ಪೊನ್ನಂಪೇಟೆ, ಜೂ. ೧೮: ತಾ. ೨೧ ರಂದು ನಡೆಯಲಿರುವ ಅಂತರ ರಾಷ್ಟಿçÃಯ ಯೋಗ ದಿನಾಚರಣೆಯ ಅಂಗವಾಗಿ ಅಂತರರಾಷ್ಟಿçÃಯ ಯೋಗ ತರಬೇತುದಾರ ಅಮೃತ್ ರಾಕೇಶ್ ಅವರು ಪೊನ್ನಂಪೇಟೆ ತಾಲೂಕಿನ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಕಳೆದ ಒಂದು ವಾರದಿಂದ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ ಸೇರಿದಂತೆ ಸರಳ ಯೋಗಾಸನಗಳನ್ನು ಅಮೃತ್ ರಾಕೇಶ್ ಅವರು ಕಲಿಸಿಕೊಡುತ್ತಿದ್ದಾರೆ. ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಲು ಯೋಗ ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿ, ಪ್ರತಿನಿತ್ಯ ಯೋಗ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ.
ಮಾದಕ ವಸ್ತುಗಳ ವಿರುದ್ಧ ಜಾಗೃತಿ
ಯೋಗ ತರಬೇತಿಯ ಜೊತೆಗೆ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ. ಇಂದಿನ ಯುವಪೀಳಿಗೆ ದಾರಿ ತಪ್ಪಲು ಮಾದಕ ವಸ್ತುಗಳು ಪ್ರಮುಖ ಕಾರಣ. ಯೋಗದ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ದುಶ್ಚಟಗಳಿಂದ ದೂರವಿರಬಹುದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ, ಗೋಣಿಕೊಪ್ಪಲು ಸರ್ಕಾರಿ ಶಾಲೆ, ಪೊನ್ನಂಪೇಟೆ ಅಪ್ಪಚ್ಚು ಕವಿ ಶಾಲೆ, ಸಿಐಟಿ ಕಾಲೇಜು, ಸಾಯಿಶಂಕರ್ ಶಾಲೆ, ಸರ್ವದೈವತಾ, ರೂಟ್ಸ್ ಶಾಲೆ, ಗೋಣಿಕೊಪ್ಪ ಕಾಪ್ಸ್, ಲಯನ್ಸ್ ಶಾಲೆಗಳಲ್ಲಿ ಈಗಾಗಲೇ ಯೋಗ ತರಬೇತಿ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಇವರ ಕಾರ್ಯಕ್ಕೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೃತ್ ರಾಕೇಶ್ ಅವರೊಂದಿಗೆ ಧರ್ಮಸ್ಥಳ ಶಾಂತಿವನದ ವೈದ್ಯರು, ಸಂಪೂರ್ಣ ಸ್ವಾಸ್ಥö್ಯ ಯೋಗ ಕೇಂದ್ರದ ನಿರ್ದೇಶಕ ಸೋಮಯ್ಯ ಕೆ.ಕೆ, ಯೋಗ ಅರ್ಜುನ ಪ್ರಶಸ್ತಿ ವಿಜೇತೆ ದೈಹಿಕ ಶಿಕ್ಷಕಿ ಅಲೀಮಾ ಪಿ.ಹೆಚ್ ಈ ಕಾರ್ಯಕ್ರಮದಲ್ಲಿ ಕೈಜೋಡಿಸುತ್ತಿದ್ದಾರೆ.