ವೀರಾಜಪೇಟೆ, ಜೂ. ೨೧: ಉದ್ಯಮಿಯ ಮನೆಗೆ ನುಗ್ಗಿ ಕೋವಿ ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದ ಆರೋಪದಡಿ ಮೂವರ ವಿರುದ್ಧ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ನಿಸರ್ಗ ಬಡಾವಣೆಯಲ್ಲಿ ತಾ. ೨೦ರ ತಡರಾತ್ರಿ ಕೆ.ಕೆ. ಗ್ರೂಪ್ ಮಾಲೀಕ ಕಾಳಮಂಡ ಜಗತ್ ಅವರ ಮನೆಗೆ ನುಗ್ಗಿ ಕೋವಿಯಿಂದ ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಮೂವರು ಬೆದರಿಕೆಯೊಡ್ಡಿದ್ದಾರೆ ಎಂದು ಜಗತ್ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಕೋವಿಯೊಂದಿಗೆ ವಿ.ಬಾಡಗದ ಕಲನ್, ಟೆರಿನ್, ಸಂಧ್ಯಾ ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.