ಶನಿವಾರಸಂತೆ, ಜೂ. ೧೩ : ವೀರಶೈವ ಸಮಾಜವು ಧಾರ್ಮಿಕ ಹಾಗೂ ಸಾಮಾಜಿಕ ಪ್ರಗತಿಗೆ ಸಹಕಾರಿಯಾಗುವಂತಹ ಕಾಯಕ ಮಾಡುತ್ತಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕೊಡಗು ಜಿಲ್ಲೆ ವೀರಶೈವ ಲಿಂಗಾಯತ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಸಂಯುಕ್ತಾಶ್ರಯದಲ್ಲಿ ಸಮೀಪದ ಗುಡುಗಳಲೆ ಜಯದೇವ ಜಾತ್ರಾ ಮೈದಾನದಲ್ಲಿ ಕೊಡಗಿನ ವೀರಶೈವ ಗುರುಪರಂಪರಾ ಸಭಾ ಮಂಟಪದ ಸ್ವಾತಂತ್ರö್ಯ ಹೋರಾಟಗಾರ ಹೆಮ್ಮನೆ ಶ್ರೀ ಪುಟ್ಟಬಸಪ್ಪ(ಕಲ್ಯಾಣಸ್ವಾಮಿ) ವೇದಿಕೆಯಲ್ಲಿ ಶನಿವಾರ ನಡೆದ ಬಸವ ಜಯಂತಿ, ಸಿದ್ದಗಂಗಾ ಮಠದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಜಯಂತಿ, ಜಗದ್ಗುರು ರೇಣುಕಾಚಾರ್ಯ ಜಯಂತಿ, ೨೫೦ ವರ್ಷ ಕೊಡಗನ್ನು ಆಳಿದ ಹಾಲೇರಿ ಅರಸರ ಮತ್ತು ಸ್ವಾತಂತ್ರ‍್ಯ ಹೋರಾಟಗಾರ ಹೆಮ್ಮನೆ ಶ್ರೀ ಪುಟ್ಟಬಸಪ್ಪ(ಕಲ್ಯಾಣಸ್ವಾಮಿ) ಅವರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಹಿಂದಿನ ಆಧುನಿಕ ಯುಗದಲ್ಲಿ ಸುಸಜ್ಜಿತ ಕಾರ್ಯಕ್ರಮ ನಡೆಯಬೇಕೆಂದರೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಒಂದು ಸಮುದಾಯ ಭವನದ ಅವಶ್ಯಕತೆ ಇದೆ ಎಂಬುದನ್ನು ಮನಗಂಡ ಸಮಾಜದ ಎಲ್ಲಾ ಮುಖಂಡÀರು ಸೇರಿ ಭವನ ನಿರ್ಮಾಣದ ನಿರ್ಧಾರ ಮಾಡಿದ್ದು ಇಂದು ಅಡಿಗಲ್ಲನ್ನು ಹಾಕಲಾಗಿದೆ. ಸಮಾಜದ ಎಲ್ಲಾ ದಾನಿಗಳ ಕೃಪೆಯಿಂದ ಭವನ ನಿರ್ಮಾಣವಾಗಲಿದೆ.
ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದ ಲಿಂಗಾಯತ ಅರಸರು ಕೊಡಗನ್ನು ಪ್ರಬಲ ರಾಜ್ಯವಾಗಿ ರೂಪಿಸಿ ಹಾಲೇರಿಯನ್ನು ರಾಜಧಾನಿಯಾಗಿ ಮಾಡಿಕೊಂಡರು. ಹಾಲೇರಿ ಅರಸರು ಬ್ರಿಟಿಷರಿಗೆ ದುಃಸ್ವಪ್ನವಾಗಿದ್ದರು. ೧೮೩೭ರ ಅಮರಸುಳ್ಯ ಸಂಗ್ರಾಮದಲ್ಲಿ ಹೆಮ್ಮನೆ ಪುಟ್ಟಬಸಪ್ಪ ಅವರನ್ನು ಕಲ್ಯಾಣ ಸ್ವಾಮಿ ಎಂದು ಬಿಂಬಿಸಿ ರಾಜನನ್ನಾಗಿ ಮಾಡಿದರು. ೧೩ ದಿನಗಳಷ್ಟೇ ರಾಜನಾಗಿದ್ದ ಪುಟ್ಟಬಸಪ್ಪ ಅವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಲಾಯಿತು. ಇದರೊಂದಿಗೆ ಹಾಲೇರಿ ಅರಸರ ಆಡಳಿತಾವಧಿಯೂ ಕೊನೆಗೊಂಡಿತು ಎಂದು ಸ್ವಾಮೀಜಿ ಸ್ಮರಿಸಿದರು.
