ಪ್ರಾಚೀನ, ಆದಿಮ ಸಂಜಾತ, ಏಕ-ಜನಾಂಗೀಯ ಮತ್ತು ಪ್ರಕೃತಿ ಆರಾಧಕ ಕೊಡವ ಜನಾಂಗದ ಧ್ವನಿಯಾಗಿರುವ ಸಿ.ಎನ್.ಸಿ - ಕೊಡವ ನ್ಯಾಷನಲ್ ಕೌನ್ಸಿಲ್, ಕೊಡವರ ಧಾರ್ಮಿಕ ಸಂಸ್ಕಾರವಾದ ಕೋವಿ-ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಬೇಕೆಂದು ಒತ್ತಾಯಿಸುತ್ತಾ ಬರುತ್ತಿದೆ.

ಕೋವಿ-ತೋಕ್ ಧರಿಸುವ ಮತ್ತು ಆರಾಧಿಸುವ ಹಕ್ಕನ್ನು “ಅತ್ಯಗತ್ಯ ಧಾರ್ಮಿಕ ಆಚರಣೆ” (ಇsseಟಿಣiಚಿಟ ಖeಟigious Pಡಿಚಿಛಿಣiಛಿe) ೨೫ ಮತ್ತು ೨೬ರ ಅಡಿಯಲ್ಲಿ “ಅತ್ಯಗತ್ಯ ಧಾರ್ಮಿಕ ಚಟುವಟಿಕೆಗಳ ಕಾಯ್ದೆ”ಯ ಮೂಲಕ ಅಥವಾ ಆಯುಧ ಕಾಯ್ದೆ, ೧೯೫೯ ಕ್ಕೆ ಸೂಕ್ತ ತಿದ್ದುಪಡಿ ತರುವ ಮೂಲಕ ಖಾಯಂ ರಕ್ಷಣೆ ನೀಡಬೇಕು.

ಆಯುಧ (ತಿದ್ದುಪಡಿ) ಕಾಯ್ದೆ, ೨೦೧೯ರ ಪ್ರಕಾರ, ಆಯುಧ ಕಾಯ್ದೆ ೧೯೫೯ರ ಅಡಿಯಲ್ಲಿ ನೀಡಲಾದ ವಿಶೇಷ ವಿನಾಯಿತಿಗಳಿಗೂ ಸಹ ಪ್ರತಿ ೧೦ ವರ್ಷಗಳಿಗೊಮ್ಮೆ ನವೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಆಯುಧ ನಿಯಮಾವಳಿಗಳು ೧೯೬೨ರ ಅಡಿಯಲ್ಲಿ ಕೊಡವ ಜನಾಂಗಕ್ಕೆ ಇರುವ ಪ್ರಸ್ತುತ ವಿನಾಯಿತಿಯು ೨೦೨೯ರಲ್ಲಿ ಮುಕ್ತಾಯಗೊಳ್ಳಲಿದೆ.

ಇದು ಆಡಳಿತಾತ್ಮಕ ಅಥವಾ ಶಾಸಕಾಂಗದ ಕ್ರಮದ ಮೂಲಕ ಕೊಡವರ ಪ್ರಾಚೀನ ಧಾರ್ಮಿಕ ಸಂಸ್ಕಾರವಾದ ಕೋವಿ-ತೋಕ್ ನಶಿಸಿಹೋಗುವ ಸನ್ನಿಹಿತ ಆಪತ್ತನ್ನು ತಂದೊಡ್ಡಿದೆ. ಒಂದು ಅತ್ಯಗತ್ಯ ಧಾರ್ಮಿಕ ಆಚರಣೆಯು ಆಡಳಿತಾತ್ಮಕ ಅವಧಿ ಮುಕ್ತಾಯಕ್ಕೆ ಒಳಪಡಲು ಸಾಧ್ಯವಿಲ್ಲ.

