ಮಡಿಕೇರಿ, ಜೂ. ೨೦: ಕೊಡಗು ಜಿಲ್ಲೆಯ ಸೂಕ್ಷö್ಮ ಪರಿಸರ ವಲಯದಲ್ಲಿ ಕಾನೂನುಬಾಹಿರವಾಗಿ ನಿಯಂತ್ರಣವಿಲ್ಲದೆ ನಡೆಯುತ್ತಿರುವ ವ್ಯಾಪಕ ಪರಿಸರ ನಾಶದ ವಿರುದ್ಧ, ಚೆನ್ನೆöÊನಲ್ಲಿರುವ ರಾಷ್ಟಿçÃಯ ಹಸಿರು ನ್ಯಾಯಾಧೀಕರಣ (ದಕ್ಷಿಣ ವಲಯ ಪೀಠ)ಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ದೂರು ನೀಡಿದೆ. ಮಿಂಚAಚೆ ಮೂಲಕ ಅಧಿಕೃತ ದೂರು ದಾಖಲಿಸಿರುವ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕೊಡಗಿನಲ್ಲಿ ನಡೆಯುತ್ತಿರುವ ಅವ್ಯಾಹತ ಪರಿಸರ ನಾಶ ತಡೆಯಲು ತಕ್ಷಣ ಮಧ್ಯ ಪ್ರವೇಶಿಸಿ, ತಡಯಾಜ್ಞೆ ನೀಡುವುದಲ್ಲದೆ, ಅಕ್ರಮದಾರರು, ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲೆಯ ಅತ್ಯಂತ ಸೂಕ್ಷö್ಮ ಪರಿಸರ ವಲಯವಾದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸದ್ಯ ನಡೆಯುತ್ತಿರುವ ತೀವ್ರ, ಅವೈಜ್ಞಾನಿಕ ಮತ್ತು ವ್ಯವಸ್ಥಿತ ಪರಿಸರ ನಾಶದ ಬಗ್ಗೆ ನ್ಯಾಯಾಧೀಕರಣದ ತುರ್ತು ಗಮನ ಸೆಳೆಯಲು ಪ್ರಯತ್ನಿಸಿರುವ ಸಂಘಟನೆಯು, ಇತ್ತೀಚೆಗೆ ಮಲ್ಮ ಕುಂದ್ ಪ್ರಕರಣವು ಒಂದು ಉದಾಹರಣೆಯಾಗಿದ್ದು, ಇಂತಹದೇ ಹಲವಾರು ಅನಧಿಕೃತ ವಾಣಿಜ್ಯ ಚಟುವಟಿಕೆಗಳು ಜಿಲ್ಲೆಯಾದ್ಯಂತ ಅವಿಶ್ರಾಂತವಾಗಿ ನಡೆಯುತ್ತಿದ್ದು, ಭೂಕುಸಿತ ಮತ್ತು ಪ್ರಾದೇಶಿಕ ಜಲಕ್ಷಾಮದ ಭೀತಿಯನ್ನು ಒಡ್ಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನೆಲಜಿ ಗ್ರಾಮದ ಸರ್ವೆ ನಂಬರ್ ೨೮೬ರ ನಿರ್ದಿಷ್ಟ ಸ್ಥಳದಲ್ಲಿ ಮತ್ತು ಕೊಡಗು ಜಿಲ್ಲೆಯಾದ್ಯಂತ ನಿಯಮ ಬಾಹಿರವಾಗಿ ನಡೆಯುತ್ತಿರುವ ಎಲ್ಲಾ ರೀತಿಯ ಅವೈಜ್ಞಾನಿಕ ಗುಡ್ಡ ಕಡಿಯುವಿಕೆ, ಮಣ್ಣು ಅಗೆಯುವಿಕೆ ಮತ್ತು ವಾಣಿಜ್ಯ ಕಾಮಗಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ತಡೆಯಲು (IಒಒಇಆIಂಖಿಇಐಙ SಖಿಔP) ಮಧ್ಯಂತರ ತಡೆಯಾಜ್ಞೆಯನ್ನು ನೀಡಬೇಕು. ಕೊಡಗು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಾದ ಹೊಣೆಗಾರಿಕೆ ವಹಿಸಿ, ಜಿಲ್ಲೆಯಾದ್ಯಂತ ಪರಿಸರ ಅನುಮತಿ ಇಲ್ಲದೆ ನಡೆಯುತ್ತಿರುವ ಇಂತಹ ಎಲ್ಲಾ ವಾಣಿಜ್ಯ/ಪ್ರವಾಸೋದ್ಯಮ ಯೋಜನೆಗಳ ಕುರಿತು ಸಮಗ್ರ ಮತ್ತು ಕಾಲಮಿತಿಯ ತನಿಖಾ ವರದಿಯನ್ನು ಸಲ್ಲಿಸುವಂತೆ ಆದೇಶಿಸಬೇಕು. ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಏSPಅಃ) ತಕ್ಷಣವೇ ಈ ನಿಯಮ ಉಲ್ಲಂಘನೆಗಳ ಬಗ್ಗೆ ವಸ್ತುಸ್ಥಿತಿ ಪರಿಶೀಲನೆ ನಡೆಸಿ, ಪರಿಸರ ಹಾನಿಯ ಮೌಲ್ಯಮಾಪನ ವರದಿ ಸಲ್ಲಿಸಲು ನಿರ್ದೇಶಿಸಬೇಕು. ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳನ್ನು ರಕ್ಷಿಸಲು ಮತ್ತು ದಕ್ಷಿಣ ಭಾರತದ ನೀರಿನ ಭದ್ರತೆಯನ್ನು ಕಾಯ್ದುಕೊಳ್ಳಲು ಈ ಗೌರವಾನ್ವಿತ ನ್ಯಾಯಾಧಿಕರಣವು ಸೂಕ್ತವೆಂದು ಭಾವಿಸುವ ಯಾವುದೇ ಇತರ ಆದೇಶ ಅಥವಾ ನಿರ್ದೇಶನಗಳನ್ನು ನೀಡಬೇಕು ಎಂದು ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಿದ್ದಾರೆ. ೪ಏಳನೇ ಪುಟಕ್ಕೆ

ಮಡಿಕೇರಿ: ಕೊಡವರ ಪುರಾತನ ಧಾರ್ಮಿಕ ಮೂಲ ಕೇಂದ್ರವಾಗಿರುವ ಪಾಡಿ ಇಗ್ಗುತಪ್ಪ ನೆಲೆಯ ಮಲ್ಮ ಕುಂದ್ ಪ್ರದೇಶದ ಪಾವಿತ್ರö್ಯತೆ ಹಾಗೂ ಪರಿಸರಕ್ಕೆ ಧಕ್ಕೆಯಾಗುತ್ತಿರುವ ಬೆಳವಣಿಗೆಗಳ ವಿರುದ್ಧ ಮಡಿಕೇರಿ ಕೊಡವ ಸಮಾಜ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಮಲ್ಮ ಕುಂದ್ ಪ್ರದೇಶವು ಕೊಡವ ಸಮುದಾಯದ ಧಾರ್ಮಿಕ ನಂಬಿಕೆ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಅದರ ಪಾವಿತ್ರ‍್ಯ ಮತ್ತು ನೈಸರ್ಗಿಕ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಮಲ್ಮ ಕುಂದ್ ಪ್ರದೇಶದ ಸಂರಕ್ಷಣೆಗಾಗಿ ಆ ಊರಿನವರು ಹಾಗೂ ನಾಡಿನವರು ನಡೆಸುತ್ತಿರುವ ಹೋರಾಟಕ್ಕೆ ಮಡಿಕೇರಿ ಕೊಡವ ಸಮಾಜ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಜಬ್ಬೂಮಿ ಚಾರಿಟೆಬಲ್ ಟ್ರಸ್ಟ್

ಮಡಿಕೇರಿ: ಶ್ರೀ ಪಾಡಿ ಇಗ್ಗುತ್ತಪ್ಪ ಕ್ಷೇತ್ರದ ಮಲ್ಮ ಕುಂದ್ (ಬೆಟ್ಟ)ನ ರಕ್ಷಣೆಗೆ ಜಬ್ಬೂಮಿ ಚಾರಿಟೆಬಲ್ ಟ್ರಸ್ಟ್ ಬದ್ಧವಾಗಿದೆ. ಅಲ್ಲದೆ ಸ್ಥಳೀಯ ಗ್ರಾಮಸ್ಥರ ನೇತೃತ್ವದ ಯಾವುದೇ ಹೋರಾಟಕ್ಕೂ ಸಿದ್ಧವಾಗಿದೆ ಎಂದು ಟ್ರಸ್ಟ್ ನ ಸಂಚಾಲಕÀ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಮಲ್ಮ ಕುಂದ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿರುವ ಅವರು ಪಾಡಿ ಶ್ರೀ ಇಗ್ಗುತ್ತಪ್ಪ ಕ್ಷೇತ್ರಕ್ಕೆ ಧಕ್ಕೆ ಬಂದರೆ ಇಡೀ ಕೊಡವ ಹಾಗೂ ಕೊಡವ ಭಾಷಿಕ ಜನಾಂಗಕ್ಕೆ ಧಕ್ಕೆ ಬಂದ ಹಾಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನ ಸಮಿತಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ತೆಗೆದುಕೊಳ್ಳುವ ನಿರ್ಣಯಕ್ಕೆ ಮತ್ತು ಹೋರಾಟದ ನಿರ್ಧಾರಕ್ಕೆ ಜಬ್ಬೂಮಿ ಚಾರಿಟೆಬಲ್ ಟ್ರಸ್ಟ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ. ಕೊಡಗು ಜಿಲ್ಲೆ ಅತ್ಯಂತ ಸೂಕ್ಷö್ಮ ಪ್ರದೇಶವಾಗಿದೆ, ಈ ಬಗ್ಗೆ ಅರಿವಿದ್ದರೂ ಇಲ್ಲಿನ ಪರಿಸರದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಪರಿಸರ ರಕ್ಷಣೆಯ ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ಭೂ ಪರಿವರ್ತನೆ ಮಾಡಿ ದೊಡ್ಡ ದೊಡ್ಡ ರೆಸಾರ್ಟ್ ಗಳನ್ನು ಮತ್ತು ಲೇಔಟ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಪರಿಸರಕ್ಕೆ ಹಾಗೂ ಸ್ಥಳೀಯ ಮೂಲನಿವಾಸಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಎಂದು ಅವರು ಹೇಳಿದ್ದಾರೆ.ಶ್ರೀ ಇಗ್ಗುತ್ತಪ್ಪ ಮೂಲಕ್ಕೆ ಧಕ್ಕೆ ಅಕ್ಷಮ್ಯ

ನಾಪೋಕ್ಲು: ಕೊಡಗು ಜಿಲ್ಲೆಯ ಮಳೆ ಬೆಳೆಯ ಆದಿದೇವ ಎಂಬ ನಂಬಿಕೆಯ ಶ್ರೀ ಇಗ್ಗುತ್ತಪ್ಪ ದೇವರ ಮೂಲಸ್ಥಾನ ಮಲ್ಮಕುಂದ್ ವ್ಯಾಪ್ತಿಯಲ್ಲಿ ಅನಧಿಕೃತ ಕಾಮಗಾರಿಯೊಂದಿಗೆ ದೈವಿಕ ಶಕ್ತಿಯ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಉಂಟು ಮಾಡುವದು ಅಕ್ಷಮ್ಯ ಎಂದು ಸೋಮನಾಥಾನಂದಪುರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಲ್ಮಕುಂದ್ ಪರಿಸರದಲ್ಲಿ ಸ್ಥಳೀಯರೂ ಸೇರಿದಂತೆ ಶ್ರೀ ಇಗ್ಗುತ್ತಪ್ಪ ದೇವರ ಕಾರ್ಯಕ್ರಮ ಅಥವಾ ಪರಂಪರೆಯ ಕಟ್ಟುಪಾಡು ಹೊರತು ಬೇರೆ ಯಾವುದೇ ರೀತಿಯ ಚಟುವಟಿಕೆಗಳು ನಡೆಯದಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ನಾಪೋಕ್ಲು ಕೊಡವ ಸಮಾಜ

ನಾಪೋಕ್ಲು: ಪಾಡಿ ಶ್ರೀ ಇಗ್ಗುತಪ್ಪ ದೇವನೆಲೆಯಾದ ಮಲ್ಮ ಬೆಟ್ಟದಲ್ಲಿ ಇತ್ತೀಚೆಗೆ ಖಾಸಗಿ ವ್ಯಕ್ತಿಗಳು ಜಾಗವನ್ನು ಖರೀದಿಸಿದ್ದು, ಈ ಜಾಗದಲ್ಲಿ ಪರಿಸರಕ್ಕೆ ವಿರುದ್ಧವಾದ ಮತ್ತು ಶ್ರೀ ಇಗ್ಗುತಪ್ಪ ದೇವರ ನೆಲೆಯಾದ ಪಾವಿತ್ರö್ಯತೆಗೆ ಧಕ್ಕೆ ಬರುವಂತಹ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಈ ಪರಿಸರದಲ್ಲಿ ಕೈಗೊಳ್ಳುವುದನ್ನು ವಿರೋಧಿಸಿ ಶುಕ್ರವಾರ ಇಲ್ಲಿಯ ಕೊಡವ ಸಮಾಜದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ ಮತ್ತು ಈ ವಿಚಾರವಾಗಿ ಸಮಾಜವು ಊರಿನವರ, ನಾಡಿನವರ ಬೆಂಬಲಕ್ಕೆ ಸದಾ ನಿಲ್ಲುವುದಲ್ಲದೆ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ನಾಪೋಕ್ಲು ಕೊಡವ ಸಮಾಜ ತಿಳಿಸಿದೆ.