಪಯೋಗಗಳ ಕುರಿತು ವಿವರಿಸಲಾಯಿತು. ಈ ಸಂದರ್ಭ ಶಾಖೆಯ ವನಿತಾ ಅಧ್ಯಕ್ಷರಾದ ಅನಿತಾ ರಾಜು, ಕಾರ್ಯದರ್ಶಿ ಅನಿತಾ ಮಣಿಲಾಲ್, ಉಪಾಧ್ಯಕ್ಷೆ ಸಜಿನಿ ಸನು, ಖಜಾಂಚಿ ಧರ್ಮಜ್ ಹಾಜರಿದ್ದರು.ಚೆಟ್ಟಳ್ಳಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆಟ್ಟಳ್ಳಿ ಯಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾದ ಅಶೋಕ, ಮುಖ್ಯ ಶಿಕ್ಷಕರಾದ ರಮಾ ಹಾಗೂ ಶಾಲಾ ಶಿಕ್ಷಕರು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕಡAಗ: ಅರಮೇರಿಯ ಎಸ್.ಎಂ.ಎಸ್. ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್ನಲ್ಲಿ ಯೋಗ ದಿನವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ವೃಕ್ಷಾಸನ, ತಾಡಾಸನ, ಭುಜಂಗಾಸನ, ನೌಕಾಸನ, ವೀರಭದ್ರಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. “ಯೋಗವು ಆತ್ಮದ ಪ್ರಯಾಣ” ಎಂಬ ಸಂದೇಶದೊAದಿಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ ಪ್ರಾಂಶುಪಾಲರಾದ ಬಲ್ಲಚಂಡ ಕುಸುಮ್ ಟಿಟೊ ಅವರು ಯೋಗದ ಮಹತ್ವವನ್ನು ತಿಳಿಸಿ, ಆರೋಗ್ಯಕರ ಜೀವನಕ್ಕಾಗಿ ಯೋಗವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.ಗೋಣಿಕೊಪ್ಪಲು: ಬಾಳೆಲೆ ಹೋಬಳಿಯಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು. ಬಾಳೆಲೆಯ ಹಾಕಿ ಪ್ರೋತ್ಸಾಹಕರ ಬಳಗದ ಒಲಂಪಿಯನ್ ಕರ್ನಲ್ ಬಾಳೆಯಡ ಸುಬ್ರಮಣಿ ಮುಂದಾಳತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಬಾಳೆಲೆ, ನಿಟ್ಟೂರು ಸುತ್ತಮುತ್ತಲಿನ ಗ್ರಾಮಸ್ಥರು ಮುಂಜಾನೆ ಏಳು ಗಂಟೆಗೆ ನಿಟ್ಟೂರು ಜಂಕ್ಷನ್ನಲ್ಲಿ ಸಮಾಗಮಗೊಳ್ಳುವ ಮೂಲಕ ಸುಮಾರು ಮೂರು ಕೀ.ಮೀ.ನಡಿಗೆಯೊಂದಿಗೆ ಬಾಳೆಲೆಯ ವಿಜಯಲಕ್ಷಿö್ಮ ಜೂನಿಯರ್ ಕಾಲೇಜ್ ಆವರಣಕ್ಕೆ ಆಗಮಿಸಿದರು.