ಸುಪ್ರೀಂ ಕೋರ್ಟ್ನಲ್ಲಿನ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ವರ್ಸಸ್ ಸ್ಟೇಟ್ ಆಫ್ ಕೇರಳ [೨೦೧೯ ೧೧ ಖಅಅ ೧] ಪ್ರಕರಣದಲ್ಲಿ ತೀರ್ಪು ನೀಡಿರುವಂತೆ, “ಅತ್ಯಗತ್ಯತೆ”ಯನ್ನು ಧರ್ಮದ ಸಿದ್ದಾಂತಗಳು ನಿರ್ಧರಿಸುತ್ತವೆಯೇ ಹೊರತು ಸರ್ಕಾರದ ನೀತಿಗಳಲ್ಲ ಎಂದು ಉಲ್ಲೇಖಿಸಲಾಗಿದೆ.

ಆದ್ದರಿಂದ, ೨೦೨೯ರ ನಂತರ ಕೋವಿ-ತೋಕ್ ಆಚರಣೆಗೆ ಯಾವುದೇ ಸಾಂವಿಧಾನಿಕ ಧಕ್ಕೆ ಬಾರದಂತೆ ತಡೆಯಲು, ಕೊಡವ ಧಾರ್ಮಿಕ ಸಂಸ್ಕಾರವನ್ನು ಸಂವಿಧಾನದ ವಿಧಿ ೨೫ ಮತ್ತು ೨೬ರ ಅಡಿಯಲ್ಲಿ “ಅತ್ಯಗತ್ಯ ಧಾರ್ಮಿಕ ಚಟುವಟಿಕೆಗಳ ಕಾಯ್ದೆ”ಯ ವ್ಯಾಪ್ತಿಗೆ ತರಬೇಕು. ಈ ಮೂಲಕ ಆಯುಧ ಕಾಯ್ದೆಯ ತಿದ್ದುಪಡಿಗಳ ಪ್ರಭಾವಕ್ಕೆ ಒಳಗಾಗದಂತೆ ಇದಕ್ಕೆ ಶಾಶ್ವತ ರಕ್ಷಣೆ ನೀಡಬೇಕು.

ಭಾರತದ ಉಕ್ಕಿನ ಮನುಷ್ಯ ಮತ್ತು ಅಖಂಡ ಭಾರತದ ಶಿಲ್ಪಿ ಸರ್ದಾರ್ ವಲ್ಲಭಭಾಯ್ ಪಟೇಲರು, ೧೯೪೯ರಲ್ಲಿ ರಾಷ್ಟಿçÃಯ ಸಂಯೋಜನೆ ಮತ್ತು ಆಯುಧ ನೀತಿಯ ಕುರಿತಾದ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ ಕೊಡವರ “ಕೋವಿ ಹೆಮ್ಮೆ”ಯು ಅವರ ಅಸ್ಮಿತೆ, ನಿಷ್ಠೆ ಮತ್ತು ದೇಶದ ಗಡಿಗಳನ್ನು ಕಾಯ್ದ ಅವರ ಶೌರ್ಯದ ಅವಿಭಾಜ್ಯ ಅಂಗ ಎಂಬುದನ್ನು ಗುರುತಿಸಿದ್ದರು.

ಆಯುಧ ಕಾಯ್ದೆಯ ೧೦ ವರ್ಷಗಳ ನವೀಕರಣ ಕ್ರಮದಲ್ಲಿ ಈ ಪವಿತ್ರ ಸಂಪ್ರದಾಯವನ್ನು ೨೦೨೯ರಲ್ಲಿ ಕೊನೆಗೊಳ್ಳಲು ಬಿಡುವುದು ಅಥವಾ ಏಕರೂಪ ನಾಗರಿಕ ಸಂಹಿತೆಯ ಅಡಿಯಲ್ಲಿ ಇದನ್ನು ದುರ್ಬಲಗೊಳಿಸುವುದು ಸರ್ದಾರ್ ಪಟೇಲರ ದೃಷ್ಟಿಕೋನಕ್ಕೆ ಮತ್ತು ಸಂವಿಧಾನದ ವಿಧಿ ೨೫ ಮತ್ತು ೨೬ರ ಅಡಿಯಲ್ಲಿ ಭಾರತದ ಬಹುತ್ವದ ಸಂಸ್ಕೃತಿಯನ್ನು ಗೌರವಿಸಿದ ಸಂವಿಧಾನ ಸಭೆಯ ನಿಲುವಿಗೆ ಬಗೆಯುವ ದ್ರೋಹವಾಗುತ್ತದೆ.

