ಮಡಿಕೇರಿ, ಜೂ. ೧೭: ಹೋಂಸ್ಟೇ ಮಾಲೀಕರು ಸರಕಾರದ ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಮಡಿಕೇರಿ ಡಿವೈಎಸ್‌ಪಿ ಸೂರಜ್ ಹೇಳಿದರು.

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಹೋಂಸ್ಟೇ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹೋಂಸ್ಟೇ ಮಾಲೀಕರು ಕಾರ್ಮಿಕರ ಮಾಹಿತಿಯನ್ನು ಕಡ್ಡಾಯವಾಗಿ ಪಡೆದು ಸಂಬAಧಿಸಿದ ಇಲಾಖೆಗೆ ಕಳುಹಿಸಿಕೊಡಬೇಕು. ಸಂಬAಧಿಸಿದ ಇಲಾಖೆಗಳಿಂದ ಕಾಲಾ ಕಾಲಕ್ಕೆ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು. ಮುಖ್ಯವಾಗಿ ಪ್ರವಾಸಿಗರ ಸಾವಿಗೆ ಕಾರಣವಾಗುತ್ತಿರುವ ಗ್ಯಾಸ್ ಗೀಸರ್‌ಗಳನ್ನು ಬಳಸಬಾರದು, ಬಳಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿವೈಎಸ್ಪಿ ಸೂರಜ್ ಎಚ್ಚರಿಸಿದರು.

ಪ್ರವಾಸಿಗರ ಭದ್ರತೆ ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಹೋಂಸ್ಟೇ ಮಾಲಿಕರು ಜವಾಬ್ದಾರಿಯಿಂದ ನಿಯಮಗಳನ್ನು ಪಾಲಿಸಬೇಕು. ೩ ತಿಂಗಳ ಸಿಸಿಟಿವಿ ಫುಟೇಜ್‌ಗಳನ್ನು ಕಡ್ಡಾಯವಾಗಿ ಭದ್ರವಾಗಿಡಬೇಕು ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಸಮಾಲೋಚಕ ಜತಿನ್ ಮಾತನಾಡಿ, ಸರಕಾರದ ಪ್ರವಾಸೋದ್ಯಮ ಇಲಾಖೆಯ ನಿಯಮದಂತೆ ಪರವಾನಗಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ತೊಂದರೆಯಾಗದAತೆ ಎಚ್ಚರ ವಹಿಸುವುದು ಹೋಂಸ್ಟೇ ಮಾಲೀಕರ ಜವಾಬ್ದಾರಿಯಾಗಿದೆ. ಹೋಂಸ್ಟೇ ನಡೆಸಲು ಸರಕಾರ ಬಿಡುಗಡೆಗೊಳಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಹಂತಗಳಲ್ಲಿಯೂ ಮಾಲೀಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ, ಆರಂಭದಲ್ಲಿ ಹೋಂಸ್ಟೇ ಪರವಾನಗಿ ಪಡೆದು ನಂತರ ಹೆಚ್ಚುವರಿ ಕೊಠಡಿಗಳನ್ನು ಸೇರಿಸಿಕೊಳ್ಳುವ ಮೂಲಕ ಕೆಲವರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದರು.

ಮಾಂದಲ್‌ಪಟ್ಟಿ - ಖಾಸಗಿ ವಾಹನಗಳಿಗೆ ಮುಕ್ತ ಅವಕಾಶ

ಮಡಿಕೇರಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಮಾತನಾಡಿ, ಮಾಂದಲ್‌ಪಟ್ಟಿ ಪ್ರವಾಸಿ ತಾಣಕ್ಕೆ ತೆರಳಲು ಖಾಸಗಿ ವಾಹನಗಳಿಗೆ ಮುಕ್ತ ಅವಕಾಶವಿದ್ದುö, ಸ್ಥಳೀಯರು ಮತ್ತು ಪ್ರವಾಸಿಗರ ವಾಹನಗಳನ್ನು ತಡೆದು ಜೀಪಿನಲ್ಲೇ ತೆರಳಬೇಕೆಂದು ಬಲವಂತ ಮಾಡುವಂತಿಲ್ಲ. ಮಾಂದಲ್‌ಪಟ್ಟಿ ಜೀಪ್‌ಗಳು ಎಲ್ಲಿ ಜೀಪ್ ಸ್ಟಾಂಡ್ ಇದೆಯೋ ಅಲ್ಲಿಂದಲೇ ಬಾಡಿಗೆ ಹೋಗಬೇಕು. ಪ್ರವಾಸಿಗರಿಗೆ ಸಮಸ್ಯೆಯಾದರೆ ನ್ಯಾಷನಲ್ ಟೂರಿಸ್ಟ್ ಹೆಲ್ಪ್ ಲೈನ್ ೧೮೦೦ ೧೧೧೩೬೩ ಸಹಾಯ ಪಡೆಯಬಹುದು. ಹೋಂಸ್ಟೇಗಳಲ್ಲಿ ಎಲ್ಲಾ ರೀತಿಯ ಸಹಾಯವಾಣಿ ಸಂಖ್ಯೆಗಳನ್ನು ಪ್ರವಾಸಿಗರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಹೋಂಸ್ಟೇ ಮಾಲೀಕರು, ಮತ್ತಿತರ ಪ್ರಮುಖರು ಹಾಜರಿದ್ದರು.