ಕೂಡಿಗೆ, ಜೂ. ೧೪: ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೂಡಿಗೆ ಪದವಿಪೂರ್ವ ಕಾಲೇಜು ಉಪನ್ಯಾಸಕ ನಾಗಪ್ಪ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ತಿತಿಮತಿ ಕಾಲೇಜಿನ ಉಪನ್ಯಾಸಕಿ ರೂಪ, ಪ್ರಧಾನ ಕಾರ್ಯದರ್ಶಿಯಾಗಿ ಐಗೂರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹೆಚ್.ಕೆ. ಉಮೇಶ್ ಕುಮಾರ್, ಕಾರ್ಯಾಧ್ಯಕ್ಷರಾಗಿ ಶನಿವಾರಸಂತೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಿ.ಟಿ. ಸೋಮಶೇಖರ್, ಖಜಾಂಚಿಯಾಗಿ ಕುಶಾಲನಗರ ಕಾಲೇಜಿನ ನಾಗೇಶ್, ಸಂಘಟನಾ ಕಾರ್ಯದರ್ಶಿಯಾಗಿ ಕುಶಾಲನಗರ ಪದವಿಪೂರ್ವ ಕಾಲೇಜಿನ ಟಿ.ಡಿ. ರಾಜು, ಕಾರ್ಯ ದರ್ಶಿಯಾಗಿ ವೀರಾಜಪೇಟೆ ಪದವಿಪೂರ್ವ ಕಾಲೇಜಿನ ವಿವೇಕ್, ಜಂಟಿ ಕಾರ್ಯದರ್ಶಿಯಾಗಿ ಮಾದಾಪುರ ಕಾಲೇಜಿನ ರಾಜು ಸುಂದರA, ಸಂಚಾಲಕರಾಗಿ ತಿತಿಮತಿ ಕಾಲೇಜಿನ ವಿನೋದ್ ಕುಮಾರ್ ಆಯ್ಕೆಗೊಂಡಿದ್ದಾರೆ.