ಗೋಣಿಕೊಪ್ಪ ವರದಿ, ಜೂ. ೧೪: ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಜನ್ ಹಾಕಿ ಟೂರ್ನಿಯಲ್ಲಿ ಬೇಗೂರು, ಅಮ್ಮತ್ತಿ, ಅಂಜಿಗೇರಿ ನಾಡ್ ಹಾಗೂ ಟವರ್ಸ್ ತಂಡಗಳು ಸೆಮಿ ಫೈನಲ್ ಪ್ರವೇಶಿಸಿವೆ.
ಭಾನುವಾರ ನಡೆದ ಪಂದ್ಯದಲ್ಲಿ ಇವೈಸಿ ಬೇಗೂರು ತಂಡವು ಕುತ್ತ್ನಾಡ್ ಸ್ಟೆçöÊಕರ್ಸ್ ತಂಡವನ್ನು ೪-೧ ಗೋಲುಗಳಿಂದ ಮಣಿಸಿತು. ಬೇಗೂರು ಪರ ಬೋಪಣ್ಣ, ಗವನ್, ದೀಪಕ್, ಮಣಿ ತಲಾ ಒಂದೊAದು ಗೋಲು ಹೊಡೆದರು. ಕುತ್ತ್ನಾಡ್ ಪರ ಸುಬ್ಬಯ್ಯ ಏಕೈಕ ಗೋಲು ಬಾರಿಸಿದರು.
ಅಮ್ಮತ್ತಿ ಎಎಸ್‌ಸಿ ತಂಡವು ೩-೨ ಗೋಲುಗಳ ಅಂತರದಲ್ಲಿ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ಎ ತಂಡದ ವಿರುದ್ಧ ಜಯಿಸಿತು. ಅಮ್ಮತ್ತಿ ಪರವಾಗಿ ವಿಜಯ್ ಉತ್ತಪ್ಪ, ಕಾರ್ಯಪ್ಪ, ನಾಣಯ್ಯ ತಲಾ ಒಂದೊAದು ಗೋಲು ಪೇರಿಸಿದರು. ಪೊನ್ನಂಪೇಟೆ ಪರ ಪ್ರೀತಂ ೨ ಗೋಲುಗಳಿಸಿದರು.
ಅಂಜಿಗೇರಿ ನಾಡ್ ತಂಡ ವೀರಾಜಪೇಟೆ ಕೊಡವ ಸಮಾಜ ಕ್ಲಬ್ ತಂಡದ ವಿರುದ್ಧ ೪-೧ ಗೋಲುಗಳ ಜಯ ಸಾಧಿಸಿತು. ಅಂಜಿಗೇರಿ ಪರವಾಗಿ ಪೊನ್ನಣ್ಣ, ಸಿದ್ದಾರ್ಥ್, ಸುಪ್ರಿತ್, ಲವ ಒಂದೊAದು ಗೋಲು ಹೊಡೆದರು. ವೀರಾಜಪೇಟೆ ಪರ ಪ್ರಜ್ವಲ್ ಏಕೈಕ ಗೋಲು ಬಾರಿಸಿದರು.
ವೀರಾಜಪೇಟೆ ಟವರ್ಸ್ ತಂಡ ಕಿರ್ಗೂರ್ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು. ಟವರ್ಸ್ ಆಟಗಾರರಾದ ನಾಣಿ ಹಾಗೂ ಚಂದನ್ ತಲಾ ಒಂದೊAದು ಗೋಲು ದಾಖಲಿಸಿದರು. ಕಿರ್ಗೂರ್ ಪರ ದೇವಯ್ಯ ೧ ಗೋಲು ಹೊಡೆದರು.
ಇಂದಿನ ಪಂದ್ಯಗಳು
ಬೆ. ೯.೩೦ ; ಅಂಜಿಗೇರಿ ನಾಡ್ ಗಿ/s ವೀರಾಜಪೇಟೆ ಟವರ್ಸ್
೧೧.೦೦ ; ಇವೈಸಿ ಬೇಗೂರ್ ಗಿ/s ಅಮ್ಮತ್ತಿ ಎಎಸ್‌ಸಿ