ವಾಷಿಂಗ್ಟನ್, ಜೂ. ೧೫: ಅಮೆರಿಕ-ಇರಾನ್ ನಡುವಣ ೧೦೭ ದಿನಗಳ ಯುದ್ಧ ಕೊನೆಗೂ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ. ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಸಂಬAಧ ಶುಕ್ರವಾರ (ಜೂನ್ ೧೯) ದÀಂದು ಸ್ವಿಟ್ಜರ್ಲೆಂಡ್‌ನಲ್ಲಿ ಔಪಚಾರಿಕ ಸಹಿ ಹಾಕಲು ನಿರ್ಧರಿಸಲಾಗಿದೆ.
ಈ ಒಪ್ಪಂದದಿAದ ಹಾರ್ಮುಜ್ ಜಲಸಂಧಿ ಮತ್ತೆ ತೆರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕುರಿತು ತಮ್ಮ ಟ್ರೂತ್ ಸೋಶಿಯಲ್ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದು, “ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗಿನ ಒಪ್ಪಂದವು ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು” ಎಂದು ಘೋಷಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಮತ್ತೆ ತೆರೆಯಲು ಮತ್ತು ಇರಾನ್ ಬಂದರುಗಳ ಮೇಲಿನ ಅಮೆರಿಕ ನೌಕಾ ದಿಗ್ಬಂಧನ ಕೊನೆಗೊಳಿಸಲು ಈ ಒಪ್ಪಂದ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ, ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ನಂತರ ಶುಕ್ರವಾರ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗುವುದು ಎಂದು ಅಮೆರಿಕ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಅವರ ೮೦ ನೇ ಹುಟ್ಟುಹಬ್ಬದಂದು ಈ ಘೋಷಣೆ ಮಾಡಿದ್ದು, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಒಂದು ವಾರದ ತೀವ್ರ ರಾಜತಾಂತ್ರಿಕ ಬಳಿಕ ಈ ಬೆಳವಣಿಗೆಯಾಗಿದೆ. ಈ ಒಪ್ಪಂದವನ್ನು ಮಹಾನ್ ಸಾಧನೆ ಎಂದು ಟ್ರಂಪ್ ಹೇಳಿದ್ದು, ಇದರಿಂದ ಮಧ್ಯ ಪ್ರಾಚ್ಯದಲ್ಲಿ ಪರಿಸ್ಥಿತಿ ಶಾಂತಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಖಚಿತಪಡಿಸಿದ ಇರಾನ್-೧೪ ಅಂಶಗಳು
ಮಧ್ಯಪ್ರಾಚ್ಯದ ಭೀಕರ ಯುದ್ಧಕ್ಕೆ ‘ಬ್ರೇಕ್’ ಹಾಕಲು ಕೊನೆಗೂ ಅಮೆರಿಕ-ಇರಾನ್ ಸಮ್ಮತಿ ನೀಡಿವೆ. ಒಪ್ಪಂದದಲ್ಲ್ಲಿ ಹಾರ್ಮುಜ್, ಪರಮಾಣು ಯೋಜನೆ, ಸೇನಾ ಕಾರ್ಯಾಚರಣೆ, ಇರಾನ್ ಆಸ್ತಿಗಳ ನಿರ್ಬಂಧ ತೆರವು, ಇರಾನ್‌ಗೆ ನಷ್ಟ ಪರಿಹಾರ ಅಂಶಗಳು ಒಳಗೊಂಡಿವೆ.
ಅಮೆರಿಕಾ-ಇರಾನ್ ನಡುವಿನ ಶಾಂತಿ ಒಪ್ಪಂದದಲ್ಲಿ ೧೪ ಅಂಶಗಳನ್ನು ಅಳವಡಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕಾ-ಇರಾನ್ ನಡುವೆ ಪಾಕಿಸ್ತಾನ ಹಾಗೂ ಪ್ರಾದೇಶಿಕ ಮಿತ್ರರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ನಡೆದ ರಾಜತಾಂತ್ರಿಕ ಮಾತುಕತೆಗಳು ಫಲಕೊಟ್ಟಿದ್ದು, ಕೊನೆಗೆ ಶಾಂತಿ ಒಪ್ಪಂದಕ್ಕೆ ಉಭಯದೇಶಗಳು ಒಪ್ಪಿಗೆ ಸೂಚಿಸಿವೆ,
ಈ ಬಗ್ಗೆ ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಕೂಡ ಖಚಿತಪಡಿಸಿದ್ದು “ಇರಾನ್ ಇದೀಗ ಅಮೆರಿಕಾದೊಂದಿಗೆ ಒಪ್ಪಂದಕ್ಕೆ ಸಹಿಹಾಕಲು ಸಜ್ಜಾಗಿದೆ. ಹಾಗಾಗಿ ಲೆಬನಾನ್ ಒಳಗೊಂಡAತೆ ಎಲ್ಲಾ ಯುದ್ಧ ಮತ್ತು ಮಿಲಿಟರಿ ಕಾರ್ಯಾಚರಣೆಗಳು ತಕ್ಷಣ ಮತ್ತು ಶಾಶ್ವತವಾಗಿ ಕೊನೆಗೊಳ್ಳಲಿದ್ದು, ಜೊತೆಗೆ ನೌಕಾ ದಿಗ್ಬಂಧನ ತೆರವಾಗಲಿದೆ ಜೂನ್.೧೯ರಂದು ಔಪಚಾರಿಕ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ” ಎಂದಿದೆೆ. ಈ ಕುರಿತÀÄ ಮಧ್ಯಸ್ತಿಕೆ ವಹಿಸಿದ್ದ ಪಾಕಿಸ್ತಾನ “ಒಪ್ಪಂದ ಕಾರ್ಯಕ್ರಮ ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆಯಲಿದೆ” ಎಂದು ಸ್ಪಷ್ಟಪಡಿಸಿದೆ.
