ಮಡಿಕೇರಿ, ಜೂ. ೨೦: ಮೂರ್ನಾಡು ೩೩/೧೧ ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದ ಕೇಂದ್ರದಿAದ ಹೊರಹೊಮ್ಮುವ ಎಫ್೩ ಮೂರ್ನಾಡು ಫೀಡರ್‌ನಲ್ಲಿ ತಾ.೨೧ ರಂದು ರಾತ್ರಿ ೧೦.೩೦ ರಿಂದ ಬೆಳಿಗ್ಗೆ ೪ ಗಂಟೆಯವರೆಗೆ ಕೊಡಗು ಜಾಲ ಬಲವರ್ಧನೆ ಹಾಗೂ ಮಳೆಗಾಲ ಮುಂಜಾಗ್ರತಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮೂರ್ನಾಡು ಪಟ್ಟಣ, ಮುತ್ತಾರ್‌ಮುಡಿ, ಕುಂಬಳದಾಳು, ಕಿಗ್ಗಾಲು, ಕಬಡಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
* ಮೂರ್ನಾಡು ೩೩/೧೧ ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದ ಕೇಂದ್ರದಿAದ ಹೊರಹೊಮ್ಮುವ ಎಫ್೩ ಮೂರ್ನಾಡು ಫೀಡರ್‌ನಲ್ಲಿ ತಾ. ೨೩ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಕೊಡಗು ಜಾಲ ಬಲವರ್ಧನೆ ಹಾಗೂ ಮಳೆಗಾಲ ಮುಂಜಾಗ್ರತಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಆದ್ದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮೂರ್ನಾಡು ಪಟ್ಟಣ, ಮುತ್ತಾರ್‌ಮುಡಿ, ಕುಂಬಳದಾಳು, ಕಿಗ್ಗಾಲು, ಕಬಡಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.