ಮಡಿಕೇರಿ, ಜೂ. ೧೫ : ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ಜೂ.೧ರಂದು ನಡೆದ ಹೇಮಂತ್ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಸರಕಾರ ರೂ.೫ ಕೋಟಿ ಪರಿಹಾರ ನೀಡಬೇಕು ಮತ್ತು ಪೊಲೀಸರು ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಮಂತ್‌ನ ಕುಟುಂಬದ ಸದಸ್ಯರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೇಮಂತ್‌ನ ತಂದೆ ಬಿ.ಹೆಚ್.ರವಿ ಹಾಗೂ ತಾಯಿ ಬಿ.ಆರ್.ಇಂದಿರಾ ಅವರು ಪೂರ್ವಯೋಜಿತ ಸಂಚಿನಿAದ ನಮ್ಮ ಮಗನ ಕೊಲೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಪಿತ್ರಾರ್ಜಿತ ಆಸ್ತಿಗೆ ಸಂಬAಧಿಸಿದAತೆ ನಡೆದ ಕಲಹದಿಂದ ಈ ಕೊಲೆಯಾಗಿದೆ. ಆಸ್ತಿ ವಿವಾದಕ್ಕೆ ಸಂಬAಧಿಸಿದAತೆ ನಮಗೆ ಬೆದರಿಕೆ ಇರುವ ಕುರಿತು ಸ್ಥಳೀಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸುಮಾರು ೧೮ ಬಾರಿ ದೂರನ್ನು ನೀಡಲಾಗಿದೆ. ಆದರೆ ನಮಗೆ ಯಾವುದೇ ನ್ಯಾಯ ಸಿಗಲಿಲ್ಲ. ಒಂದು ದೂರನ್ನಾದರೂ ಪೊಲೀಸರು ಪರಿಗಣಿಸಿದ್ದರೆ ನನ್ನ ಮಗನ ಕೊಲೆಯಾಗುತ್ತಿರಲಿಲ್ಲ ಎಂದು ಬಿ.ಆರ್.ಇಂದಿರಾ ಹೇಳಿದರು.
ಜೈಲಿನಲ್ಲೇ ರಕ್ಷಣೆ ಇಲ್ಲದ ನಮಗೆ ಹೊರಗೆ ರಕ್ಷಣೆ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದ ಬಿ.ಹೆಚ್.ರವಿ, ರೂ.೫ ಕೋಟಿ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಕುಟುಂಬದ ಸದಸ್ಯ ಎಂ.ಪ್ರಶಾAತ್ ಮಾತನಾಡಿ, ಆಸ್ತಿ ವಿವಾದಕ್ಕೆ ಸಂಬAಧಿಸಿದAತೆ ನಡೆದ ಹಲ್ಲೆ ಪ್ರಕರಣದಲ್ಲಿ ಕಠಿಣ ಸೆಕ್ಷನ್‌ಗಳಡಿ ಹೇಮಂತ್ ವಿರುದ್ಧ ದೂರು ದಾಖಲಿಸಿಕೊಳ್ಳುವ ಮೂಲಕ ಪೊಲೀಸರು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು. ಕಾರಾಗೃಹದಲ್ಲಿ ಹೇಮಂತ್‌ನ ಕೊಲೆಯಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಚಾಕು, ಚೂರಿಗಳು ಕಾರಾಗೃಹವನ್ನು ಪ್ರವೇಶಿಸಿದ್ದು ಹೇಗೆ ಎಂದು ಪ್ರಶ್ನಿಸಿದರು.
ವೀರಾಜಪೇಟೆಯ ಸರ್ವೋದಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಂ.ಕುಶಾಲಪ್ಪ ಮಾತನಾಡಿ, ಈ ಪ್ರಜಾಪ್ರಭುತ್ವ ರಾಷ್ಟçದಲ್ಲಿ ಕಾನೂನಿಗೆ ಬೆಲೆ ಇಲ್ಲದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿ.ಪಿ.ಹಸೈನಾರ್ ಹಾಗೂ ಬಿಟ್ಟಂಗಾಲದ ಜಗದೀಶ್ ಉಪಸ್ಥಿತರಿದ್ದರು.