ಗೋಣಿಕೊಪ್ಪ ವರದಿ, ಜೂ. ೧೫: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಬಿ. ಡಿವಿಜನ್ ಹಾಕಿ ಟೂರ್ನಿಯಲ್ಲಿ ಅಂಜಿಗೇರಿ ನಾಡ್ ಮತ್ತು ಇವೈಸಿ ಬೇಗೂರು ತಂಡಗಳು ಫೈನಲ್ ಪ್ರವೇಶ ಪಡೆದುಕೊಂಡಿವೆ. ತಾ. ೧೬ ರಂದು (ಇಂದು) ಬೆಳಗ್ಗೆ ೯.೩೦ ಗಂಟೆಗೆ ಫೈನಲ್ ಹಣಾಹಣಿ ನಡೆಯಲಿದೆ.
ಅಂಜಿಗೇರಿ ನಾಡ್ ತಂಡವು ವೀರಾಜಪೇಟೆ ಟವರ್ಸ್ ವಿರುದ್ಧ ೪-೨ ಗೋಲುಗಳಿಂದ ಶೂಟೌಟ್ನಲ್ಲಿ ಗೆಲುವು ಸಾಧಿಸಿತು. ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಉಭಯ ತಂಡಗಳು ಪಂದ್ಯದ ನಿಗದಿತ ಸಮಯದಲ್ಲಿ ೧-೧ ಸಮಬಲ ಸಾಧಿಸಿತು. ನಂತರ ಶೂಟೌಟ್ ಮೊರೆ ಹೋಗುವಂತಾಯಿತು. ಶೂಟೌಟ್ನಲ್ಲಿ ಅಂಜಿಗೇರಿ ೪ ಗೋಲು, ಟವರ್ಸ್ ೨ ಗೋಲು ದಾಖಲಿಸಿತು.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇವೈಸಿ ಬೇಗೂರು ತಂಡವು ಎಎಸ್ಸಿ ಅಮ್ಮತ್ತಿ ವಿರುದ್ಧ ೪-೩ ಗೋಲುಗಳ ಗೆಲುವು ದಾಖಲಿಸಿತು. ಇವೈಸಿ ಪರ ಗಗನ್ ೨ ಗೋಲು ಬಾರಿಸಿ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಸೋಮಣ್ಣ ಹಾಗೂ ಪೆಮ್ಮಯ್ಯ ತಲಾ ಒಂದೊAದು ಗೋಲು ಬಾರಿಸಿದರು. ಅಮ್ಮತ್ತಿ ಪರ ನಾಣಯ್ಯ, ಮುಖೇಶ್ ಮತ್ತು ಶಾಶ್ವತ್ ತಲಾ ಒಂದೊAದು ಗೋಲು ಬಾರಿಸಿದರು.