ಗೋಣಿಕೊಪ್ಪ ವರದಿ, ಜೂ. ೧೬ : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆದ ಬಿ. ಡಿವಿಜನ್ ಲೀಗ್ ಕಂ. ನಾಕೌಟ್ ಟೂರ್ನಿಯಲ್ಲಿ ಅಂಜಿಗೇರಿ ನಾಡ್ ತಂಡ ಚಾಂಪಿಯನ್ ಸ್ಥಾನ ಪಡೆದುಕೊಂಡಿದ್ದು, ಬೇಗೂರು ಇವೈಸಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಫೈನಲ್ ಹಣಾಹಣಿಯಲ್ಲಿ ಅಂಜಿಗೇರಿ ನಾಡ್ ತಂಡವು ಬೇಗೂರು ಇವೈಸಿ ತಂಡವನ್ನು ಶೂಟೌಟ್‌ನಲ್ಲಿ ೪-೩ ಗೋಲುಗಳಿಂದ ಮಣಿಸಿತು. ಉಭಯ ತಂಡಗಳು ಪಂದ್ಯದ ಅವಧಿಯಲ್ಲಿ ೧-೧ ಗೋಲುಗಳ ಸಮಬಲ ಸಾಧಿಸಿದವು. ಅಂಜಿಗೇರಿ ಪರ ಸಿದ್ದಾಂತ್, ಬೇಗೂರು ಪರ ಮಂಜುನಾಥ್ ಗೋಲು ಹೊಡೆದರು. ಟೈ ಬ್ರೇಕರ್‌ನಲ್ಲಿ ಅಂಜಿಗೇರಿ ೩, ಬೇಗೂರು ೨ ಗೋಲು ದಾಖಲಿಸಿತು. ಅಂಜಿಗೇರಿ ಚಾಂಪಿಯನ್ ಸ್ಥಾನ ಅಲಂಕರಿಸಿತು. ಇದರೊಂದಿಗೆ ಚಾಂಪಿಯನ್ ಅಂಜಿಗೇರಿ ನಾಡ್, ರನ್ನರ್ ಅಪ್ ಇವೈಸಿ ಬೇಗೂರು, ಸೆಮಿಫೈನಲ್ ಪ್ರವೇಶಿಸಿದ್ದ ಅಮ್ಮತ್ತಿ ಎಎಸ್‌ಸಿ ಹಾಗೂ ವೀರಾಜಪೇಟೆ ಟವರ್ಸ್ ತಂಡಗಳು ಹಾಕಿ ಕೂರ್ಗ್ ಎ. ಡಿವಿಜನ್ ಹಂತಕ್ಕೆ ಪ್ರವೇಶ ಪಡೆದುಕೊಂಡವು.

ಅAಜಿಗೇರಿ ನಾಡ್, ಟಾಟಾ ಕಾಫಿ ಲಿಮಿಟೆಡ್, ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ (ಬಿ), ಕುತ್ತ್ನಾಡ್ ಸ್ಟೆçöÊಕರ್ಸ್, ಕೈಗ್ ಜೂಮರ್ಸ್, ವೀರಾಜಪೇಟೆ ಕೊಡವ ಸಮಾಜ, ವೆಟರನ್ ನಾಪೋಕ್ಲು, ಇವೈಸಿ ಬೇಗೂರು, ಕಾಕೋಟ್ ಸ್ಟೆçöÊಕರ್ಸ್, ಕ್ಯಾಲ್ಸ್ - ಎಎಸ್‌ಎಫ್, ವೀರಾಜಪೇಟೆ ಟವರ್ಸ್, ಎಎಸ್‌ಸಿ ಅಮ್ಮತ್ತಿ, ಕುಶಾಲನಗರ ಟೈಕೂನ್, ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ (ಎ), ತ್ರಿವೇಣಿ ಸ್ಕೂಲ್, ಪನ್ನಂಗಾಲ ಪ್ಯಾಂಥರ್ಸ್, ಕಿರ್ಗೂರ್, ಡ್ರಿಬ್‌ಲ್ ಹೆಂಪ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಹಾಕಿ ಕೂರ್ಗ್ ಉಪಾಧ್ಯಕ್ಷೆ ಯಮುನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಅಮ್ಮಂಡೀರ ಚೇತನ್, ನಿರ್ದೇಶಕ ಕಳ್ಳಿಚಂಡ ಗೌತಂ, ಕೊಕ್ಕಂಡ ರೋಶನ್ ಬಹುಮಾನ ವಿತರಣೆ ಮಾಡಿದರು.

ಟೂರ್ನಿ ನಿರ್ದೇಶಕರಾಗಿ ಅಂಜಪರವAಡ ಕುಶ ಕಾರ್ಯನಿರ್ವಹಿಸಿದರು. ತೀರ್ಪುಗಾರರಾಗಿ ಕುಪ್ಪಂಡ ದಿಲನ್, ಬೊಳಿಯಾಡಿರ ಸುಬ್ಬಯ್ಯ, ಬೊಳ್ಳಚಂಡ ನಾಣಯ್ಯ, ಕರವಂಡ ಅಪ್ಪಣ್ಣ, ಪಟ್ರಪಂಡ ಅಪ್ಪಣ್ಣ, ಚೋಯಮಾಡಂಡ ಚಂಗಪ್ಪ, ಚೆಯ್ಯಂಡ ಅಪ್ಪಚ್ಚು, ಮಾಳೇಟೀರ ಕಾಳಪ್ಪ ಕಾರ್ಯನಿರ್ವಹಿಸಿದರು.