ಗೋಣಿಕೊಪ್ಪಲು, ಜೂ. ೧೫: ಶ್ರೀಮಂಗಲ ಠಾಣಾ ವ್ಯಾಪ್ತಿಯ ಈಸ್ಟ್ ನೆಮ್ಮಲೆಯಲ್ಲಿ ನೀಮಾ ಎಂಬ ಮಹಿಳೆ ಮತ್ತು ಅವರ ಕಾರ್ಮಿಕರಿಗೆ ಸುಮಾರು ಏಳು ಜನರ ತಂಡ ಮತ್ತು ಕೆಲವು ಮಹಿಳೆಯರು ಸೇರಿ ಕತ್ತಿ ಮತ್ತು ದೊಣ್ಣೆಯೊಂದಿಗೆ ಅಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಹಾಕಿರುವ ಕುರಿತು ಪ್ರಕರಣ ದಾಖಲಾಗಿದೆ.
ಮಾಣೀರ ಸೋಮಣ್ಣ ಅವರ ಪತ್ನಿ ನೀಮಾ ಅವರು ನೀಡಿದ ದೂರಿನನ್ವಯ ಈಸ್ಟ್ ನೆಮ್ಮಲೆ ನಿವಾಸಿಗಳಾದ ಚೊಟ್ಟೆಯಂಡ ಮಾಡ ಮಂಜು, ಕಿರಣ, ಶಿವಪ್ಪ, ದಿನೇಶ, ಮನು, ಅನಿಲ್, ರವಿ ಅವರುಗಳ ಮೇಲೆ ಶ್ರೀಮಂಗಲ ಪೊಲೀಸರು ಅಕ್ರಮ ಪ್ರವೇಶ ಮಾಡಿ ನೀಮಾ ಹಾಗೂ ಲೈನ್ ಮನೆಯ ಕಾರ್ಮಿಕರ ಮೇಲೆ ಕೊಲೆ ಬೆದರಿಕೆ ಹಾಕಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.