ಸೋಮವಾರಪೇಟೆ, ಜೂ.೧೭: ಕಳೆದ ಆರು ವರ್ಷಗಳಿಂದ ಕೂತಿ, ತೋಳೂರುಶೆಟ್ಟಳ್ಳಿ ಹಾಗೂ ಹೊಸಬೀಡು - ಕಲ್ಕಂದೂರು ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಇಲಾಖೆಯಿಂದ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಾ ಜನರ ಮೆಚ್ಚುಗೆ ಗಳಿಸಿರುವ ನಾಗೇಂದ್ರ ಜೋಗೂರ್ ಅವರನ್ನು ಕೂತಿ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಹಗಲು-ರಾತ್ರಿ ಎನ್ನದೆ ವಿದ್ಯುತ್ ಸಂಬAಧಿತ ಸಮಸ್ಯೆಗಳಿಗೆ ಸ್ಪಂದಿಸಿ, ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕೂತಿ ಗ್ರಾಮಾಧ್ಯಕ್ಷ ಹೆಚ್.ಎಂ. ಜಯರಾಮ್, ಕೆ.ಡಿ. ಗಿರೀಶ್, ಲಕ್ಷ್ಮಯ್ಯ, ಯಾದವ್ ಕುಮಾರ್, ಭರತ್, ಭಾನು ಪ್ರಕಾಶ್, ಅಶ್ವತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.