ನಾಪೋಕ್ಲು, ಜೂ. ೨೦: ಮಲ್ಮ ಬೆಟ್ಟದ ಪರಿಸರ ಕಕ್ಕಬ್ಬೆ, ನೆಲಜಿ ಹಾಗೂ ಪೇರೂರು ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಿಗೆ ಸಂಬAಧಿಸಿದ ಪವಿತ್ರ ನೆಲೆಯಾಗಿದ್ದು ಈ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ವಿವಿಧ ಸ್ಥಳೀಯ ಗ್ರಾಮಸ್ಥರು, ಸಂಘಟನೆಗಳ ಮುಖಂಡರು ಉದ್ಘೋಷಿಸಿದರು. ಇಂತಹ ಚಟುವಟಿಕೆಗಳನ್ನು ತಡೆಯಲು ಮಲ್ಮ ಬಚಾವೋ ಆಂದೋಲನ ಸಮಿತಿ ರಚಿಸಿ ಹೋರಾಟಕ್ಕೆ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ನಿರ್ಣಯಗಳಲ್ಲಿ ಪ್ರಮುಖವಾಗಿ ಉದ್ದೇಶಿತ ವಾಣಿಜ್ಯ ಕಾಮಗಾರಿಗಳನ್ನು ಕೈಗೊಂಡರೆ ಸುತ್ತಮುತ್ತಲ ಗ್ರಾಮಗಳ ಕುಡಿಯುವ ನೀರಿನ ಮೂಲಗಳಿಗೆ ಧಕ್ಕೆ, ಪ್ರವಾಸೋದ್ಯಮಾಧಾರಿತ ಈ ಕಾಮಗಾರಿಗಳಿಂದ ಗ್ರಾಮಗಳಲ್ಲಿ ಭೂಕುಸಿತವಾಗುವ ಸಂಭವ, ಪರಿಸರ ಮಾಲಿನ್ಯ, ಕೃಷಿ ಚಟುವಟಿಕೆೆಗಳಿಗೆ ತೊಂದರೆ ಹಾಗೂ ಪವಿತ್ರ ಮಲ್ಮ ಬೆಟ್ಟ ಮತ್ತು ಶ್ರೀ ಇಗ್ಗುತ್ತಪ್ಪ ದೇವಾಲಯಗಳ ಸನಿಹದ ಈ ಕಾಮಗಾರಿಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಂಟಾಗುವುದರಿAದ ವಿರೋಧಿಸುತ್ತಿರುವುದಾಗಿ ಪ್ರಕಟಿಸಲಾಯಿತು. ಈ ಸಂದರ್ಭ ತೆಗೆದುಕೊಂಡ ಈ ನಿರ್ಣಯಗಳಿಗೆ ಸಭೆಯಲ್ಲಿದ್ದ ಮಂದಿ ಕೈ ಎತ್ತುವುದರ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಇಗ್ಗುತಪ್ಪ ದೇವಸ್ಥಾನದ ಮಲ್ಮ ಬೆಟ್ಟ ಜಾಗ ವಿವಾದಕ್ಕೆ ಸಂಬAಧಿಸಿದAತೆ ಬಲ್ಲಮಾವಟಿ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಟ್ಟ ವಿಶೇಷ ಗ್ರಾಮಸಭೆಯಲ್ಲಿನ ಗ್ರಾಮಸ್ಥರ ನಿರ್ಣಯದ ಪ್ರತಿಯನ್ನು ಉನ್ನತಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಬಲ್ಲಮಾವಟಿ ಪಂಚಾಯಿತಿ ಆಡಳಿತಾಧಿಕಾರಿ, ಗಣಿ ಇಲಾಖೆ ಅಧಿಕಾರಿ ರಾಹುಲ್ ಎಂ.ಎಸ್. ಹೇಳಿದರು. ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಂದಾಯ ಅಧಿಕಾರಿ ರವಿಕುಮಾರ್ ಪ್ರತಿಕ್ರಿಯಿಸಿ ಮಲ್ಮ ಪರಿಸರದಲ್ಲಿ ಕಾನೂನು ಮೀರಿ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಂಡಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆಯಿತ್ತರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಪೂಣಚ್ಚ ಮಾತನಾಡಿ ನೆಲಜಿ ಗ್ರಾಮದ ಶ್ರಿ ಇಗ್ಗುತ್ತಪ್ಪ ದೇವಸ್ಥಾನದ ಹಾಗೂ ಮಲ್ಮ ಬೆಟ್ಟದ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಂಬAಧಿಸಿದAತೆ ನಡೆಯುತ್ತಿರುವ ಕಾಮಗಾರಿಯ ವಿರುದ್ಧ ಗ್ರಾಮಸ್ಥರು ಕೈಗೊಂಡ ನಿರ್ಣಯವನ್ನು ಮೇಲಧಿಕಾರಿಗಳಿಗೆ ಸಲ್ಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಮಲ್ಮದಿಂದ ಮಡಿಕೇರಿಗೆ ಪಾದಯಾತ್ರೆ

