ಕುಶಾಲನಗರ, ಜೂ. ೧೫: ತನ್ನ ಮಗನನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ಪತ್ನಿ ಸೇರಿದಂತೆ ಮೂವರ ವಿರುದ್ಧ ಪತಿ ದೂರು ದಾಖಲಿಸಿದ್ದಾರೆ.
ಕುಶಾಲನಗರ ಆರ್‌ಎಂಸಿ ಬಳಿ ನೆಲೆಸಿದ್ದ ರಾಜೀವ ಅವರು ತನ್ನ ಪತ್ನಿಯ ವಿರುದ್ಧವೇ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಕೌಟುಂಬಿಕ ಕಲಹದಿಂದ ರಾಜೀವ ಹಾಗೂ ಅವರ ಪತ್ನಿ ಬೇರ್ಪಟ್ಟು ಪ್ರತ್ಯೇಕವಾಗಿ ನೆಲೆಸಿದ್ದರು. ೯ ವರ್ಷದ ಮಗ ತಾಯಿಯೊಂದಿಗೆ ವಾಸವಿದ್ದ. ಕೆಲದಿನಗಳಿಂದ ತಾಯಿ-ಮಗ ಮನೆಯಲ್ಲಿ ಇಲ್ಲದ ಕಾರಣ ರಾಜೀವ ಅವರು ಕುಟುಂಬಸ್ಥರನ್ನು ವಿಚಾರಿಸಿದ ಸಂದರ್ಭ ‘ಅವರುಗಳು ಎಲ್ಲಿದ್ದಾರೆಂದು ತಿಳಿದಿಲ್ಲ’ ಎಂದು ಉತ್ತರಿಸಿದ್ದು, ಬಳಿಕ ಮಹಿಳೆಯ ಅಣ್ಣ ಈ ಕುರಿತು ಕುಶಾಲನಗರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತಾಯಿ-ಮಗನನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದ ಸಂದರ್ಭ ಮತಾಂತರಗೊAಡಿರುವುದು ಬೆಳಕಿಗೆ ಬಂದಿದೆ ಎಂದು ಪತಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕುಶಾಲನಗರದ ಜಲೀಲ್ ಹಾಗೂ ಸಲೀಂ ಎಂಬವರು ತಾಯಿ-ಮಗನನ್ನು ಕೇರಳಕ್ಕೆ ಕರೆದೊಯ್ದಿದ್ದಾರೆ. ಪುತ್ರ ಬರಲು ವಿರೋಧ ವ್ಯಕ್ತಪಡಿಸಿದರು, ತಾಯಿ ಬೆದರಿಕೆಯೊಡ್ಡಿ ಕೇರಳಕ್ಕೆ ಕರೆದೊಯ್ದು, ಶಸ್ತçಚಿಕಿತ್ಸೆ ಮೂಲಕ ಸುನ್ನತ್ ಮಾಡಿ ಮತಾಂತರಗೊಳಿಸಲಾಗಿದೆ. ಇದಕ್ಕೆಲ್ಲ ಪತ್ನಿ ಕೂಡ ಸಹಕರಿಸಿದ್ದು, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರಾಜೀವ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ದೂರಿನನ್ವಯ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂ ಸಂಘಟನೆಗಳಿAದ ಆಕ್ರೋಶ
ಈ ಸಂಬAಧ ಮಾಹಿತಿ ದೊರೆತ ಕುಶಾಲನಗರ ಹಿಂದೂಪರ ಸಂಘಟನೆಗಳ ಪ್ರಮುಖರು ವಾಸವಿ ಮಹಲ್ ಸಭಾಂಗಣದಲ್ಲಿ ಸಭೆ ನಡೆಸಿ ಆರೋಪಿಗಳ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಹಿಂದೂಪರ ಸಂಘಟನೆಗಳ ಪ್ರಮುಖರಾದ ಅಮೃತ್ ರಾಜ್, ಸಚಿನ್, ವಸಂತ ರೈ, ಭರತ್ ಮಾಚಯ್ಯ, ಜಿ.ಎಲ್. ನಾಗರಾಜ್, ಡಿ.ಸಿ. ಮಂಜುನಾಥ್, ಶಿವಶಂಕರ್ ಮತ್ತು ವಿವಿಧ ಸಮಾಜಗಳ ಪ್ರಮುಖರಾದ ವಾಂಚೀರ ಮನು ನಂಜುAಡ, ಚಿಲ್ಲನ ಗಣಿ ಪ್ರಸಾದ್, ಶಾಂತಕುಮಾರಿ, ಜ್ಯೋತಿ, ದೇವಕಿ ಮತ್ತು ಬಿಜೆಪಿ ಪ್ರಮುಖರಾದ ಗೌತಮ್ ಗೌಡ, ಎಂ.ವಿ. ನಾರಾಯಣ ಕೃಷ್ಣಪ್ಪ ಎಂ.ಡಿ., ಗೀತಾ ಧರ್ಮಪ್ಪ, ವರದ, ಚಂದ್ರಶೇಖರ್ ಹೇರೂರು, ಮಧುಸೂದನ್, ವೈಶಾಖ್, ಸುಮನ್ ಮತ್ತಿತರ ಸಂಘಟನೆಗಳ ಪ್ರಮುಖರು ಸಭೆ ನಂತರ ಕುಶಾಲನಗರ ಟೌನ್ ವೃತ್ತ ನಿರೀಕ್ಷಕರಾದ ಪ್ರದೀಪ್ ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿ ತಕ್ಷಣ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಪ್ರಕರಣದ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗಿದೆ. ಸಂಬAಧಿಸಿದ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ್ದು ಸಂಬAಧಿಸಿದ ಪ್ರಕರಣದ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಶಾಲನಗರ ಟೌನ್ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಶಿವಣ್ಣ ಇದ್ದರು.