ಇರಾನ್‌ನ ಅರೆ ಅಧಿಕೃತ ಸುದ್ದಿಸಂಸ್ಥೆ ಮೆಹರ್ ವರದಿ ಪ್ರಕಾರ ಅಮೆರಿಕಾ-ಇರಾನ್ ನಡುವಿನ ೧೪ ಅಂಶಗಳ ಶಾಂತಿ ಒಪ್ಪಂದದ ಮಾಹಿತಿ ಈ ಕೆಳಗಿನಂತಿದೆ.
* ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳಿಗೆ ತಕ್ಷಣದ ಮತ್ತು ಶಾಶ್ವತವಾದ ಅಂತ್ಯ.* ಇರಾನ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಇರಾನ್‌ನ ಸಾರ್ವಭೌಮತ್ವವನ್ನು ಗೌರವಿಸುತ್ತೇವೆ ಎಂಬ ಅಮೆರಿಕಾದ ಬದ್ಧತೆ.
* ಇರಾನಿನ ಒಪ್ಪಂದದ ಅಡಿಯಲ್ಲಿ ೩೦ ದಿನಗಳಲ್ಲಿ ನೌಕಾ ದಿಗ್ಬಂಧನವನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಹಾಗೂ ಜಲಸಂಧಿಯನ್ನು ಪುನಃ ಮುಕ್ತಗೊಳಿಸಬೇಕು.
* ಮಧ್ಯಪ್ರಾಚ್ಯದಲ್ಲಿ ಇರಾನ್ ಸುತ್ತಮುತ್ತಲಿನ ಪ್ರದೇಶಗಳಿಂದ ಅಮೆರಿಕ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳುವುದು.
* ಈ ಪ್ರದೇಶದಲ್ಲಿ ಮಿಲಿಟರಿ ನಿಯೋಜನೆಯನ್ನು ಹೆಚ್ಚಿಸುವುದಿಲ್ಲ ಮತ್ತು ಮಾತುಕತೆಗಳ ಸಮಯದಲ್ಲಿ ಹೊಸ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂಬ ಅಮೆರಿಕಾದ ಬದ್ಧತೆ.
* ಇರಾನಿನ ತೈಲ, ಪೆಟ್ರೋಕೆಮಿಕಲ್ ಉತ್ಪನ್ನಗಳು ಮತ್ತು ಸಂಬAಧಿತ ರಫ್ತಿನ ಮೇಲಿನ ನಿರ್ಬಂಧಗಳನ್ನು ರದ್ದುಗೊಳಿಸಬೇಕು ಹಾಗೂ ಇದರಿಂದ ಬರುವ ಆದಾಯಕ್ಕೆ ಇರಾನ್‌ಗೆ ಸಂಪೂರ್ಣ ಪ್ರವೇಶ.
* ಪರಮಾಣು ಸಮಸ್ಯೆಗಳು ಮತ್ತು ವಿಶಾಲವಾದ ನಿರ್ಬಂಧಗಳ ಪರಿಹಾರದ ಕುರಿತು ಅಂತಿಮ ಒಪ್ಪಂದಕ್ಕೆ ಬರಲು ೬೦ ದಿನಗಳ ಮಾತುಕತೆ ಅವಧಿ ನೀಡಬೇಕು.
* ಪರಮಾಣು ಪ್ರಸರಣ ನಿಷೇಧ ಒಪ್ಪಂದದ ಅಡಿಯಲ್ಲಿ ಟೆಹ್ರಾನ್ ಭವಿಷ್ಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವುದಿಲ್ಲ ಎಂಬ ನವೀಕೃತ ಬದ್ಧತೆ.
