ಶನಿವಾರಸಂತೆ, ಜೂ. ೧೭: ಸಮೀಪದ ಮಾಲಂಬಿ ಗ್ರಾಮ ದೇವತಾ ದೇವಾಲಯ ಪುನರ್ ಪ್ರತಿಷ್ಠಾಪನೆಯಾಗಿ ೪೮ ದಿನ ಕಳೆದ ನಂತರ ಮಂಗಳವಾರ ರಾತ್ರಿ ದೇವರ ಗುಡಿಯಲ್ಲಿ ಮಳೆ ಹಾಗೂ ಬೆಳೆ ಸರಿಯಾದ ಸಮಯಕ್ಕೆ ಆಗಿ ಎಲ್ಲಾ ರೀತಿಯ ಸಂಕಷ್ಟದಿAದ ಜನತೆ ಪಾರಾಗಲಿ ಎಂದು ಹೋಮ-ಹವನ ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿದವು.

ದೇವರ ಮೂರ್ತಿಯನ್ನು ಹೂವಿನಿಂದ ಅಲಂಕರಿಸಿ ನಂತರ ಹಾಲು, ಮೊಸರು, ಎಳನೀರು, ಜೇನು ಸೇರಿದಂತೆ ಇನ್ನಿತರ ಅಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಪೂಜಾ ವಿಧಿವಿಧಾನಗಳನ್ನು ಅರ್ಚಕರಾದ ಮಾಲತೇಶ್ ಭಟ್ ಹಾಗೂ ಸುಹಾಸ್ ಭಟ್ ನೆರವೇರಿಸಿದರು. ಈ ಸಂದರ್ಭ ಸಮಿತಿ ಸದಸ್ಯರು ಹಾಗೂ ಮಾಲಂಬಿ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.