ಕೂಡಿಗೆ, ಜೂ. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ದ್ರವ್ಯ ಕಲಶ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಕೇರಳದ ತಂತ್ರಿ ಬ್ರಹ್ಮಶ್ರೀ ಡಾ. ಶ್ರೀನಾಥ್ ಕಾರಯಾಟ್ ಮತ್ತು ಪಣಿಕರ್ ಅವರ ನೇತೃತ್ವದ ತಂಡದಿAದ ಬೆಳಿಗ್ಗೆ ಮತ್ತು ಸಂಜೆ ದೇವಾಲಯದ ಆವರಣದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಈ ಸಂಧರ್ಭ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಮಹಿಳಾ ಸದಸ್ಯರು, ಗ್ರಾಮದ ಯುವಕರ ಸಂಘಟನೆ, ಗ್ರಾಮ ಸಮಿತಿ ಸೇರಿದಂತೆ ದೇವಾಲಯ ಸಮಿತಿಯ ನಿರ್ದೇಶಕರು, ಗ್ರಾಮಸ್ಥರು ಇದ್ದರು.
ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯವನ್ನು ದೇವಾಲಯ ಸಮಿತಿ ಆಯೋಜನೆ ಮಾಡಲಾಗಿತ್ತು.