ನಂತರ ಮೈದಾನದಲ್ಲಿ ಅಂತರರಾಷ್ಟಿçÃಯ ಯೋಗಪಟು ಅಳಮೇಂಗಡ ಡಾನ್ ರಾಜಪ್ಪ ಯೋಗಾಭ್ಯಾಸದ ಬಗ್ಗೆ ಅರಿವು ಮೂಡಿಸಿದರು. ಈ ವೇಳೆ ಮಾತನಾಡಿದ ಒಲಂಪಿಯನ್ ಕರ್ನಲ್ ಬಾಳೆಯಡ ಸುಬ್ರಹ್ಮಣಿ ಮಾತನಾಡಿ ಪ್ರತಿನಿತ್ಯ ನಮ್ಮ ಜೀವನದಲ್ಲಿ ಯೋಗಾಭ್ಯಾಸ ಅಳವಡಿಸಿಕೊಳ್ಳಲು ಕರೆ ನೀಡಿದರು. ಡಾಕ್ಟರ್ ಮಾಪಂಗಡ ಬೆಳ್ಳಿಯಪ್ಪ ಮಾತನಾಡಿ, ಪ್ರಸ್ತುತ ಪ್ರತಿ ನಾಗರಿಕ ತಮ್ಮ ಆರೋಗ್ಯಕ್ಕೆ ವಹಿಸಬೇಕಾದ ಕಾಳಜಿಗಳ ಬಗ್ಗೆ ತಿಳಿಹೇಳಿದರು. ಕಾರ್ಯಕ್ರಮದಲ್ಲಿ ಮಾಪಂಗಡ ಯಮುನಾ ಚಂಗಪ್ಪ, ಅಳಮೇಂಗಡ ರಮೇಶ್, ಬೋಸ್ ಮಂದಣ್ಣ, ಚಿಮ್ಮಣಮಾಡ ಸುಖ ತಿಮ್ಮಯ್ಯ, ಅಡ್ಡೇಂಗಡ ಗ್ರೀಷ್ಮಾ, ಪೋಡಮಾಡ ದಿವ್ಯ, ಪಡಿಞರಂಡ ಪ್ರಭು ಕುಮಾರ್ ಸೇರಿದಂತೆ ಅನೇಕ ಪಾಲ್ಗೊಂಡಿದ್ದರು.ಮುಳ್ಳೂರು: ಸಮೀಪದ ನಿಡ್ತ ಸರಕಾರಿ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆಯನ್ನು ವಿದ್ಯಾರ್ಥಿಗಳು ಯೋಗ ಅಭ್ಯಾಸ ಮಾಡುವುದರ ಮೂಲಕ ಆಚರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ.ನಳಿನಿ ಯೋಗ ಮಾಡುವುದ್ದರಿಂದ ದೇಹಕ್ಕೆ ಉಂಟಾಗುವ ಪ್ರಯೋಜನಗಳು, ಧ್ಯಾನ ಮಾಡುವುದ್ದರಿಂದ ಜ್ಞಾನ, ಬುದ್ದಿವಂತಿಕೆ ಚುರುಕುಗೊಳ್ಳುವುದು ಮುಂತಾದ ಉಪಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಯೋಗಪಟು ಎ.ಬಿ. ಲಲಿತ ಮಾತನಾಡಿದರು.
ಪ್ರತಿನಿತ್ಯ ಯೋಗ ಮಾಡುವುದರಿಂದ ಶಾರೀರಕ, ಮಾನಸಿಕ, ಬೌದ್ದಿಕ ಹಾಗೂ ಅಧ್ಯಾತ್ಮಿಕವಾಗಿ ನಮ್ಮ ವ್ಯಕ್ತಿತ್ವವನ್ನು ವಿಕಸನವಾಗುತ್ತದೆ. ಯೋಗದ ಮೂಲವನ್ನು ಅರಿತು ವಿದ್ಯಾರ್ಥಿಗಳು ಯೋಗವನ್ನು ಮಾಡುವುದರಿಂದ ಉತ್ತಮ ರೀತಿಯ ಏಕಾಗ್ರತೆ ಪಡೆಯಬಹುದು ಎಂದರು.
ವೇದಿಕೆ ಕಾರ್ಯಕ್ರಮ ನಂತರ ವೀರಾಜಪೇಟೆ ಕಾವೇರಿ ಯೋಗ ಕೇಂದ್ರದ ತರಬೇತುದಾರರಾದ ಸೀತಾರಾಂ ರೈ ಅವರ ಮಾರ್ಗದರ್ಶನದಲ್ಲಿ ಯೋಗಪಟುಗಳಾದ ಎ.ಬಿ. ಲಲಿತಾ, ರತಿಕಲಾ, ರವಿಕಲಾ, ಶೀಲಾ, ಲಿಲ್ಲಿ, ಸೌಜಿತ್, ರಾಗಿಣಿ, ಶಾಂತಲಚAದ್ರ ಅವರು ವೇದಿಕೆ ಮೇಲೆ ವಿವಿಧ ಯೋಗಾಸನ ಪ್ರದರ್ಶಿಸಿ ಕಾಲೇಜು ವಿದ್ಯಾರ್ಥಿಗಳಿಂದಲೂ ಮಾಡಿಸಿದರು.
