ಮಡಿಕೇರಿ, ಜೂ. ೧೭: ೨೦೨೫-೨೬ನೇ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ವಿಭಾಗದ ಹೈನುಗಾರಿಕಾ ಕ್ಷೇತ್ರದಲ್ಲಿ ಮಡಿಕೇರಿ ತಾಲೂಕು ಮಟ್ಟದ ಪ್ರಶಸ್ತಿಗೆ ಕೂಡಂಡ ರವಿ ಮೊಣ್ಣಪ್ಪ ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು ರೂ. ೧೦ ಸಾವಿರ ಒಳಗೊಂಡಿದೆ. ಹೊದ್ದೂರು ಗ್ರಾಮದ ಕೂಡಂಡ ರವಿ ಮೊಣ್ಣಪ್ಪ ಅವರು ೧೦ ವರ್ಷಗಳಿಂದ ಹೈನುಗಾರಿಕೆ, ಸಾವಯವ ಕೃಷಿ, ನರ್ಸರಿ, ಕಸಿ ಮತ್ತು ತೋಟಗಾರಿಕಾ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿಲಾಗಿದೆ. ಇವರು ಕೂಡಂಡ ದಿ. ಕುಶಾಲಪ್ಪ ಹಾಗೂ ಜಾನಕ್ಕಿ ದಂಪತಿಯ ಪುತ್ರ.