ಕೂಡಿಗೆ, ಜೂ. ೨೨: ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಖೇತ್ ಬಚಾವೋ ಅಭಿಯಾನ, ಬೀಜೋಪಚಾರ ಆಂದೋಲನ ಹಾಗೂ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವು ತಾ. ೨೩ ರಂದು (ಇಂದು) ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಕಾಫಿ ಬೋರ್ಡ್ ಹಾಗೂ ಸಾಂಬಾರ ಮಂಡಳಿಯ ವಿಜ್ಞಾನಿಗಳು ಪಾಲ್ಗೊಂಡು ಕಾಫಿ, ಕಾಳುಮೆಣಸು, ಏಲಕ್ಕಿ, ಶುಂಠಿ, ಭತ್ತ ಹಾಗೂ ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಸುಧಾರಿತ ಕೃಷಿ ಪದ್ಧತಿ, ಬೆಳೆ ನಿರ್ವಹಣೆ ಹಾಗೂ ತಾಂತ್ರಿಕ ಮಾಹಿತಿಯನ್ನು ನೀಡಲಿದ್ದಾರೆ. ಬೆಳೆಯಲ್ಲಿ ರೋಗ ಅಥವಾ ಕೀಟ ಬಾಧೆ ಕಂಡುಬAದಿದ್ದರೆ, ಸಂಬAಧಿತ ಬೆಳೆಯ ಮಾದರಿಯನ್ನು ತರಲು ರೈತರಿಗೆ ಸೂಚಿಸಲಾಗಿದ್ದು, ವಿಜ್ಞಾನಿಗಳಿಂದ ಸ್ಥಳದಲ್ಲೇ ಸೂಕ್ತ ಸಲಹೆ ಹಾಗೂ ಪರಿಹಾರ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದು ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.