ಈ ಸಂದರ್ಭ ಎನ್.ಸಿ.ಸಿ ಅಧಿಕಾರಿ ಬೋಜಮ್ಮ, ಎನ್.ಎಸ್.ಎಸ್ ಅಧಿಕಾರಿ ಬಿ.ಬಿ. ಸುನಿಲ್ ಕುಮಾರ್, ದೈಹಿಕ ನಿರ್ದೇಶಕ ತಮ್ಮಯ್ಯ ಇದ್ದರು.ಕೂಡಿಗೆ: ಕೂಡಿಗೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ವಿದ್ಯಾರ್ಥಿಗಳು, ಶಿಕ್ಷಕರ ವೃಂದ, ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳೊಂದಿಗೆ ಜೊತೆಗೂಡಿ ಯೋಗ ಧ್ಯಾನವನ್ನು ಆರಂಭಿಸಿದರು. ಶಾಲಾ ಪ್ರಾಂಶುಪಾಲೆ ಕೆ.ಆರ್. ಭಾರತಿ ಯೋಗ ದಿನಾಚರಣೆಯ ಮಹತ್ವವನ್ನು ವಿವರಿಸಿದರು.ಈ ಸಂದರ್ಭ ಯೋಗ ಶಿಕ್ಷಕ ಸಂಕೇತ, ದೊಡ್ಡಯ್ಯ, ಮಂಜು, ನಾಗೇಂದ್ರ, ಮೇಘ, ಮೀನಾ, ಅಮೃತ, ಹಾಜರಿದ್ದರು.ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಅಂತರಾಷ್ಟಿçÃಯ ಯೋಗದಿನವನ್ನು ಆಚರಿಸಲಾಯಿತು.
ಮುಖ್ಯ ಶಿಕ್ಷಕಿ ಕೆ.ಎಂ. ವಿಮಲ ವಿದ್ಯಾರ್ಥಿಗಳಿಗೆ ಯೋಗ ದಿನದ ಮಹತ್ವವನ್ನು ಯೋಗಾಸನದಿಂದಾಗುವ ಪ್ರಯೋಜನಗಳನ್ನು ತಿಳಿಸಿಕೊಡುವುದರ ಮೂಲಕ ಶೈಕ್ಷಣಿಕ ಸಾಲಿನಲ್ಲಿ ನಿರ್ಧರಿಸಿದ ವಿವಿಧ ಯೋಗಭ್ಯಾಸಗಳನ್ನು ಮಾಡಿಸಿದರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಜಯಪ್ರದ, ಅತಿಥಿ ಶಿಕ್ಷಕಿ ಜಿಜ್ಞ,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ನಾಪೋಕ್ಲು: ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಶ್ರೀ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಭಾನುವಾರ ಆಚರಿಸಲಾಯಿತು.
ರಾಷ್ಟಿçÃಯ ಸ್ವಯಂಸೇವಕ ಸಂಘದ ಪ್ರಮುಖರಾದ ಕಂಗಾAಡ ಜಾಲಿ ಪೂವಪ್ಪ ಅವರು ಯೋಗದ ಮಹತ್ವ, ಅದರ ಆರೋಗ್ಯಕರ ಪ್ರಯೋಜನಗಳು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಯೋಗದ ಪಾತ್ರವನ್ನು ವಿವರಿಸಿ ಮಾರ್ಗದರ್ಶನಮಾಡಿದರು.
ಬಿಜೆಪಿ ಶಕ್ತಿಕೇಂದ್ರದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ. ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಚೆಟ್ಟಳ್ಳಿ : ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಕೆ. ತಿಲಕ ಅವರು ಜ್ಯೋತಿ ಬೆಳಗಿಸಿದರು. ವಿದ್ಯಾರ್ಥಿನಿಯರು ಯೋಗ ಗೀತೆಯನ್ನು ಹಾಡಿದರು.
ಮುಖ್ಯೋಪಾಧ್ಯಾಯರು ಈ ವರ್ಷದ ವಿಶ್ವ ಯೋಗ ದಿನದ ಧ್ಯೇಯವಾಕ್ಯದ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" ಎಂಬುದರ ಬಗ್ಗೆ ತಿಳಿಸಿದರು. ನಿತ್ಯ ಜೀವನದಲ್ಲಿ ಯೋಗದ ಮಹತ್ವವನ್ನು ತಿಳಿಸಿದರು. ನಂತರ ಶಾಲಾ ದೈಹಿಕ ಶಿಕ್ಷಕಿಯಾದ ಗೀತಾ ಎನ್ ಯು. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಯೋಗವನ್ನು ಮಾಡಿದರು. ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.
ಭಾಗವಹಿಸಿದ್ದರು.ಬಲ್ಯಮಂಡೂರು: ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ ನಡೆಯಿತು. ಆರ್ಟ್ ಆಫ್ ಲಿವಿಂಗ್ ನ ಯೋಗ ಗುರುಗಳಾದ ಶಾಂತೆಯAಡ ಮಧು ಮಾಚಯ್ಯನವರು ವಿವಿಧ ಭಂಗಿಯ ಯೋಗದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಮುಖ್ಯ ಶಿಕ್ಷಕಿ ಕೆ.ಪಿ. ಪವಿತ್ರ, ಸಹ ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್, ಮಿಲನ್ ಮಂದಣ್ಣ. ಅಮೋಗ್. ಅನ್ವಯ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.