ಸುಂಟಿಕೊಪ್ಪ, ಜೂ. ೧೩: ಕಳೆದ ೧೧ ದಿನಗಳಿಂದ ಪಂಚಾಯಿತಿ ಕಸ ವಿಲೇವಾರಿ ಟ್ರಾö್ಯಕ್ಟರ್, ಚಾಲಕನಿಲ್ಲದೆ ನಿಂತಿದ್ದು, ಪಕ್ಕದ ೨ ಪಂಚಾಯಿತಿಗಳಲ್ಲಿರುವ ವಾಹನದ ಮೂಲಕ ಕಸ ವಿಲೇವಾರಿಗೆ ಮುಂದಾಗಿರುವುದು ಕಂಡು ಬಂದಿದೆ.

ಸುಂಟಿಕೊಪ್ಪ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಒಂದಾಗಿದೆ. ಸುಂಟಿಕೊಪ್ಪ ೭ ವಾರ್ಡ್ಗಳನ್ನು ಹೊಂದಿದ್ದು ೨೦ ಮಂದಿ ಸದಸ್ಯ ಬಲವನ್ನು ಹೊಂದಿರುವ ಪಂಚಾಯಿತಿಯಾಗಿದೆ. ಸಾಕಷ್ಟು ಬಡಾವಣೆಗಳು ನಿರ್ಮಾಣಗೊಂಡಿದ್ದು ದಿನದಿಂದ ದಿನಕ್ಕೆ ವಾಸದ ಮನೆಗಳು ಮತ್ತು ಜನ ಸಂಖ್ಯೆ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ನೂರಾರು ಪ್ರವಾಸಿಗಾರು ಲಗ್ಗೆಯಿಡುತ್ತಿದ್ದಾರೆ. ಮಳೆಗಾಲವು ಈಗಾಗಲೇ ಪ್ರಾರಂಭವಾಗಿದ್ದು, ಸಾಂಕ್ರಾಮಿಕ ರೋಗಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಮೂಡಿಸಲಾಗುತ್ತಿದೆ. ಆದರೆ ಸಮರ್ಪಕವಾಗಿ ಕಸ ವಿಲೇವಾರಿಗೊಳ್ಳದೆ ಸಾಂಕ್ರಾಮಿಕ ರೋಗಗಳು ಹರಡಿದರೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹಿಂದಿನ ಆಡಳಿತ ಮಂಡಳಿಯ ಸತತ ಪ್ರಯತ್ನದ ಫಲವಾಗಿ ಕಸ ವಿಲೇವಾರಿಗಾಗಿ ನೂತನ ಟ್ರಾö್ಯಕ್ಟರ್ ಅನ್ನು ಖರೀದಿಸಲಾಗಿತ್ತು. ದಿನಗೂಲಿ ಆಧಾರದ ಮೇಲೆ ಓರ್ವ ಚಾಲಕನನ್ನು ನೇಮಕಗೊಳಿಸಿಕೊಂಡು ಕಸ ವಿಲೇವಾರಿ ಮಾಡಲಾಗುತ್ತಿತು. ಆದರೆ ೧೦ ದಿನಗಳ ಹಿಂದೆ ಟ್ರಾö್ಯಕ್ಟರ್‌ನ ದಿನಗೂಲಿ ಚಾಲಕ ಕೆಲಸವನ್ನು ಬಿಟ್ಟು ಹೋಗಿದ್ದು, ಪರ್ಯಾಯ ವ್ಯವಸ್ಥೆಗೆ ಮುಂದಾಗಿಲ್ಲವೆAದು ಗ್ರಾಮಸ್ಥರು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ೧೧ ದಿನಗಳ ಹಿಂದೆ ದಿನಗೂಲಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಕೆಲಸವನ್ನು ತೊರೆದು ಹೋಗಿದ್ದು, ಇದರಿಂದ ಕಸ ವಿಲೇವಾರಿಗೆ ಸಮಸ್ಯೆ ಎದುರಾಗಿರುವ ಹಿನ್ನಲೆಯಲ್ಲಿ ಪಕ್ಕದ ೨ ಪಂಚಾಯಿತಿಗಳಿAದ ಕಸ ವಿಲೇವಾರಿಗಾಗಿ ೨ ಗೂಡ್ಸ್ ಆಟೋಗಳ ಮೂಲಕ ವಿಲೇವಾರಿಗೊಳಿಸಲಾಗುತ್ತಿದೆ, ಆದರೂ ನಿರೀಕ್ಷಿತ ಮಟ್ಟದಲ್ಲಿ ವಿಲೇವಾರಿಗೊಳಿಸಲು ಕಷ್ಟ ಸಾಧ್ಯವಾಗುತ್ತಿದೆ. ಶೀಘ್ರದಲ್ಲಿ ಟ್ರಾö್ಯಕ್ಟರಿಗೆ ಚಾಲಕನ ನೇಮಕ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ತಿಳಿಸಿದ್ದಾರೆ.

ಸುಂಟಿಕೊಪ್ಪ ಪಂಚಾಯಿತಿ ಕಳೆದ ೧೧ ದಿನಗಳಿಂದ ಚಾಲಕನಿಲ್ಲದೆ ಟ್ರಾö್ಯಕ್ಟರ್ ತೆರಳದೆ ಕಸ ವಿಲೇವಾರಿಗೆ ಸಮಸ್ಯೆ ಎದುರಾಗುತ್ತಿದೆ. ಸಂಬAಧಿಸಿದ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಸಂಬAಧಿಸಿದ ಮೇಲಾಧಿಕಾರಿಗಳು ಗಮನಹರಿಸಿ ಚಾಲಕನ ನೇಮಕಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್ ಸುನಿಲ್‌ಕುಮಾರ್ ಒತ್ತಾಯಿಸಿದ್ದಾರೆ.