ಕಡಂಗ, ಜೂ. ೧೭: ನಿನ್ನೆ ಕೇರಳಕ್ಕೆ ತೆರಳುವ ಸಂದರ್ಭ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಜಿಂಕೆ ಮರಿಯೊಂದು ಅರಣ್ಯ ಇಲಾಖೆಯ ಕಚೇರಿ ಗೇಟ್‌ನಲ್ಲಿ ಸಿಲುಕಿ ಗಾಯಗೊಂಡು ರೋಧಿಸುತ್ತಿರುವುದನ್ನು ಕಂಡ ಕಡಂಗದ ಗ್ರಾಮಸ್ಥರಾದ ಝಕರಿಯ, ಸಹದ್, ಶಫೀಕ್ ಅವರುಗಳು ಅರಣ್ಯ ಇಲಾಖೆಯ ಸಿಬ್ಬಂದಿಗೆ ಈ ಬಗ್ಗೆ ತಿಳಿಸಿ ಅವರೊಂದಿಗೆ ಜಿಂಕೆಮರಿಯನ್ನು ರಕ್ಷಿಸಿದರು.