ಸೋಮವಾರಪೇಟೆ, ಜೂ. ೧೪: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಪದವಿ ಪ್ರದಾನ ಸಮಾರಂಭ ಓ.ಎಲ್.ವಿ. ಹಾಲ್‌ನಲ್ಲಿ ನಡೆಯಿತು.

ವಿದ್ಯಾಸಂಸ್ಥೆಯ ಸಂಚಾಲಕ ಫಾ. ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮರಿಯಾನಗರ ಧರ್ಮಕೇಂದ್ರದ ಗುರುಗಳಾದ ಫಾ. ರಾಜೇಂದ್ರ, ಸಿಸ್ಟರ್ ದಯಾ, ಓ.ಎಲ್.ವಿ. ಚರ್ಚಿನ ಕಾರ್ಯದರ್ಶಿ ಶೀಲಾ ಡಿಸೋಜಾ, ಪ್ರಾಂಶುಪಾಲ ಬಿ.ಆರ್. ಹರೀಶ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಪಿ.ಸಿ. ರಿತೇಶ್, ಎಚ್.ಡಿ. ಧೀರಜ್, ಬಿ.ಕೆ. ಮೋಕ್ಷಿತ್ ಅವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.