ನಾಪೋಕ್ಲು, ಜೂ. ೧೭: ಕಾಡು ಕುರಿಯೊಂದು ಬೀದಿ ನಾಯಿಗಳಿಂದ ತಪ್ಪಿಸಿಕೊಂಡು ಮಾರುಕಟ್ಟೆಯ ಅಂಗಡಿಯೊAದಕ್ಕೆ ನುಗ್ಗಿದ ಘಟನೆ ನಡೆದಿದೆ. ಈ ಸಂದರ್ಭ ಸುಲೇಮಾನ್ ಎಂಬವರು ಕಾಡು ಕುರಿಯನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ನಂತರ ಠಾಣಾಧಿಕಾರಿ ರಾಘವೇಂದ್ರ ಅವರಿಂದ ಹೆಣ್ಣು ಕಾಡು ಕುರಿಯನ್ನು ಪಡೆದುಕೊಂಡ ಉಪ ಅರಣ್ಯ ಅಧಿಕಾರಿ ಕಾಳೇಗೌಡ, ಗಸ್ತು ಅರಣ್ಯಪಾಲಕ ಶರತ್ ಕೆ.ಎ., ಅರಣ್ಯ ವೀಕ್ಷಕ ಮುತ್ತಪ್ಪ ಮತ್ತು ಹರ್ಷಿತ್ ಅರಣ್ಯ ಪ್ರದೇಶಕ್ಕೆ ಬಿಟ್ಟರು.
ದುಗ್ಗಳ ಸದಾನಂದ