ಸಭೆಯಲ್ಲಿ ಭಾಗವಹಿಸಿದ ಪುಲಿಕೋಟು ಗ್ರಾಮದ ಕೋಟೆ ಭಗವತಿ ದೇವಾಲಯದ ಅಧ್ಯಕ್ಷ ಕರವಂಡ ಲವ ನಾಣಯ್ಯ ಮಾತನಾಡಿ ಮಲ್ಮ ಬೆಟ್ಟದ ಪರಿಸರ ಕಕ್ಕಬ್ಬೆ, ನೆಲಜಿ ಹಾಗೂ ಪೇರೂರು ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಿಗೆ ಸಂಬAಧಿಸಿದ ಪವಿತ್ರ ನೆಲೆಯಾಗಿದ್ದು ಇಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಪ್ರವಾಸೋದ್ಯಮ ಸೇರಿದಂತೆ ಇತರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಮಲ್ಮ ತಪ್ಪಲಿನಲ್ಲಿ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಬಲವಂತದಿAದ ಅಂತಹ ಚಟುವಟಿಕೆಗಳನ್ನು ಕೈಗೊಂಡಲ್ಲಿ ಮಲ್ಮದಿಂದ ಮಡಿಕೇರಿಗೆ ಪಾದಯಾತ್ರೆ ನಡೆಸಿ ನಿರಂತರ ಹೋರಾಟ ಕೈಗೊಳ್ಳಲಾಗುವುದು ಎಂದು ಘೋಷಿಸಿದರು. ಯಾವ ಕಾರಣಕ್ಕೂ ಮಲ್ಮಬೆಟ್ಟದ ತಪ್ಪಲಿನಲ್ಲಿ ನಡೆಯುವ ವಾಣಿಜ್ಯ ಸಂಕೀರ್ಣ ಕಾರ್ಯಕ್ಕೆ ಎನ್.ಓ.ಸಿ ಸೇರಿದಂತೆ ಯಾವುದೇ ಅನುಮತಿ ಕೊಡಬಾರದು. ಜಿಲ್ಲೆಯ ಜನತೆಯ ಅಸ್ಮಿತೆಗೆ ಧಕ್ಕೆತರುವ ಚಟುವಟಿಕೆ ಮುಂದುವರಿದಲ್ಲಿ ಯಾವುದೇ ತರದ ಹೋರಾಟಕ್ಕೆ ಗ್ರಾಮಸ್ಥರು ಸಿದ್ದವಿರಬೇಕೆಂದು ಕರೆಯಿತ್ತರು.

