ಮಡಿಕೇರಿ, ಜೂ. ೧೭: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಇದೇ ಮೊದಲ ಬಾರಿಗೆ ತಾ. ೨೩ ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಜಿಲ್ಲಾ ಮಟ್ಟದ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣರ ಚಿಂತನೆಗಳ ಬೆಳಕಿನಿಂದ ಸಮಾನತೆಯ ಸಮಾಜ ಕಟ್ಟುವ ಸಂದೇಶಗಳೊAದಿಗೆ ಹನ್ನೆರಡನೇ ಶತಮಾನದ ವಚನಕಾರರ ಸಂದೇಶಗಳನ್ನು ಸಮಾಜದಲ್ಲಿ ಬಿತ್ತುವ ಮಹತ್ತರವಾದ ಕಾಯಕ ಕಳೆದ ನಲವತ್ತು ವರ್ಷಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಸುತ್ತ ಬರಲಾಗುತ್ತಿದೆ. ಸುತ್ತೂರು ಮಠದ ೨೩ನೇ ಜಗದ್ಗುರುಗಳಾದ ಡಾ.ರಾಜೇಂದ್ರ ಸ್ವಾಮೀಜಿ ಅವರು ಶರಣ ಸಾಹಿತ್ಯ ಪರಿಷತ್ತನ್ನು ೧೯೮೬ರಲ್ಲಿ ಸ್ಥಾಪಿಸಿದರು. ಪರಿಷತ್ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಲ್ಲದೇ ನೆರೆಯ ಮಹಾರಾಷ್ಟç, ಗೋವಾ, ಆಂಧ್ರ ಹಾಗೂ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕೊಡಗು ಜಿಲ್ಲೆಯಲ್ಲೂ ಕೂಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶರಣರ ಚಿಂತನೆಗಳನ್ನು ಬಿತ್ತುವ ಕೆಲಸ ಮಾಡಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ತಾ. ೨೩ ರಂದು ಬೆಳಿಗ್ಗೆ ೯ ಗಂಟೆಗೆÀ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಿAದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಸಾಗಲಿದ್ದು ವಿವಿಧ ಕಲಾತಂಡಗಳು, ಪೂರ್ಣ ಕುಂಭ ಕಳಸ ಹೊತ್ತ ಮಹಿಳೆಯರು, ಶರಣರ ವೇಷ ಧರಿಸಿದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೆರುಗು ನೀಡಲಿದ್ದಾರೆ. ಮಾಜಿ ಯೋಧರು ಸೇರಿದಂತೆ ವಿವಿಧ ಸಮುದಾಯವರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಗಾಯತ್ರಿ ಕಲ್ಯಾಣ ಮಂಟಪದಿAದ ಹೊರಡುವ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಕೊಡಗು ಅಪರ ಜಿಲ್ಲಾಧಿಕಾರಿ ಡಾ.ಸಹನಾ ಹಾದಿಮನಿ ಹಾಗೂ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಚಾಲನೆ ನೀಡಲಿದ್ದಾರೆ. ಸಮ್ಮೇಳನದ ಮೆರವಣಿಗೆ ರಥಬೀದಿಗಾಗಿ ಗಣಪತಿ ದೇವಾಲಯ ವೃತ್ತಕ್ಕೆ ಬಂದು ಮುಖ್ಯ ರಸ್ತೆಗಾಗಿ ರೈತ ಸಹಕಾರ ಭವನಕ್ಕೆ ಸಾಗಲಿದೆ. ಮೆರವಣಿಗೆಗೂ ಮುನ್ನಾ ಬೆಳಗ್ಗೆ ೮-೩೦ ಗಂಟೆಗೆ ರೈತ ಸಹಕಾರ ಭವನದ ಬಳಿ ರಾಷ್ಟç ಧ್ವಜ, ನಾಡÀ ಧ್ವಜ ಹಾಗೂ ಶರಣ ಸಾಹಿತ್ಯ ಪರಿಷತ್ತು ಧ್ವಜಗಳ ಧ್ವಜಾರೋಹಣ ನಡೆಯಲಿದೆ. ಪೂರ್ವಾಹ್ನ ೧೦-೩೦ ಗಂಟೆಗೆ ದೊಡ್ಡವೀರರಾಜೇಂದ್ರ ವೇದಿಕೆಯಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದಾರೆ. ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಅನುಭವದ ನುಡಿಯಾಡಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಮಂತರಗೌಡ ಆಶಯ ನುಡಿಗಳಾನ್ನಾಡಲಿದ್ದು, ಸಂಸದ ಯದುವೀರ್ ವಚನಗಳ ಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನಾ ಸ್ವಾಮೀಜಿ ಕಾರ್ಯನಿರ್ವಹಿಸಲಿದ್ದಾರೆ. ಸಮ್ಮೇಳನದ ಅನುಭವ ಮಂಟಪದಲ್ಲಿ ವಚನ ಸಾಹಿತ್ಯದ ವಿವಿಧ ವಿಚಾರ ಗೋಷ್ಠಿಗಳು, ವಚನ ಗಾಯನಗಳು ನಡೆಯಲಿವೆ. ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿವೆ. ಬಳಿಕ ಸಂಜೆ ೬ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಸಮ್ಮೇಳನದ ಗೌರವಾಧ್ಯಕ್ಷ ಹೆಚ್.ವಿ. ಶಿವಪ್ಪ, ಹಣಕಾಸು ಸಮಿತಿ ಅಧ್ಯಕ್ಷ ಶಾಂಭಶಿವಯ್ಯ, ಯುವ ಘಟಕದ ಅಧ್ಯಕ್ಷ ಮೋಹನ್ ಹಕ್ಕಿ ನಂಜಪ್ಪ, ಕಳಲಿ ವೇದಿಕೆ ಮಡಿಕೇರಿ ತಾಲೂಕು ಅಧ್ಯಕ್ಷೆ ವಿಜಯಲಕ್ಷಿö್ಮ ಇದ್ದರು.