ಮಕ್ಕಳಿಗೆ ಸಂಸ್ಕಾರ ನೀಡಿ - ವಿಜಯೇಂದ್ರ
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಸನಾತನ ಧರ್ಮದ ಸಾರವನ್ನು ಬಸವಣ್ಣನವರ ವಚನಗಳಲ್ಲಿ ಕಾಣಬಹುದಾಗಿದೆ. ವೀರಶೈವ - ಲಿಂಗಾಯತ ಸಮಾಜ ಒಂದು ಆಲದ ಮರವಿದ್ದಂತೆ. ಆಚಾರ-ವಿಚಾರಗಳು ಇಂದೂ ಸಮಾಜದಲ್ಲಿ ಉಳಿದು ಬರಲು ಮಹಿಳೆಯರೇ ಕಾರಣ. ತಾಯಂದಿರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳಿಗೆ ಸಂಸ್ಕೃತಿ - ಸಂಸ್ಕಾರ ನೀಡುವ ಹೊಣೆಗಾರಿಕೆ ಮಾತೆಯರ ಮೇಲಿದೆ ಎಂದರು.
ಆಚರಣೆ ಕರ್ತವ್ಯ - ಯದುವೀರ್
ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಮಾತನಾಡಿ, ಬಸವ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಇದರ ಆಚರಣೆ ಎಲ್ಲರ ಕರ್ತವ್ಯ. ಸಂಘಟನೆಯಿAದ ಅನುಭವ ಮಂಟಪ ಕಟ್ಟಿದ ಬಸವಣ್ಣ ಆಚಾರ-ವಿಚಾರಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟರು.ಸಮಾಜ ಸುಧಾರಕ ಬಸವಣ್ಣನವರ ವ್ಯಕ್ತಿತ್ವವನ್ನು ಯುವಜನಾಂಗ ಆದರ್ಶವಾಗಿರಿಸಿಕೊಳ್ಳಬೇಕು.ಮೈಸೂರು ಸಂಸ್ಥಾನದ ಉತ್ತಮ ಆಡಳಿತಕ್ಕೆ ಬಸವಣ್ಣನವರ ಅಧ್ಯಾತ್ಮ ತತ್ವ ಆದರ್ಶವಾಗಿತ್ತು ಎಂದರು.
ಸರ್ಕಾರದಿAದ ಅನುದಾನ - ಮಂತರ್
ಹೆಮ್ಮನೆ ಪುಟ್ಟಬಸಪ್ಪ ಅವರ ಭಾವಚಿತ್ರ ಅನಾವರಣ ಮಾಡಿದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಸಾರ್ವಜನಿಕ ಕೆಲಸ ಮಾಡುವುದು ಜನÀಪ್ರತಿನಿಧಿಗಳ ಕರ್ತವ್ಯ. ಸ್ವಾತಂತ್ರö್ಯ ಹೋರಾಟಗಾರ ಪುಟ್ಟಬಸಪ್ಪ ಅವರ ಸ್ಮಾರಕ ಪುತ್ಥಳಿ ನಿರ್ಮಾಣವಾಗಬೇಕು. ಶ್ರೀಬಸವೇಶ್ವರ ದೇವಸ್ಥಾನದ ಮುಂಭಾಗ ನಿರ್ಮಿಸಿರುವ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ ಅನಾವರಣಕ್ಕೆ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟಿçÃಯ ಅಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಕರೆಸಲಾಗುವುದು. ದೇವಸ್ಥಾನ ಸಮಿತಿ ನಿರ್ಮಿಸುವ ಭವನಕ್ಕೆ ಸರ್ಕಾರದಿಂದ ರೂ.೫೦ ಲಕ್ಷ ಅನುದಾನ ಹಾಗೂ ವೈಯಕ್ತಿಕವಾಗಿ ರೂ.೫ ಲಕ್ಷ ಅನದಾನ ನೀಡುತ್ತೇನೆ ಎಂದು ಭರವಸೆ ನೀಡಿದರು. ೪ಐದನೇ ಪುಟಕ್ಕೆ
ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಬಸವ ಜಯಂತಿ ಶನಿವಾರಸಂತೆ ವ್ಯಾಪ್ತಿಯಲ್ಲಿ ನಡೆದ ಅತ್ಯುತ್ತಮ ಬೃಹತ್ ಸಮಾರಂಭ.ವೀರಶೈವ ಸಮುದಾಯವನ್ನು ಬಲಗೊಳಿಸಬೇಕು.ಬಸವಣ್ಣ ಹಾಗೂ ಶ್ರೀ ಶಿವಕುಮಾರಸ್ವಾಮೀಜಿ ಸಮಾಜಕ್ಕೆ ಶಕ್ತಿ ಕೊಟ್ಟವರು.ದೇವಸ್ಥಾನ ಭವನಕ್ಕೆ ವೈಯಕ್ತಿಕವಾಗಿ ರೂ.೫೦ ಸಾವಿರ ಕೊಡುಗೆ ನೀಡುತ್ತೇನೆ ಎಂದರು.
