ವೀರಾಜಪೇಟೆ, ಜೂ. ೧೩: ಪ್ರತೀಶ್ ಪೂವಯ್ಯ ಕಾಸ್ಟಿಂಗ್ ಏಜೆನ್ಸಿ ಮತ್ತು ಪಾತಕ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ವೀರಾಜಪೇಟೆಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಮಿಸೆಸ್, ಮಿಸ್, ಮಿಸ್ಟರ್, ಟೀನ್ ಬಾಯ್, ಟೀನ್ ಗರ್ಲ್, ಪ್ರಿನ್ಸ್ ಮತ್ತು ಪ್ರಿನ್ಸೆಸ್ ೨೦೨೬ ಸ್ಪರ್ಧೆ ಆಕರ್ಷಕವಾಗಿ ಜರುಗಿತು.

ಈ ಕಾರ್ಯಕ್ರಮವು ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ಕೊಡಗು ಕಲಾವಿದರ ಸಂಘದ ಸದಸ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಸ್ಪರ್ಧಿಗಳು ತಮ್ಮ ಆತ್ಮವಿಶ್ವಾಸ, ಪ್ರತಿಭೆ, ವ್ಯಕ್ತಿತ್ವ ಹಾಗೂ ವೇದಿಕೆ ಮೇಲಿನ ಪ್ರದರ್ಶನದ ಮೂಲಕ ತೀರ್ಪುಗಾರರು ಮತ್ತು ಪ್ರೇಕ್ಷಕರ ಮನಗೆದ್ದರು. ಎಲ್ಲಾ ವಿಭಾಗಗಳಲ್ಲಿಯೂ ತೀವ್ರ ಪೈಪೋಟಿ ಕಂಡುಬAದಿತು.

ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಹಾಗೂ ಸಮಾಜಸೇವಕಿ ಕಾಣತಂಡ ಬೀನಾ ಜಗದೀಶ್, ಮಿಸ್ ಸೌತ್ ಇಂಡಿಯಾ ಮಾಡೆಲ್ ೨೦೨೬ ಮೊಳ್ಳೆರ ನಿಶಿ ಅಪ್ಪಣ್ಣ ಹಾಗೂ ಮಿಸ್ಟರ್ ಕೂರ್ಗ್ ೨೦೨೩ ತೀತಿರ ಕುಟ್ಟಪ್ಪ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಕೊಡವ ಚಿತ್ರರಂಗ ಹಾಗೂ ಮನರಂಜನಾ ಕ್ಷೇತ್ರದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಪುಗ್ಗೇರ ಆಕಾಶ್, ಚೇನಂಡ ಗಿರೀಶ್ ಪೂಣಚ್ಚ, ಸೋಮೆಯಂಡ ಬೋಸ್ ಬೆಳ್ಳಿಯಪ್ಪ, ತಾತಂಡ ಮಿನ್ನು, ಕುಪ್ಪಣಮಾಡ ಭೂಮಿಕಾ, ಕುಪ್ಪಣಮಾಡ ಜಾನ್ಸಿ, ಟಿ.ಡಿ. ಮೋಹನ್, ಸಂಕೇತ್ ಶಿವಪ್ಪ, ವಿಷ್ಣು ಸೇರಿದಂತೆ ಅನೇಕ ಕಲಾವಿದರು ಮತ್ತು ನೃತ್ಯ ನಿರ್ದೇಶಕರು ಕಾರ್ಯಕ್ರಮಕ್ಕೆ ಮೆರುಗು ತಂದರು.

ಸಾAಸ್ಕೃತಿಕ ಕಾರ್ಯಕ್ರಮಗಳೂ ವಿಶೇಷ ಆಕರ್ಷಣೆಯಾಗಿದ್ದು, ಇಂಟು ಪೀಸ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಮನಮೋಹಕ ನೃತ್ಯ ಪ್ರದರ್ಶನಗಳು ನಡೆದವು. ಟಿ.ಡಿ. ಮೋಹನ್, ವಿಷ್ಣು ಹಾಗೂ ಇತರ ಗಾಯಕರು ಸಂಗೀತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಸ್ಪರ್ಧೆಯ ಫಲಿತಾಂಶಗಳು :

