ಮಡಿಕೇರಿ, ಜೂ. ೧೭: ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿ.ಐ.ಡಿ. ಅರಣ್ಯ ಸಂಚಾರಿ ದಳ ಬಂಧಿಸಿದೆ.

ತಾ. ೧೬ ರಂದು ಮಡಿಕೇರಿ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ಮಡಿಕೇರಿ ನಗರದ ಕನ್ನಂಡ ಪಡೆಬೀರ ವೃತ್ತದ ಬಳಿ ಇರುವ ಬಸ್ ತಂಗುದಾಣದಲ್ಲಿ ಇಬ್ಬರು ವ್ಯಕ್ತಿಗಳು ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಸಂಜೆ ೬.೩೦ ಗಂಟೆಗೆ ದಾಳಿ ಮಾಡಿ ಇಬ್ಬರು ಆರೋಪಿಗಳಾದ ಕಾಸರಗೋಡು ಮಡಿಕೈನ ಸಿ.ಕೆ. ಶ್ರೀಧರನ್ ಹಾಗೂ ಕಾಸರಗೋಡು ಜಿ.ಕೆ. ನಗರದ ವಿಷ್ಣು ಆಚಾರ್ಯ ಎಂಬವರುಗಳನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಬೆಂಗಳೂರು ಸಿ.ಐ.ಡಿ. ಅರಣ್ಯ ಘಟಕದ ಪೊಲೀಸ್ ಉಪ ಮಹಾನಿರೀಕ್ಷಕರಾದ ಜಿ. ಸಂಗೀತಾ ಮತ್ತು ಮಡಿಕೇರಿ ಸಿ.ಐ.ಡಿ. ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್ ನೆಜ್ಜೂರು ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಶಿವಶಂಕರ್ ಹಾಗೂ ಸಿಬ್ಬಂದಿಗಳಾದ ಎನ್.ಕೆ. ಉಮೇಶ್, ಕೆ.ಪಿ. ಶನಂತ, ಹೆಚ್.ಎಸ್. ದಿವ್ಯಶ್ರೀ ಮತ್ತು ಎಂ. ಸ್ವಾಮಿ ಪಾಲ್ಗೊಂಡಿದ್ದರು.

ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಗೆ ಸಂಬAಧಪಟ್ಟ ಅಕ್ರಮ ಚಟುವಟಿಕೆಗಳು ಕಂಡುಬAದಲ್ಲಿ ೯೪೮೦೮೦೦೨೨೦, ೮೨೭೭೯೪೯೮೧೨ ದೂರವಾಣಿಗೆ ಮಾಹಿತಿ ನೀಡುವಂತೆ ಸಿ.ಐ.ಡಿ. ಅರಣ್ಯ ಘಟಕದ ಪ್ರಕಟಣೆ ತಿಳಿಸಿದೆ.