ಮಡಿಕೇರಿ, ಜೂ. ೧೪: ಮಡಿಕೇರಿ ನಗರದ ಶ್ರೀ ವಿನಾಯಕ ಕೊಡವಕೇರಿಯ ೨೨ನೇ ವಾರ್ಷಿಕ ಮಹಾಸಭೆ ಮಡಿಕೇರಿಯ ಬಾಲಭವನದಲ್ಲಿ ಪೆಮ್ಮಡಿಯಂಡ ಎಂ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕೇರಿಯ ಬೆಳವಣಿಗೆ ಬಗ್ಗೆ ಮತ್ತು ಪದ್ಧತಿ, ಪರಂಪರೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಮುತುವರ್ಜಿವಹಿಸುವುದರೊಂದಿಗೆ ಕೇರಿಯ ಸದಸ್ಯರು ಪರಸ್ಪರ ಕಷ್ಟ - ಸುಖಗಳಲ್ಲಿ ಪಾಲ್ಗೊಂಡು ಸಹಕಾರ ನೀಡುವಂತೆ ಅಧ್ಯಕ್ಷರು ಕೋರಿದರು.
ಮೃತಪಟ್ಟ ಕೇರಿಯ ಸದಸ್ಯರಿಗೆ ಸಂತಾಪ ವ್ಯಕ್ತಪಡಿಸಲಾಯಿತು. ಕಾರ್ಯದರ್ಶಿ ಪಾಸುರ ಸಿ. ಕಾವೇರಪ್ಪ ಹಿಂದಿನ ಮಹಾಸಭೆ ನಡಾವಳಿಕೆಯನ್ನು ಓದಿದರು. ಲೆಕ್ಕಪತ್ರ ಗಳನ್ನು ನಿರ್ದೇಶಕ ಕುಡುವಂಡ ಬಿ ಉತ್ತಪ್ಪ ಮಂಡಿಸಿದ ನಂತರ ಆಡಳಿತ ಮಂಡಳಿ ವರದಿ ಯನ್ನು ಖಜಾಂಚಿ ಕಾಂಡೇರ ಲಲ್ಲು ಕುಟ್ಟಪ್ಪ ವಾಚಿಸಿದರು. ೧೦ನೇ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದ ಸದಸ್ಯರ ಮಕ್ಕಳಿಗೆ ನಗದು ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಉಪಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ವಂದಿಸಿದರು.
ವೇದಿಕೆಯಲ್ಲಿ ಸಾಂಸ್ಕೃತಿಕ ಅಧ್ಯಕ್ಷ ಚೊಟ್ಟೆಯಂಡ ಸಂಜು ಕಾವೇರಪ್ಪ, ನಿರ್ದೇಶಕರುಗಳಾದ ಬಲ್ಯಂಡ ವಿಜು ನಂಜಪ್ಪ, ಚೆಟ್ಟಿಯಾರಂಡ ಸುರೇಶ್ ಉತ್ತಯ್ಯ, ಮಂಡೇಟಿರ ಅಶ್ವಿನ್, ಆಪಾಡಂಡ ರವಿ ಚಿಟ್ಯಪ್ಪ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಚೊಟ್ಟೆಯಂಡ ಎ. ಶರತ್, ಕುಂಡ್ಯೋಳAಡ ಸಂಜು ಅಯ್ಯಪ್ಪ ಉಪಸ್ಥಿತರಿದ್ದರು.