ಗೋಣಿಕೊಪ್ಪಲು, ಜೂ. ೧೯: ರಸ್ತೆ ಎಂದರೆ ಸಾರ್ವಜನಿಕರ ಸಂಚಾರಕ್ಕೆ ಮೀಸಲಾದ ಸ್ಥಳ. ಆದರೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿತಿಮತಿ-ಕೋಣನಕಟ್ಟೆ-ಬಾಳೆಲೆ ರಸ್ತೆಯಲ್ಲಿ ಪರಿಸ್ಥಿತಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಕಾಫಿ ತೋಟಗಳಲ್ಲಿ ಕಡಿದ ಸಿಲ್ವರ್ ಸೇರಿದಂತೆ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ರಸ್ತೆ ಬದಿಯಲ್ಲೇ ಅಡ್ಡಾದಿಡ್ಡಿಯಾಗಿ ದಾಸ್ತಾನು ಮಾಡಿರುವುದರಿಂದ ವಾಹನ ಸವಾರರು, ಪಾದಚಾರಿಗಳು ಹಾಗೂ ಶಾಲಾ ಮಕ್ಕಳು ನಿತ್ಯ ಅಪಾಯದ ನಡುವೆ ಸಂಚರಿಸುವAತಾಗಿದೆ.
ತಿತಿಮತಿ ಸರ್ಕಾರಿ ಪ್ರೌಢಶಾಲೆ ಸಮೀಪ ವಿವಿಧ ತೋಟಗಳಿಂದ ತರಲಾಗುವ ಟಿಂಬರ್ ಮರಗಳನ್ನು ನಿರಂತರವಾಗಿ ರಸ್ತೆ ಬದಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಇದೇ ಸ್ಥಳದಿಂದ ಪ್ರತಿನಿತ್ಯ ಭಾರೀ ಲಾರಿಗಳಿಗೆ ಮರಗಳನ್ನು ಕ್ರೇನ್‌ಗಳ ಮೂಲಕ ಲೋಡ್ ಮಾಡಿ ಸಾಗಿಸಲಾಗುತ್ತಿದ್ದು, ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಮರ ಮಾರಾಟಗಾರರು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ರಸ್ತೆಯನ್ನೇ ತಮ್ಮ ದಾಸ್ತಾನು ಕೇಂದ್ರವನ್ನಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಸ್ತೆ ಪಕ್ಕದಲ್ಲೇ ಭಾರೀ ವಾಹನಗಳು ಹಾಗೂ ಕ್ರೇನ್‌ಗಳ ಮೂಲಕ ಮರಗಳನ್ನು ಲೋಡ್ ಮಾಡುವ ಕಾರ್ಯ ನಡೆಯುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಆತಂಕವೂ ಎದುರಾಗಿದೆ.
ರಸ್ತೆಯ ಬಹುಭಾಗವನ್ನು ಮರದ ದಿಮ್ಮಿಗಳು ಆಕ್ರಮಿಸಿಕೊಂಡಿರುವುದರಿAದ ವಾಹನಗಳು ಸಂಚರಿಸಲು ಜಾಗದ ಕೊರತೆ ಉಂಟಾಗಿದೆ. ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡುವಂತಾಗಿದೆ. ಪ್ರತಿದಿನ ಇದೇ ರಸ್ತೆಯಲ್ಲಿ ಶಾಲೆಗೆ ಹೋಗುತ್ತೇವೆ. ರಸ್ತೆ ಬದಿಯಲ್ಲೇ ಮರದ ದಿಮ್ಮಿಗಳನ್ನು ರಾಶಿ ಹಾಕಿದ್ದು, ಕ್ರೇನ್‌ಗಳಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಲೋಡ್ ಮಾಡುವ ಕೆಲಸ ನಡೆಯುತ್ತಿರುತ್ತದೆ. ಇಲ್ಲಿ ಅಪಘಾತ ಸಂಭವಿಸಿದರೆ ಯಾರು ಹೊಣೆ? ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಬದಿಯಲ್ಲಿರುವ ಮರದ ದಿಮ್ಮಿಗಳನ್ನು ತೆರವುಗೊಳಿಸುವುದರ ಜೊತೆಗೆ, ಸಾರ್ವಜನಿಕ ರಸ್ತೆಯನ್ನು ದಾಸ್ತಾನು ಕೇಂದ್ರವನ್ನಾಗಿ ಬಳಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. - ಹೆಚ್.ಕೆ. ಜಗದೀಶ್