ಗೋಣಿಕೊಪ್ಪಲು, ಜೂ. ೨೦ : ೨೦೨೭ನೇ ಸಾಲಿನಲ್ಲಿ ಪ್ರತಿಷ್ಠಿತ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಆತಿಥ್ಯವನ್ನು ಅಜ್ಜಿಕುಟ್ಟಿರ ಕುಟುಂಬ ವಹಿಸಿದ್ದು, ಇದರ ಅಂಗವಾಗಿ ಗೋಣಿಕೊಪ್ಪಲುವಿನಲ್ಲಿ ಕುಟುಂಬದ ಪ್ರಮುಖರು ಪೂರ್ವಭಾವಿ ಸಭೆಯನ್ನು ನಡೆಸಿದರು.

ಅಧ್ಯಕ್ಷತೆಯನ್ನು ಹಾಕಿ ನಮ್ಮೆ ಅಧ್ಯಕ್ಷ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ವಹಿಸಿದ್ದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾತನಾಡಿ, ಮುಂದಿನ ಸಾಲಿನಲ್ಲಿ ಅತ್ಯಂತ ವೈಭವದೊಂದಿಗೆ ವಿಜೃಂಭಣೆಯಿAದ ಹಾಕಿ ನಮ್ಮೆ ನಡೆಸುವ ನಿಟ್ಟಿನಲ್ಲಿ ಹಲವು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.

ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಮಾತನಾಡಿ, ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸುವ ಕುಟುಂಬದ ಸರ್ವ ಸದಸ್ಯರುಗಳು ಕೈ ಜೋಡಿಸುವಂತೆ ಮನವಿ ಮಾಡಿದರು. ಕೊಡವ ಹಾಕಿ ಅಕಾಡೆಮಿಯ ಸಹಭಾಗಿತ್ವದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಎಲ್ಲರ ಸಹಕಾರ, ಒಮ್ಮತದ ಅಭಿಪ್ರಾಯ ಅಗತ್ಯವೆಂದರು.

ಸಭೆಯಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಕಾರ್ಯಾಧ್ಯಕ್ಷ ಒಲಿಂಪಿಯನ್ ಸಿ.ಎಸ್. ಪೂಣಚ್ಚ, ನಿರ್ದೇಶಕರಾದ ಕುಲ್ಲೇಟಿರ ಬೇಬಾ, ಅಜ್ಜಿಕುಟ್ಟಿರ ಕೌಟುಂಬಿಕ ಹಾಕಿ ನಮ್ಮೆಯ ಹಿರಿಯ ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.