ಮಿಸೆಸ್ ವಿಭಾಗ : ವಿಜೇತೆ - ಶಯನ್ ಕಾರ್ಯಪ್ಪ ಕಲ್ಲೇಂಗಡ

ಪ್ರಥಮ ರನ್ನರ್ ಅಪ್ - ಕಾವ್ಯ ಗೌಡ

ದ್ವಿತೀಯ ರನ್ನರ್ ಅಪ್ - ಅಮ್ಮಂಡ ಪಲ್ಲವಿ ಅಶ್ವತ್

ಮಿಸ್ ವಿಭಾಗ : ವಿಜೇತೆ - ಮೋಕ್ಷಾ ಅಪ್ಪಾರಂಡ

ಪ್ರಥಮ ರನ್ನರ್ ಅಪ್ - ಪುಗ್ಗೇರ ಪಾಯಲ್ ಪೊನ್ನಮ್ಮ

ದ್ವಿತೀಯ ರನ್ನರ್ ಅಪ್ - ಕುಪ್ಪಣಮಾಡ ಮೇಘನಾ ಮುತ್ತಮ್ಮ

ಟೀನ್ ಗರ್ಲ್ ವಿಭಾಗ : ವಿಜೇತೆ - ಶ್ರಾವಣಿ ರಾಜೇಶ್

ಪ್ರಥಮ ರನ್ನರ್ ಅಪ್ - ಸಿಯಲ್ ಗಂಗಮ್ಮ

ದ್ವಿತೀಯ ರನ್ನರ್ ಅಪ್ - ದಿತಿ ದೇಚಮ್ಮ

ಟೀನ್ ಬಾಯ್ ವಿಭಾಗ :ವಿಜೇತೆ - ವೃಷಭ್ ಉತ್ತಪ್ಪ

ಪ್ರಥಮ ರನ್ನರ್ ಅಪ್ - ಧಿವಿತ್

ದ್ವಿತೀಯ ರನ್ನರ್ ಅಪ್ - ಭವೀಶ್

ಮಿಸ್ಟರ್ ವಿಭಾಗ : ವಿಜೇತೆ - ಕಿಲನ್ ನಾಚಪ್ಪ

ಪ್ರಥಮ, ರನ್ನರ್ ಅಪ್ - ಪ್ರೀತಂ ಎ.ಆರ್.

ಪ್ರಿನ್ಸ್ ವಿಭಾಗ : ವಿಜೇತೆ - ಮೋಕ್ಷಿತ್

ಪ್ರಥಮ ರನ್ನರ್ ಅಪ್ - ಪಳೆಯತಂಡ ಮಯುಕ್ ಮಾದಪ್ಪ

ಪ್ರಿನ್ಸೆಸ್ ವಿಭಾಗ : ವಿಜೇತೆ - ಯಶ್ಮಿಕಾ ಪೊನ್ನಮ್ಮ ಕುಂಡ್ರAಡ

ಪ್ರಥಮ ರನ್ನರ್ ಅಪ್ - ಶ್ರುನಿಖಾ ಭುವನ್ ಕಾಣತಂಡ

ದ್ವಿತೀಯ ರನ್ನರ್ ಅಪ್ - ನಿರ್ವೇದ

ಈ ಸ್ಪರ್ಧೆಯು ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಹಾಗೂ ಫ್ಯಾಷನ್, ಮಾಡೆಲಿಂಗ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಒದಗಿಸಿತು.

ಕಾರ್ಯಕ್ರಮವು ಪ್ರತಿಭೆ, ಸೌಂದರ್ಯ, ಆತ್ಮವಿಶ್ವಾಸ ಹಾಗೂ ಕೊಡವ ಸಮುದಾಯದ ಸಾಂಸ್ಕೃತಿಕ ವೈಭವವನ್ನು ಸಂಭ್ರಮಿಸುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಈ ಕಾರ್ಯಕ್ರಮವನ್ನು ಕೊಡವ ಚಲನಚಿತ್ರರಂಗದ ನಿರ್ದೇಶಕ ಪ್ರತೀಶ್ ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು.