ವೀರಾಜಪೇಟೆ, ಜೂ. ೧೭: ವೀರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಆಹಾರ ಪ್ಯಾಕೆಟ್‌ಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ ಪ್ರವಾಸಿಗರ ಗುಂಪನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಇತ್ತೀಚೆಗೆ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಗುಂಪೊAದು ಕಾಕೋಟುಪರಂಬುವಿನ ಹಸಿರು ವಲಯದಲ್ಲಿ ಪಾರ್ಟಿ ಮಾಡಿ, ತ್ಯಾಜ್ಯವನ್ನು ಅಲ್ಲೇ ಬಿಟ್ಟು ತೆರಳಿದೆ.

ಸ್ಥಳೀಯರು ಇದನ್ನು ಗಮನಿಸಿ ಪ್ರವಾಸಿಗರನ್ನು ತಡೆದು ನಿಲ್ಲಿಸಿ, ಕಸವನ್ನು ಸ್ವಚ್ಛಗೊಳಿಸಿ ಎಂದು ಆಗ್ರಹಿಸಿದ್ದಾರೆ. ಕಾರಿನ ಸುತ್ತ ಕಸದ ರಾಶಿ ಬಿದ್ದಿರುವ ವೀಡಿಯೋ ಈಗ ವೈರಲ್ ಆಗಿದೆ.

ಈ ಬಗ್ಗೆ ವೀರಾಜಪೇಟೆ ತಹಶೀಲ್ದಾರ್ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದು ಶಿಕ್ಷಾರ್ಹ ಅಪರಾಧ. ರೂ. ೫೦೦ ರಿಂದ ೫೦೦೦ ವರೆಗೆ ದಂಡ ವಿಧಿಸಬಹುದು. ಪ್ರವಾಸಿಗರಿಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಆರಂಭಿಸುತ್ತೇವೆ ಎಂದರು.