ಬಲ್ಲಮಾವಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ಮಾತನಾಡಿ, ಎಲ್ಲರೂ ಪಕ್ಷಾತೀತವಾಗಿ ಈ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದರು. ಈ ವಿಶೇಷ ಗ್ರಾಮ ಪಂಚಾಯಿತಿ ಸಭೆಯಲ್ಲಿ ಗ್ರಾಮಸ್ಥರು ಇಗ್ಗುತ್ತಪ್ಪ ಸನ್ನಿಧಿಯ ಮೂಲ ಸಂಸ್ಕೃತಿಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಯ ವಿರುದ್ಧ ಒಮ್ಮತದ ನಿರ್ಣಯ ಕೈಗೊಳ್ಳಬೇಕಿದೆ. ಸರ್ಕಾರೀ ಮಟ್ಟದಲ್ಲಿ ಭೂ ಪರಿವರ್ತನೆಗೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಅವಕಾಶ ಕಲ್ಪಿಸದಂತೆ ಒತ್ತಾಯ ಹೇರಬೇಕು ಎಂದು ಆಗ್ರಹಿಸಿದರು.

ಪಂಚಾಯಿತಿ ಮಾಜಿ ಸದಸ್ಯ ಮಚ್ಚುರ ರವೀಂದ್ರ ಮಾತನಾಡಿ ಆಧುನಿಕ ಯಂತ್ರಗಳ ಮೂಲಕ ಮಲ್ಮ ಬೆಟ್ಟದ ಸುತ್ತಲಿನ ಪರಿಸರದ ಪ್ರಕೃತಿ ನಾಶವಾಗುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಗುತ್ತಿದೆ. ಈ ಹಿಂದೆ ನೆಲಜಿ ಗ್ರಾಮದಲ್ಲಿ ಮೂರು ದೇವಾಲಯಗಳ ಸಮಿತಿ ಸದಸ್ಯರು ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಗ್ರಾಮಸ್ಥರ ಸಭೆ ನಡೆಸಿ ಇದರ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ ಎಂದರು. ಇಲ್ಲಿನ ಜಲಮೂಲಕ್ಕೆ ಸಮಸ್ಯೆ ಆಗುತ್ತಿದೆ. ಆ ಮೂಲಕ ನೆಲಜಿ ಹಾಗೂ ಕುಂಜಿಲ ಗ್ರಾಮಗಳ ಜನತೆ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವಂತಾಗುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು

ಭೂ ಕುಸಿತದ ಅಪಾಯ .

ಅಖಿಲ ಕೊಡವ ಸಮಾಜದ ಅಧ್ಯಕ್ಷ, ಪಾಡಿ ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ ಕಳೆದ ವರ್ಷ ಕೇರಳದ ವೈನಾಡಿನಲ್ಲಿ ಭೂಕುಸಿತ ಉಂಟಾಗಿತ್ತು. ಅದೇ ರೀತಿ ಮಲ್ಮ ಬೆಟ್ಟ ಆಗುವುದು ಬೇಡ. ಮಲ್ಮ ಬೆಟ್ಟದ ಜಲಮೂಲಕ್ಕೆ ಧಕ್ಕೆ ಆದಲ್ಲಿ ಜುಲೈ- ಆಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಸುರಿವ ಸಂದರ್ಭ ಮತ್ತೊಮ್ಮೆ ಭೂಕುಸಿತಕ್ಕೆ ನಾವೇ ಎಡೆ ಮಾಡಿಕೊಟ್ಟಂತಾಗುತ್ತದೆ ಪ್ರಾಕೃತಿಕ ಅತ್ಯಾಚಾರವನ್ನು ತಡೆಗಟ್ಟಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸರ್ವೆ ಮಾಡಿ ದುರಂತವನ್ನು ತಪ್ಪಿಸಬೇಕಾಗಿದೆ. ಮಲ್ಮ ಬಚಾವೋ ವಿಶೇಷ ಆಂದೋಲನ ಸಮಿತಿಯನ್ನು ರಚಿಸಬೇಕಾಗಿದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಮಾತನಾಡಿ, ಇಗ್ಗುತಪ್ಪ ದೇವಾಲಯ ಕೊಡಗಿಗೆ ಮಾತ್ರ ಸಂಬAಧಿಸಿದ್ದಲ್ಲ ;ಇಡೀ ರಾಜ್ಯಕ್ಕೆ ಸಂಬAಧಿಸಿದೆ. ಮಲ್ಮ ಬೆಟ್ಟದ ಪರಿಸರದ ಬಳಿ ದೊಡ್ಡ ಕೆರೆಯನ್ನು ನಿರ್ಮಿಸಿದ್ದಾರೆ. ಇದರಿಂದ ಜಲಮೂಲಕ್ಕೆ ಧಕ್ಕೆಯಾಗಲಿದೆ. ಮುಂದೆÉ ಇಲ್ಲಿ ಶೌಚಾಲಯವೂ ನಿರ್ಮಾಣಗೊಳ್ಳಬಹುದು! ಯಾವುದೇ ಕಾರಣಕ್ಕೂ ಜಾಗ ಪರಭಾರೆ ಮಾಡಬಾರದು. ಒಂದು ಮನೆ ಕಟ್ಟಬೇಕಾದರೆ ಮರ ಕಡಿಯಲು ಜನಸಾಮಾನ್ಯರಿಗೆ ಹತ್ತಾರು ಕಾನೂನುಗಳಿವೆ .ಇಲ್ಲಿ ಅರಣ್ಯನಾಶ ಆಗಿದೆ, ಇವರಿಗೆ ಕಾನೂನು ಇಲ್ಲವೇ? ಎಂದು ಪ್ರಶ್ನಿಸಿದರು. ಈ ಜಾಗವು ಯಾವುದೇ ಕಾರಣಕ್ಕೆ ಆರ್‌ಟಿಸಿಗೆ ಬಾರದಂತೆ ನೋಡಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಎ,ಕೆ. ಮನು ಮುತ್ತಪ್ಪ ಮಾತನಾಡಿ ಜಾಗವನ್ನು ಮಾರಾಟ ಮಾಡಿದ್ದು ತಪ್ಪು. ಗ್ರಾಮಸ್ಥರು ಒಟ್ಟಾಗಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದಾರೆ. ವಾಣಿಜ್ಯ ಉದ್ದೇಶಕ್ಕಾಗಿ ಜಾಗ ಬಳಕೆ ಆಗದಂತೆ ವಿಶೇಷ ನಿರ್ಣಯ ಕೈಗೊಳ್ಳಬೇಕು ಎಂದರು.

ನೆರವAಡ ಉಮೇಶ್ ಮಾತನಾಡಿ, ಊರಿನ ಕಟ್ಟುಪಾಡುಗಳನ್ನು ನಾಡಿನ ಜನ ಪಾಲಿಸುತ್ತಿದ್ದಾರೆ. ಇದು ಧಾರ್ಮಿಕ ವಿಚಾರ. ಜನರ ಆಚಾರ-ವಿಚಾರ ಸಂಸ್ಕೃತಿಗೆ ಧಕ್ಕೆಯಾಗದಂತೆ ವಿಶೇಷ ಗ್ರಾಮಸಭೆ ನಿರ್ಣಯ ಕೈಗೊಂಡಿದ್ದು ಈ ನಿರ್ಣಯಕ್ಕೆ ಆಡಳಿತಾಧಿಕಾರಿ ಸಹಿ ಮಾಡಿ ನೀಡಬೇಕು ಎಂದರು.

ಚೀಯಕಪೂವಂಡ ಮುತ್ತಪ್ಪ, ಅಚ್ಚಂಡಿರ ಕುಶಾಲಪ್ಪ ಇನ್ನಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದರು.

ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸ್ಥಳೀಯರು ,ಸುತ್ತಮುತ್ತಲ ಗ್ರಾಮಸ್ಥರು ಭಾಗಿಯಾಗಿದ್ದರು.

-ದುಗ್ಗಳ ಸದಾನಂದ.