ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಜೂ. ೧೮: ಕೊಡಗು ಜಿಲ್ಲೆಯ ಪ್ರಮುಖ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಒಂದಾದ ವೀರಾಜಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಾವಿರಾರು ಜನರು ಅವಲಂಬಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಮೂಲಸೌಕರ್ಯ ವಿಸ್ತರಣೆಯ ಕೆಲಸಗಳು ನಡೆಯುತ್ತಿದ್ದರೂ, ತಜ್ಞ ವೈದ್ಯರ ಕೊರತೆ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳ ಅಭಾವದಿಂದ ಸಾರ್ವಜನಿಕರು ಸಮರ್ಪಕ ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ.
ಆಸ್ಪತ್ರೆಯಲ್ಲಿ ಒಟ್ಟು ೧೭ ವೈದ್ಯರು ಕರ್ತವ್ಯ ನಿರ್ವಹಿಸಬೇಕಿದ್ದರೂ, ಪ್ರಸ್ತುತ ಕೇವಲ ೮ ಮಂದಿ ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಪ್ರತಿದಿನ ನೂರಾರು ಹೊರರೋಗಿಗಳು ಹಾಗೂ ಒಳರೋಗಿಗಳಿಗೆ ಚಿಕಿತ್ಸೆ ನೀಡುವ ಜವಾಬ್ದಾರಿ ಅಲ್ಪ ಸಂಖ್ಯೆಯ ವೈದ್ಯರ ಮೇಲಿದೆ. ಆಸ್ಪತ್ರೆಯಲ್ಲಿ ಸ್ತಿçÃರೋಗ ತಜ್ಞರು, ಮಕ್ಕಳ ತಜ್ಞರು, ರೇಡಿಯಾಲಜಿಸ್ಟ್, ಕಣ್ಣಿನ ತಜ್ಞರು ಹಾಗೂ ಅರವಳಿಕೆ ತಜ್ಞರ ಕೊರತೆ ಎದ್ದುಕಾಣುತ್ತಿದೆ. ಪರಿಣಾಮವಾಗಿ ಗಂಭೀರ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಮಡಿಕೇರಿ, ಮೈಸೂರು, ಸುಳ್ಯ ಹಾಗೂ ಮಂಗಳೂರಿನ ಆಸ್ಪತ್ರೆಗಳತ್ತ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ, ಸ್ಕಾö್ಯನಿಂಗ್ ಹಾಗೂ ಎಂಆರ್‌ಐ ಸೌಲಭ್ಯಗಳ ಕೊರತೆಯಿಂದ ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ರೋಗಿಗಳು ಅಮೂಲ್ಯ ಸಮಯ ಮತ್ತು ಹಣ ಎರಡನ್ನೂ ಕಳೆದುಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ಆಸ್ಪತ್ರೆಯ ಕಟ್ಟಡಗಳು ಅಭಿವೃದ್ಧಿಯಾಗಿದ್ದರೂ, ಒಳಗೆ ತಜ್ಞ ವೈದ್ಯರು, ಸಿಬ್ಬಂದಿ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ವಾರಾಂತ್ಯ ಮತ್ತು ಸರ್ಕಾರಿ ರಜೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ಕೆಲವೊಮ್ಮೆ ಒಬ್ಬ ವೈದ್ಯರೇ ಇಡೀ ಆಸ್ಪತ್ರೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದ ತುರ್ತು ಚಿಕಿತ್ಸೆಗೆ ಬರುವವರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮೇಲೂ ಹೆಚ್ಚಿನ ಕೆಲಸದ ಒತ್ತಡ ಉಂಟಾಗಿದೆ.
ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಸುಮಾರು ೭೦ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೂ, ಪೂರ್ಣ ಪ್ರಮಾಣದ ನೆಫ್ರಾಲಜಿ ವಿಭಾಗ ಇಲ್ಲ. ತುರ್ತು ಚಿಕಿತ್ಸೆಗೆ ಅಗತ್ಯವಾದ ಪೂರ್ಣ ಪ್ರಮಾಣದ ರಕ್ತನಿಧಿ ಸೌಲಭ್ಯವೂ ಇಲ್ಲದಿರುವುದು ಗರ್ಭೀಣಿಯರು ಸೇರಿದಂತೆ ತುರ್ತು ರೋಗಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳ ನಿರ್ವಹಣೆಯ ಜವಾಬ್ದಾರಿಯೂ ಸೀಮಿತ ಸಂಖ್ಯೆಯ ಟೆಕ್ನಿಷಿಯನ್‌ಗಳ ಮೇಲಿದೆ.
ವೀರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿನ ಈ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಶಾಸಕರು, ಆಸ್ಪತ್ರೆ ರಕ್ಷಾ ಸಮಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತುರ್ತು ಗಮನಹರಿಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲವಾದರೆ ವೀರಾಜಪೇಟೆ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರಿಗೆ ಗುಣಮಟ್ಟದ ಸರ್ಕಾರಿ ಆರೋಗ್ಯ ಸೇವೆ ಕನಸಾಗಿಯೇ ಉಳಿಯುವ ಆತಂಕ ವ್ಯಕ್ತವಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರು ಲಭ್ಯ ಇರುತ್ತಾರೆ. ಉತ್ತಮ ಚಿಕಿತ್ಸೆ ಲಭಿಸುತ್ತದೆ ಎಂಬ ಕಾರಣದಿಂದ ದೂರದ ಗ್ರಾಮಗಳಿಂದ ರೋಗಿಗಳು ಆಗಮಿಸುತ್ತಾರೆ. ಆದರೆ ಆಸ್ಪತ್ರೆಗೆ ಬಂದ ನಂತರ ತಜ್ಞ ವೈದ್ಯರ ಕೊರತೆಯಿಂದ ಅನಿವಾರ್ಯವಾಗಿ ದೂರದ ಆಸ್ಪತ್ರೆಗಳಿಗೆ ತೆರಳುತ್ತೇವೆ. ಇದರಿಂದಾಗಿ ಹಣ ಹಾಗೂ ಸಮಯ ವ್ಯರ್ಥವಾಗುತ್ತಿದೆ. ವೈದ್ಯರು ಪೂರ್ಣ ಪ್ರಮಾಣದಲ್ಲಿ ಇದ್ದಲ್ಲಿ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ದಾಖಲಾಗಿದ್ದ ಒಳರೋಗಿಯೊಬ್ಬರು ಹೇಳಿಕೊಳ್ಳುತ್ತಾರೆ.
ಶಸ್ತçಚಿಕಿತ್ಸಾ ವಿಭಾಗ, ದಂತ ಚಿಕಿತ್ಸೆ ಹಾಗೂ ಹೊಸದಾಗಿ ನೇಮಕವಾಗಿರುವ ಕಣ್ಣಿನ ತಜ್ಞರ ಸೇವೆ ನಿರೀಕ್ಷೆ ಮಾಡಲಾಗುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಡಗಳಿಗಿಂತ ಮುಖ್ಯವಾಗಿ ಆಸ್ಪತ್ರೆಗೆ ವೈದ್ಯರು ಬೇಕು ಎಂಬುವುದು ನಾಗರಿಕರ ಬಹುದೊಡ್ಡ ಬೇಡಿಕೆಯಾಗಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ, ತಜ್ಞ ವೈದ್ಯರನ್ನು ನೇಮಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ಮಾತ್ರ ವೀರಾಜಪೇಟೆಯ ಈ ಸಾರ್ವಜನಿಕ ಆಸ್ಪತ್ರೆ ನಿಜವಾದ ಅರ್ಥದಲ್ಲಿ ಜನಸಾಮಾನ್ಯರ ಆಶಾಕಿರಣವಾಗಲಿದೆ. ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ಮುಂದುವರೆಯುತ್ತಲೇ ಇವೆ. ತಜ್ಞ ವೈದ್ಯರ ನೇಮಕಾತಿಗೆ ಪ್ರಕ್ರಿಯೆ ಮುಂದುವರೆಯುತ್ತಿದೆ. ಲಭ್ಯವಿರುವ ವೈದ್ಯರಿಂದ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಗಳು ಲಭಿಸುತ್ತಿದೆ. ಹಂತ ಹಂತವಾಗಿ ವೈದ್ಯರ ನೇಮಕಾತಿಗಳು ನಡೆಯಲಿದೆ.
- ಎ.ಎಸ್. ಪೊನ್ನಣ್ಣ, ಶಾಸಕ ವೀರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ಪ್ರತಿದಿನ ನೂರಾರು ಹೊರರೋಗಿಗಳು ಆಗಮಿಸುತ್ತಾರೆ. ಒಳರೋಗಿಗಳಾಗಿ ಚಿಕಿತ್ಸೆಯು ಪಡೆಯುತ್ತಿದ್ದಾರೆ. ಮಕ್ಕಳ ವೈದ್ಯರ ಕೊರತೆ, ರೆಡಿಯೋಲಾಜಿಸ್ಟ್, ಅರವಳಿಕೆ ತಜ್ಞರು, ಮೂಳೆ ತಜ್ಞರ ಕೊರತೆ ಇದ್ದರೂ ಲಭ್ಯವಿರುವ ವೈದ್ಯರು ಹೆಚ್ಚಿನ ಶ್ರಮ ವಹಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಲಭ್ಯವಿರುವ ವೈದ್ಯರು ವಿವಿಧ ಪಾಳಿಯಲ್ಲಿ ತಮ್ಮ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸ್ಕಾö್ಯನಿಂಗ್, ಯಂತ್ರೋಪಕರಣ ನಿರ್ವಹಣೆಯ ಸಮಸ್ಯೆಯಿದ್ದು, ಮುಂದೆ ಈ ಸಮಸ್ಯೆಗೆ ಪರಿಹಾರ ಲಭಿಸುವ ಸಾಧ್ಯತೆ ಇದೆ.
ಡಾ. ವಿಶ್ವನಾಥ್ ಪಿ. ಸಿಂಪಿ, ಸರ್ಜನ್,
ತಾಲೂಕು ಆಸ್ಪತ್ರೆ, ವೀರಾಜಪೇಟೆ