೨೦೧೯ರ ಆಯುಧ (ತಿದ್ದುಪಡಿ) ಕಾಯ್ದೆಯು ವಿಶೇಷ ವಿನಾಯಿತಿಗಳನ್ನೂ ಸಹ ೧೦ ವರ್ಷಗಳಿಗೊಮ್ಮೆ ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ. ನಮ್ಮ ವಿನಾಯಿತಿಯು ೨೦೨೯ಕ್ಕೆ ಕೊನೆಗೊಳ್ಳಲಿದ್ದು, ಏಕರೂಪ ನಾಗರಿಕ ಸಂಹಿತೆ ಅನುಷ್ಠಾನದ ಸಂದರ್ಭದಲ್ಲಿ ಕೋವಿ-ತೋಕ್‌ಗೆ ಸ್ಪಷ್ಟ ರಕ್ಷಣೆ ನೀಡುವುದು ಅತ್ಯಗತ್ಯ.

ಏಕರೂಪ ನಾಗರಿಕ ಸಂಹಿತೆ (Uಅಅ) ಮಸೂದೆಯಲ್ಲಿ ಕೊಡವರ ಕೋವಿ-ತೋಕ್ ಗಾಗಿ ವಿಶೇಷ ರಕ್ಷಣಾತ್ಮಕ ನಿಯಮವನ್ನು (Sಚಿviಟಿg ಅಟಚಿuse) ಸೇರಿಸಬೇಕು ಮತ್ತು ಇದನ್ನು ಆಯುಧ ಕಾಯ್ದೆಯ ನವೀಕರಣ ಕ್ರಮದಿಂದ ಮುಕ್ತಗೊಳಿಸಬೇಕು.

ಕೊಡವರು ವಿಶಿಷ್ಟ ಜನಾಂಗೀಯ-ಸಾAಸ್ಕೃತಿಕ, ಸಮರ ಸಮುದಾಯವಾಗಿದ್ದು, ಹಿಂದೂ/ಮುಸ್ಲಿA/ಕ್ರಿಶ್ಚಿಯನ್ ವೈಯಕ್ತಿಕ ಕಾನೂನುಗಳ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ಧಾರ್ಮಿಕ ಸಂಸ್ಕಾರವಾದ ಕೋವಿ-ತೋಕ್ ನಮ್ಮ ಅಸ್ಮಿತೆ ಮತ್ತು ಶೌರ್ಯದ ಪ್ರತಿಬಿಂಬವಾಗಿದ್ದು, ಇದನ್ನು Uಅಅ ಅಡಿಯಲ್ಲಿ ಅನುಮೋದಿಸಿ ರಕ್ಷಿಸಬೇಕು. ವಿಶೇಷ ರಕ್ಷಣಾತ್ಮಕ ನಿಯಮವನ್ನು ಸೇರಿಸಲು ವಿಫಲವಾದರೆ ಅದು ಸಂವಿಧಾನದ ವಿಧಿ ೨೫/೨೬ ರ ಉಲ್ಲಂಘನೆಯಾಗುತ್ತದೆ ಮತ್ತು ಕೇಂದ್ರ ಸರ್ಕಾರದ ಭರವಸೆಗೆ ವಿರುದ್ಧವಾಗಿರುತ್ತದೆ. ೨೦೨೯ರ ಆಯುಧ ಕಾಯ್ದೆಯ ವಿನಾಯಿತಿಯ ಮುಕ್ತಾಯದ ಹಿನ್ನೆಲೆಯಲ್ಲಿ, ಖಾಯಂ ಸಾಂವಿಧಾನಿಕ ರಕ್ಷಣೆ ನೀಡಲು Uಅಅ ಕೊನೆಯ ಅವಕಾಶವಾಗಿದೆ.

