ಮಡಿಕೇರಿ, ಜೂ. ೧೫: ಆರ್ಥಿಕವಾಗಿ ಹಿಂದುಳಿದ ಕೊಡಗು ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಪದವಿ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನು ಕಳೆದ ೫ ವರ್ಷಗಳಿಂದ ಎ.ಕೆ. ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ದತ್ತಿನಿಧಿಯಡಿಯಲ್ಲಿ, ದತ್ತಿನಿಧಿಯ ವ್ಯವಸ್ಥಾಪಕ ಟ್ರಸ್ಟಿಗಳಾಗಿರುವ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ನೀಡುತ್ತಾ ಬರುತ್ತಿದ್ದಾರೆ.

ಪದವಿಪೂರ್ವ ಕಾಲೇಜಿನಲ್ಲಿ ಉತ್ತಮ ಅಂಕಗಳಿಸಿರುವ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಹೆಣ್ಣು ಮಕ್ಕಳಿಗೆ ೩ ವರ್ಷಗಳ ಪದವಿ ಶಿಕ್ಷಣಕ್ಕೆ ಪ್ರತಿ ವರ್ಷ ರೂ. ೧೦,೦೦೦ ದಂತೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ೨೦೨೧ ರಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬರಲಾಗುತ್ತಿದ್ದು, ಇದುವರೆಗೆ ೧೫೯ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಬಾರಿ ಕೂಡ ಕೊಡಗು ಜಿಲ್ಲೆಯಲ್ಲಿ ಮೊದಲನೆ ವರ್ಷದ ಪದವಿ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ. eviಜhಥಿಚಿ.ಛಿom ವತಿಯಿಂದ ಕೂಡ ಈ ವಿದ್ಯಾರ್ಥಿ ವೇತನಕ್ಕೆ ಸಹಕಾರ ನೀಡಲಾಗುತ್ತಿದೆ.

ಪ್ರಥಮ ವರ್ಷ ಪದವಿ ಶಿಕ್ಷಣದ ವೇತನಕ್ಕೆ ಅರ್ಜಿಗಳ ಆಹ್ವಾನ

ಈ ಬಾರಿ ಪದವಿಪೂರ್ವ ಶಿಕ್ಷಣ ಮುಗಿಸಿ, ಕೊಡಗಿನಲ್ಲಿಯೇ ಪದವಿ ಶಿಕ್ಷಣವನ್ನು ಮುಂದುವರಿಸಲು ಇಚ್ಚಿಸುವ ಅಥವಾ ಮುಂದುವರಿಸುತ್ತಿರುವ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬಹುದು.

ಎ.ಎಸ್. ಪೊನ್ನಣ್ಣ ಅವರು ೫ ವರ್ಷಗಳ ಹಿಂದೆ ಈ ಸೇವಾ ಕಾರ್ಯವನ್ನು ಆರಂಭಿಸಿದಾಗ ‘ಶಕ್ತಿ’ಯ ಸಹಕಾರ ಬಯಸಿದ್ದರು. ಅರ್ಜಿಗಳ ಆಯ್ಕೆ ಪಾರದರ್ಶಕವಾಗಿರಲು ಬಯಸಿದ ಅವರು, ಎಲ್ಲ ಅರ್ಜಿಗಳೂ ‘ಶಕ್ತಿ’ ಕಾರ್ಯಾಲಯಕ್ಕೆ ಕಳುಹಿಸುವಂತೆಯೂ, ಅವುಗಳ ಆಯ್ಕೆಯನ್ನು ಕೂಡ ‘ಶಕ್ತಿ’ ಬಳಗವೇ ಮಾಡುವಂತೆಯೂ ವಿನಂತಿಸಿದ್ದರಿAದ, ಶಕ್ತಿ ಪತ್ರಿಕೆ ಪೂರ್ಣ ಪ್ರಮಾಣದಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಿ ರಾಜಕೀಯ, ಧರ್ಮ, ಜಾತಿ ರಹಿತವಾಗಿ ಅರ್ಹ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿತ್ತು. ಈ ಬಾರಿಯೂ ಪೊನ್ನಣ್ಣ ಅವರು ಅದೇ ಪ್ರಕ್ರಿಯೆ ಬಯಸಿದ್ದಾರೆ.

ಹಾಗಾಗಿ ಅರ್ಜಿಗಳನ್ನು shಚಿಞಣhiಜಚಿiಟಥಿ@gmಚಿiಟ.ಛಿom ಗೆ ಇ-ಮೇಲ್ ಮೂಲಕ ಅಥವಾ (ಆಡಳಿತಾಧಿಕಾರಿ, ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ-೫೭೧೨೦೧) ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಿದೆ. ಅರ್ಜಿ ಸಲ್ಲಿಸಲು ಜುಲೈ ೨೫ ಕೊನೆಯ ದಿನವಾಗಿದೆ. ಆಯ್ದ ವಿದ್ಯಾರ್ಥಿನಿಯರಿಗೆ ಆಯ್ಕೆ ಆಗಿರುವ ಬಗ್ಗೆ ಕರೆ ಮಾಡಿ ತಿಳಿಸಲಾಗುವುದು.