ಗೋಣಿಕೊಪ್ಪಲು, ಜೂ. ೧೭: ಐಜಿಪಿ ಪತ್ನಿ ಸಂಧ್ಯಾ ಅವರನ್ನು ಬಲಿ ತೆಗೆದುಕೊಂಡಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಸತತ ಪ್ರಯತ್ನ ಮುಂದುವರಿಸಿದ್ದು, ಕೂಂಬಿAಗ್ ಕಾರ್ಯಾಚರಣೆ ಕಳೆದ ೧೪ ದಿನಗಳಿಂದ ನಡೆಯುತ್ತಿದೆ. ಆದರೆ ಆನೆಯ ಸುಳಿವು ಮಾತ್ರ ಇನ್ನೂ ಲಭಿಸಿಲ್ಲ. ಡ್ರೋನ್ ಮೂಲಕ ಕಾಡಾನೆ ಪತ್ತೆಗೆ ಪ್ರಯತ್ನಿಸಿದರೂ ಎಲ್ಲಿಯೂ ಕೂಡ ಕಾಡಾನೆ ಪತ್ತೆಯಾಗಿಲ್ಲ.
ಇಲಾಖೆಯ ನಾಲ್ಕು ತಂಡಗಳು ವಿವಿಧ ದಿಕ್ಕಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರೂ ಕಾಡಾನೆ ಕಂಡುಬರುತ್ತಿಲ್ಲ. ಈಗಾಗಲೇ ಘಟನೆ ನಡೆದ ಕೋಣನಕಟ್ಟೆ ಭಾಗದ ರೈತರ ತೋಟಗಳಿಗೆ, ತೋಟಕ್ಕೆ ಹೊಂದಿಕೊAಡಿರುವ ಅರಣ್ಯ ಪ್ರದೇಶದಲ್ಲಿ ಕೂಂಬಿAಗ್ ಕಾರ್ಯಾಚರಣೆ ನಡೆಸಲಾಗಿದೆ.
ಬಲ್ಲಮೂಲಗಳ ಪ್ರಕಾರ ಕಾಡಾನೆಯು ಘಟನಾ ಸ್ಥಳದಿಂದ ಅನತಿ ದೂರದ ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಅದೇ ದಿನ ತೆರಳಿರಬಹುದೆಂದು ಊಹಿಸಲಾಗಿದೆ. ಕೆಲವು ಆನೆಗಳ ಹಿಂಡು ಸುತ್ತಮುತ್ತಲಿನಲ್ಲಿ ಕಾಣಸಿಗುತ್ತಿದ್ದರೂ ಅರಣ್ಯ ಇಲಾಖೆಗೆ ಬೇಕಾದ ಕಾಡಾನೆ ಮಾತ್ರ ಯಾರ ಕಣ್ಣಿಗೂ ಬೀಳುತ್ತಿಲ್ಲ. ತಿತಿಮತಿ ಅರಣ್ಯ ವಲಯದ ಗಂಗಾಧರ್ ಹಾಗೂ ವೈಲ್ಡ್ ಲೈಫ್ನ ದೇವರಾಜ್ ಸೇರಿದಂತೆ ಇನ್ನಿತರ ಸಿಬ್ಬಂದಿ ಕೂಂಬಿAಗ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
- ಹೆಚ್.ಕೆ. ಜಗದೀಶ್