೧೪ ವರ್ಷಗಳ ಕಾನೂನು ಹೋರಾಟದ ಫಲವಾಗಿ ೨೦೨೩ ರಲ್ಲಿ ಗೆಜೆಟ್ ಅಧಿಸೂಚನೆಯ ಮೂಲಕ ‘ಕೊಡಗರು‘ ಬದಲಾಗಿ ಶಾಸ್ತಿçÃಯ “ಕೊಡವ” ನಾಮಕರಣವನ್ನು ಜಾರಿಗೊಳಿಸಲಾಯಿತು. ದಶಕಗಳ ಕಾಲ ಹೆಸರನ್ನು ವಿರೂಪಗೊಳಿಸಿದ್ದ ಸರ್ಕಾರ, ಈಗ ಆ ಮರುಸ್ಥಾಪಿತ ಹೆಸರಿನೊಂದಿಗೆ ಬೆರೆತಿರುವ ಧಾರ್ಮಿಕ ಆಚರಣೆಯನ್ನು ಅಳಿಸಲು ಆಯುಧ ಕಾಯ್ದೆಯನ್ನು ಬಳಸಲು ಸಾಧ್ಯವಿಲ್ಲ.

ಕೋವಿ ಪೂಜನೀಯ ವಸ್ತು

ಕೋವಿಯು ಕೊಡವರಿಗೆ ಪೂರ್ವಜರು, ಜೀವನಾಡಿ ಕಾವೇರಿ, ಪವಿತ್ರ ಮಂದ್, ಪ್ರಕೃತಿ ಮಾತೆ ಮತ್ತು ಪೂರ್ವಜರ ಆರಾಧನಾ ಸ್ಥಳವಾದ ‘ಕಾರೋಣ ನೆಲೆ’ಯಷ್ಟೇ ಪೂಜನೀಯ ವಸ್ತುವಾಗಿದೆ.

ಕೋವಿಯು ಪ್ರಾಚೀನ ಕೊಡವ ಸಂಸ್ಕೃತಿಯ ಹೆಮ್ಮೆಯ ಸಂಕೇತವಾಗಿದೆ. ಇದು ಧಾರ್ಮಿಕ ಲಾಂಛನ ಮಾತ್ರವಲ್ಲದೆ ಕೊಡವ ಜನಾಂಗದ ಸಾಂಸ್ಕೃತಿಕ ಮತ್ತು ಜಾನಪದ ಸಂಕೇತವಾಗಿದೆ. ಇದನ್ನು ಅನಾದಿ ಕಾಲದಿಂದಲೂ ಕೊಡವರ ಜನನ, ವಿವಾಹ, ಮರಣ, ಪುತ್ತರಿ (ಸುಗ್ಗಿ) ಮತ್ತು ಸಮರ ವಿಧಿವಿಧಾನಗಳಲ್ಲಿ ಬಳಸಲಾಗುತ್ತಿದ್ದು, ಇದು ಕೊಡವ ಅಸ್ಮಿತೆಯಿಂದ ಬೇರ್ಪಡಿಸಲಾಗದಂತಿದೆ.

ಪ್ರಾಚೀನ, ಆದಿಮ ಸಂಜಾತ, ಏಕ-ಜನಾಂಗೀಯ, ಪ್ರಕೃತಿ ಆರಾಧಕ ಕೊಡವರ ಧಾರ್ಮಿಕ ಸಂಸ್ಕಾರವಾದ “ಕೋವಿ-ತೋಕ್” ಅನ್ನು ಭಾರತದ ಸಂವಿಧಾನದ ವಿಧಿ ೨೫ ಮತ್ತು ೨೬ರ ಅಡಿಯಲ್ಲಿ “ಅತ್ಯಗತ್ಯ ಧಾರ್ಮಿಕ ಆಚರಣೆ” ಎಂದು ಘೋಷಿಸಬೇಕು.