ಕಾವೇರಿ ಹರಿದರೆ ಪಾವನ - ಶಂಕರಬಿದರಿ
ಪ್ರತಿಭಾ ಪುರಸ್ಕಾರ ನೀಡಿ, ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರಬಿದರಿ ಮಾತನಾಡಿ, ಕೊಡಗಿನ ಕಾವೇರಿ ಮೈದುಂಬಿ ಹರಿದರೆ ರಾಜ್ಯದ ಜನರ ಜೀವನ ಪಾವನವಾಗುತ್ತದೆ. ಸ್ವಾತಂತ್ರö್ಯ ಹೋರಾಟದಲ್ಲಿ ಹೆಮ್ಮನೆ ಪುಟ್ಟಬಸಪ್ಪ ಮಹತ್ತರ ಪಾತ್ರ ವಹಿಸಿದ್ದರು.ಶೋಷಣೆ ವಿರುದ್ಧ ಹೋರಾಡಿದ ಪುಟ್ಟಬಸಪ್ಪ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಸಮಾಜದಲ್ಲಿ ಸೌಹಾರ್ದತೆಯಿದೆ. ಒಗ್ಗಟ್ಟಿದೆ. ಮಹಾನುಭಾವರಾದ .ಬಸವಣ್ಣ, ಶ್ರೀ ಶಿವಕುಮಾರ ಸ್ವಾಮೀಜಿ ಸಮಾಜದಲ್ಲಿ ಮೇಲು-ಕೀಳು ಭಾವನೆಯನ್ನು ತೊಡೆದು ಹಾಕಿದ್ದರು. ಬಸವಣ್ಣನವರ ಜೀವನ ಜಗತ್ತಿಗೆ
ಆದರ್ಶವಾಗಿದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತಪೋಕ್ಷೇತ್ರ ಮನೆಹಳ್ಳಿಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಕೊಡಗಿನ ಹಾಲೇರಿ ಮನೆತನ ಕೊಡಗು ಜಿಲ್ಲೆಯ ಹೆಮ್ಮೆ ಎಂದರು. ಮುದ್ದಿನಕಟ್ಟೆ ಮಠದ ಹಿರಿಯ ಶ್ರೀ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿ, ಯೋಧ ಸಂತೋಷ್ ಹಾಗೂ ಅತಿಥಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಮುದಿನಕಟ್ಟೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ, ಮುಳ್ಳೂರು ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕಲ್ಲಳ್ಳಿಮಠದ ರುದ್ರಮುನಿ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಸ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ, ಅ.ಭಾ.ವೀ.ಲಿಂ. ಮಹಾಸಭಾ ಯುವ ಘಟಕದ ಅಧ್ಯಕ್ಷ ಮೋಕ್ಷಿಕ್ ರಾಜ್, ಮಾಜಿ ಶಾಸಕ ಅಪ್ಪಚ್ಚುರಂಜನ್, ಅ.ಭಾ.ವಿ.ಶೈ.ಮ.ಸ. ರಾಜ್ಯ ಉಪಾಧ್ಯಕ್ಷೆ ರಾಜೇಶ್ವರಿ ನಾಗರಾಜ್, ಸದಸ್ಯರಾದ ಅನುರಾಧ, ಸುಮಾ ಸುದೀಪ್, ಪ್ರಮುಖರಾದ ಎಸ್.ಸಿ.ಶರತ್ ಶೇಖರ್, ಡಿ.ಬಿ.ಧರ್ಮಪ್ಪ, ಎಚ್.ವಿ.ಶಿವಪ್ಪ, ದೀಪಿಕಾ, ಸುರೇಶ್, ಪುರೋಹಿತರು, ಇತರರು ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಘಟಕದ ಲೇಖನಾ ಮತ್ತು ತಂಡದವರು ಪ್ರಾರ್ಥಿಸಿದರು. ಅ.ಭಾ.ವೀ.ಲಿಂ.ಮಹಾಸಭಾ ಮುಖಂಡ ಜಿ.ಎಂ.ಕಾAತರಾಜ್ ಸ್ವಾಗತಿಸಿದರು.ಶಿಕ್ಷಕಿ ಕೋಮಲಾ ಹಾಗೂ ಆರ್.ಮಂಜುನಾಥ್ ನಿರೂಪಿಸಿ, ವಂದಿಸಿದರು.