ವಾಷಿಂಗ್ಟನ್ ಡಿಸಿ, ಜೂ. ೧೮: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಇದೀಗ ಅಧಕೃತ ಸಹಿ ಬಿದ್ದಿದೆ. ಮಧ್ಯಪ್ರಾಚ್ಯದಲ್ಲಿ ಸುದೀರ್ಘ ಸಂಘರ್ಷದಲ್ಲಿ ನಿರತವಾಗಿದ್ದ ಅಮೆರಿಕ ಮತ್ತು ಇರಾನ್ ಕೊನೆಗೂ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಂಡಿವೆ. ಈ ಕುರಿತ ತಿಳುವಳಿಕೆ ಪತ್ರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಪ್ರತ್ಯೇಕವಾಗಿ ಸಹಿ ಹಾಕಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಕಾರಣವಾದ ೧೪ ಪ್ರಮುಖ ಅಂಶಗಳನ್ನು ಈ ಒಪ್ಪಂದ ಒಳಗೊಂಡಿದೆ.

ಅಮೆರಿಕ-ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಔಪಚಾರಿಕ ಸಹಿ ಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ರಾನ್ಸ್ನಲ್ಲಿ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಟೆಹ್ರಾನ್ನಲ್ಲಿ ಈ ಶಾಂತಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ.

ಈ ಒಪ್ಪಂದದಲ್ಲಿರುವ ೧೪ ಅಂಶಗಳು ಹೀಗಿವೆ

೧. ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳಿಗೆ ತಕ್ಷಣದ ಮತ್ತು ಶಾಶ್ವತವಾದ ಅಂತ್ಯಕ್ಕೆ ಅಮೆರಿಕ ಮತ್ತು ಇರಾನ್ ಒಪ್ಪಿಗೆ. ೨. ಶಾಂತಿ ಒಪ್ಪಂದ ಜಾರಿಯಾಗುತ್ತಿದ್ದಂತೇ ಇರಾನ್ ತನ್ನ ಜಾಗತಿಕ ತೈಲ ರಫ್ತು ಪ್ರಕ್ರಿಯೆಯನ್ನು ಪುನರಾರಂಭಿಸಬಹುದು. ೩. ಇರಾನ್ ಪರ್ಷಿಯನ್ ಕೊಲ್ಲಿಯಿಂದ ಓಮನ್ ಸಮುದ್ರಕ್ಕೆ ೬೦ ದಿನಗಳವರೆಗೆ ಯಾವುದೇ ಶುಲ್ಕವಿಲ್ಲದೆ ವಾಣಿಜ್ಯ ಹಡಗುಗಳ ಸುರಕ್ಷಿತ ಸಾಗಣೆಗೆ ಅನುಮತಿ ನೀಡುತ್ತದೆ. ೪. ಅಮೆರಿಕ ಮತ್ತು ಪ್ರಾದೇಶಿಕ ಪಾಲುದಾರರು ಇರಾನ್ ಮರುನಿರ್ಮಾಣಕ್ಕಾಗಿ ೩೦೦ ಬಿಲಿಯನ್ ಡಾಲರ್ ಆರ್ಥಿಕ ನೆರವು ಒದಗಿಸಲು ಸಮ್ಮತಿ. ೫. ಇರಾನ್ ಪರಮಾಣು ಶಸ್ತಾçಸ್ತçಗಳನ್ನು ಖರೀದಿಸುವುದಿಲ್ಲ ಅಥವಾ ಅಭಿವೃದ್ಧಿಪಡಿಸುವುದಿಲ್ಲ ಎಂದು ದೃಢಪಡಿಸಿದೆ. ೬. ದಾಸ್ತಾನು ಮಾಡಿರುವ ಪುಷ್ಟೀಕರಿಸಿದ ಯುರೇನಿಯಂ ವಿಲೇವಾರಿಯನ್ನು ಪರಿಹರಿಸಲು ಒಪ್ಪಿಗೆ. ೭. ಪರಮಾಣು ಅನುಸರಣೆಗೆ ಸಂಬAಧಿಸಿದ ಅಂತಿಮ ಒಪ್ಪಂದದ ಭಾಗವಾಗಿ, ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳನ್ನು ನಿಗದಿತ ಸಮಯದಲ್ಲಿ ತೆಗೆದುಹಾಕಲಾಗುತ್ತದೆ. ೮. ಅಂತಿಮ ಒಪ್ಪಂದಕ್ಕೆ ಸಹಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹಾಕಲು ೬೦ ದಿನಗಳ ಕಾಲಾವಕಾಶವಿರುತ್ತದೆ. ಅದನ್ನು ಎರಡೂ ಕಡೆಯವರು ವಿಸ್ತರಿಸಲು ಒಪ್ಪಿಕೊಳ್ಳಬಹುದು. ೯. ಅಮೆರಿಕ ಮತ್ತು ಇರಾನ್ ಪರಸ್ಪರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲು ಮತ್ತು ಪರಸ್ಪರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಲು ಕ್ರಮ. ೧೧. ಹಾರ್ಮುಜ್ ಜಲಸಂಧಿಯಲ್ಲಿನ ಇರಾನ್ ಮಿಲಿಟರಿ ದಿಗ್ಬಂಧನ ಮತ್ತು ಈ ಪ್ರದೇಶದಲ್ಲಿ ಹುದುಗಿಟ್ಟಿರುವ ನೆಲಬಾಂಬ್ ತೆರವುಗೊಳಿಸಲು ೩೦ ದಿನಗಳ ಕಾಲಾವಕಾಶ. ೧೨. ಪರಮಾಣು ಕಾರ್ಯಕ್ರಮದಲ್ಲಿ ಪ್ರಸ್ತುತ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಇರಾನ್ ಒಪ್ಪಿಗೆ. ೧೩. ಇರಾನ್ ಅಂತರರಾಷ್ಟಿçÃಯ ಆಸ್ತಿಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸಲು ಅಮೆರಿಕ ಒಪ್ಪಿಗೆ. ೧೪. ಶಾಂತಿ ಒಪ್ಪಂದ ಜಾರಿಯಾಗುವವರೆಗೆ ಮಧ್ಯಪ್ರಾಚ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಅಮೆರಿಕ ಮತ್ತು ಇರಾನ್ ಒಪ್ಪಿಗೆ.