“ಅತ್ಯಗತ್ಯ ಧಾರ್ಮಿಕ ಚಟುವಟಿಕೆಗಳ ಕಾಯ್ದೆ”ಯ ಮೂಲಕ ಅಥವಾ ಆಯುಧ ಕಾಯ್ದೆ, ೧೯೫೯ ಕ್ಕೆ ಸೂಕ್ತ ತಿದ್ದುಪಡಿಗಳನ್ನು ತರುವ ಮೂಲಕ, ಕೊಡವರು ಕೋವಿ-ತೋಕ್ ಅನ್ನು ಹೊಂದುವ, ಆರಾಧಿಸುವ ಮತ್ತು ಸಾಂಪ್ರದಾಯಿಕವಾಗಿ ಬಳಸುವ ಧಾರ್ಮಿಕ ಹಕ್ಕುಗಳನ್ನು ಗುರುತಿಸಿ ಅಗತ್ಯ ಶಾಸನಬದ್ಧ ರಕ್ಷಣೆ ನೀಡಬೇಕು.

ಈ ರಕ್ಷಣೆಯನ್ನು ಸಾಂವಿಧಾನಿಕ ಅಧಿಕಾರಿಗಳು ಮತ್ತು ದೇಶದ ಅತ್ಯುನ್ನತ ನ್ಯಾಯಾಂಗ ಪ್ರಾಧಿಕಾರವು ಅನುಮೋದಿಸಬೇಕು, ಆ ಮೂಲಕ ಕೊಡವರ ಕೋವಿ-ತೋಕ್ ಮೇಲಿನ ಹಕ್ಕುಗಳು ಮತ್ತು ಸವಲತ್ತುಗಳು ಅಖಂಡವಾಗಿ ಉಳಿಯುವಂತೆ ಮಾಡಬೇಕು.

ವಿನಾಯಿತಿಯ ಇತಿಹಾಸ:

ಬ್ರಿಟಿಷ್ ಕಾಲ: ಕೊಡವ ಜನರ ಸಮರ ಪರಂಪರೆ ಮತ್ತು ಅವರ ನಿಷ್ಠೆಯನ್ನು ಗುರುತಿಸಿ ೧೯ನೇ ಶತಮಾನದಲ್ಲಿ ಬ್ರಿಟಿಷ್ ಆಡಳಿತವು ಮೊದಲ ಬಾರಿಗೆ ಈ ವಿನಾಯಿತಿಯನ್ನು ನೀಡಿತು.

ಭಾರತೀಯ ಆಯುಧ ಕಾಯ್ದೆ, ೧೯೫೯: ಆಧುನಿಕ ಆಯುಧ ಕಾಯ್ದೆಯನ್ನು ಜಾರಿಗೆ ತಂದಾಗ, ಸರ್ಕಾರವು ಈ ವಿನಾಯಿತಿಯನ್ನು ಕಾಯ್ದೆಯ ಸೆಕ್ಷನ್ ೪೧ ರ ಅಡಿಯಲ್ಲಿ ಮುಂದುವರಿಸಿತು. ಇದು ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೆಲವು ವರ್ಗದ ಜನರಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ೧೯೭೧ ರ ೨೬ನೇ ಸಂವಿಧಾನ ತಿದ್ದುಪಡಿಯ ಮೂಲಕ ರಾಜಪ್ರಭುತ್ವದ ಸವಲತ್ತುಗಳು ಮತ್ತು ಬಿರುದುಗಳನ್ನು ವ್ಯವಸ್ಥಿತವಾಗಿ ರದ್ದುಗೊಳಿಸಲಾಯಿತು.

ಕೊಡವ ಸಮುದಾಯಕ್ಕೆ ಇದ್ದ ವಿನಾಯಿತಿಯು ಈ ರದ್ದತಿಯಿಂದ ಹೊರಗುಳಿಯಿತು. ಸರ್ಕಾರವು ಈ ಸವಲತ್ತನ್ನು ಮುಂದುವರಿಸಿತು, ಏಕೆಂದರೆ ಇದು ಸಮುದಾಯದ ಸಾಂಸ್ಕೃತಿಕ ಮನೋಭಾವ ಮತ್ತು ಸಾಂಪ್ರದಾಯಿಕ ಹಕ್ಕುಗಳಿಗೆ ಸಂಬAಧಿಸಿದ್ದಾಗಿದೆಯೇ ಹೊರತು ಸಾಮಂತ ಅಥವಾ ರಾಜಪ್ರಭುತ್ವದ ಸ್ಥಾನಮಾನಕ್ಕೆ ಅಲ್ಲ.