* ಯುದ್ದದಿಂದಾಗಿ ಇರಾನ್‌ನಲ್ಲಿ ಆಗಿರುವ ಹಾನಿ ಹಾಗೂ ನಷ್ಟವನ್ನು ಸರಿಪಡಿಸಲು ಹಾಗೂ ಅದರ ಪುನರ್‌ಸ್ಥಾಪನೆ ಯೋಜನೆಗಳಿಗಾಗಿ ಅಮೆರಿಕಾ ಹಾಗೂ ಮಿತ್ರರಾಷ್ಟ್ರಗಳಿಂದ ಇರಾನ್‌ಗೆ ಕನಿಷ್ಟ ೩೦೦ ಬಿಲಿಯನ್ ಡಾಲರ್ ಮೌಲ್ಯದ ಪುನರ್ನಿರ್ಮಾಣ ನಿಧಿಯನ್ನು ನೀಡಬೇಕು.
* ಮಾತುಕತೆಯ ಅವಧಿಯಲ್ಲಿ ವಿದೇಶಗಳಲ್ಲಿ ಸ್ಥಗಿತಗೊಳಿಸಿರುವ/ ನಿರ್ಬಂಧಿಸಿರುವ ಇರಾನ್‌ಗೆ ಸಂಬAಧಿಸಿದ $೨೪ ಬಿಲಿಯನ್ ಡಾಲರ್ ಆಸ್ತಿಗಳನ್ನು ಬಿಡುಗಡೆ ಮಾಡುವುದು, ಜೊತೆಗೆ ಮಾತುಕತೆ ಪ್ರಾರಂಭವಾಗುವ ಮೊದಲು ಅರ್ಧದಷ್ಟು ಹಣವನ್ನು ಬಿಡುಗಡೆ ಮಾಡುವುದು.
* ಅನುಷ್ಠಾನದ ಕುರಿತಂತೆ ಮೇಲ್ವಿಚಾರಣಾ ಕಾರ್ಯವಿಧಾನದ ರಚನೆಯ ಸ್ಥಾಪನೆ ಹಾಗೂ ಅಂತಿಮ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆ.
ಶೇರು ಮಾರುಕಟ್ಟೆ ಜಿಗಿತ
ಅಮೆರಿಕ-ಇರಾನ್ ನಡುವಿನ ಶಾಂತಿ ಒಪ್ಪಂದದ ಪರಿಣಾಮವಾಗಿ ಸೋಮವಾರದ ವಹಿವಾಟು ಆರಂಭವಾಗುತ್ತಲೇ ಭಾರತೀಯ ಶೇರು ಮಾರುಕಟ್ಟೆ ದಾಖಲೆಯ ಜಿಗಿತ ಕಂಡಿದೆ. ಇನ್ನು ಬ್ಯಾಂಕಿAಗ್ ವಲಯದ ಸೂಚ್ಯಂಕವಾದ ಬ್ಯಾಂಕ್ ನಿಫ್ಟಿಯಲ್ಲಿ ಕೂಡ ಬರೋಬ್ಬರಿ ಬೃಹತ್ ಜಿಗಿತ ಕಂಡುಬAದಿದೆ.
ವಲಯವಾರು ವಹಿವಾಟಿನಲ್ಲಿ ರಿಯಾಲ್ಟಿ, ಆಟೋಮೊಬೈಲ್, ಆಯಿಲ್ ಆಂಡ್ ಗ್ಯಾಸ್, ಎಫ್‌ಎಮ್‌ಸಿಜಿ, ಮೆಟಲ್ಸ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಅತ್ಯುತ್ತಮ ಗಳಿಕೆಯೊಂದಿಗೆ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದರೆ, ಇತ್ತ ಫಾರ್ಮಾ (ಫಾರ್ಮಾಸ್ಯುಟಿಕಲ್ಸ್) ವಲಯ ಮಾತ್ರ ಕೊಂಚ ಹಿನ್ನಡೆ ಅನುಭವಿಸಿ ತೀವ್ರ ಒತ್ತಡಕ್ಕೆ ಸಿಲುಕಿದೆ.
ಕಚ್ಚಾ ತೈಲ ಬೆಲೆ ಭಾರಿ ಕುಸಿತ
ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಕುಸಿತ ಕಂಡಿದ್ದು, ಹೂಡಿಕೆದಾರರಲ್ಲಿ ಅಪಾಯ ಎದುರಿಸುವ ಉತ್ಸಾಹವನ್ನು ಹೆಚ್ಚಿಸಿದೆ.
ರೂಪಾಯಿ ಚೇತರಿಕೆ
ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆಗಳ ಬೆನ್ನಲ್ಲೇ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಭರ್ಜರಿ ೪೩ ಪೈಸೆ ಚೇತರಿಕೆಯೊಂದಿಗೆ ೯೪.೬೮ ಮಟ್ಟದಲ್ಲಿ ವಹಿವಾಟು ಆರಂಭಿಸಿದ್ದು, ಇದು ಮೇ ೮ರ ನಂತರದ ಅತ್ಯಂತ ಗರಿಷ್ಠ ಮಟ್ಟವಾಗಿದೆ.