ಗೋಣಿಕೊಪ್ಪ, ಜೂ. ೧೩ : ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಜೂನ್ ೮, ೯ ಮತ್ತು ೧೦ರಂದು ಗೋಣಿಕೊಪ್ಪಲಿನ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ೧೪ ವರ್ಷದೊಳಗಿನ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗು ಜಿಲ್ಲೆಯು ೩ ಚಿನ್ನ ೧ ಬೆಳ್ಳಿ ಹಾಗೂ ೧ ಕಂಚನ್ನು ತನ್ನದಾಗಿಸಿಕೊಂಡಿದೆ.
ಮಿನ್ನಂಡ ಲಿಖಿತ್ ಚಿಣ್ಣಪ್ಪ ಹಾಗೂ ಲೇಖಕ್ ಚಂಗಪ್ಪ ಸತತವಾಗಿ ಮೂರನೇ ಬಾರಿಗೆ ಚಿನ್ನ ಗೆಲ್ಲುವ ಮೂಲಕ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ೨೦೨೫ ಎಸ್‌ಜಿಎಫ್ ಐ ರಾಷ್ಟಿçÃಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದು ರಾಜ್ಯಕ್ಕೆ ಮೊದಲ ಬಾಕ್ಸರ್ ಎನಿಸಿದ್ದ ಲಿಖಿತ್ ಚಿಣ್ಣಪ್ಪ ಈ ಬಾರಿ ರಾಷ್ಟçಮಟ್ಟದಲ್ಲಿ ಚಿನ್ನ ಗೆಲ್ಲುವ ಆಶಾ ಭಾವನೆಯನ್ನು ತರಬೇತುದಾರರಾದ ಶರತ್ ನಾಯ್ಡು ಹೊಂದಿದ್ದಾರೆ.
ಮತ್ತೊAದು ಚಿನ್ನವನ್ನು ತರುಣ್ ಜೋಡುಬೀಟಿ, ಬೆಳ್ಳಿಯನ್ನು ಕರ್ತಂಡ ಯಾನ್ ಬಿದ್ದಪ್ಪ ಹಾಗೂ ಕಂಚು ಮೇಕೇರಿರ ಕಶಿಕಾ ಕಾರ್ಯಪ್ಪ ಗಳಿಸಿದ್ದಾರೆ.
ಲಿಖಿತ್ ಚಿಣ್ಣಪ್ಪ ಹಾಗೂ ಲೇಖಕ್ ಚಂಗಪ್ಪ ಕಾವೇರಿ ಕಾಲೇಜು ತರಬೇತುದಾರರಾದ ಮಿನ್ನಂಡ ಜೋಯಪ್ಪ ಹಾಗೂ ಪ್ರೀತ್ ಜೋಯಪ್ಪ ದಂಪತಿಯ ಅವಳಿ ಮಕ್ಕಳು. ಸರ್ವದೈವತಾ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.
ತರುಣ್ ಜೋಡುಬೀಟಿ ರವಿ ಹಾಗೂ ವನಿತಾ ದಂಪತಿಯರ ಪುತ್ರ. ಗೋಣಿಕೊಪ್ಪ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಕರ್ನಂಡ ಯಾನ್ ಬಿದ್ದಪ್ಪ ಗೋಣಿಕೊಪ್ಪ ಲೋಹಿತ್ ದಂಪತಿಯರ ಪುತ್ರ. ಲಯನ್ಸ್ ಶಾಲೆಯ ವಿದ್ಯಾರ್ಥಿ, ಕಶಿಕಾ ಕಾರ್ಯಪ್ಪ ಮೇಕೇರಿರ ಪ್ರಸಿದ್ಧ ರ‍್ಯಾಲಿ ಪಟು ಮೇಕೇರಿರ ಕಾರ್ಯಪ್ಪ ದಂಪತಿಯರ ಪುತ್ರಿ. ಲಯನ್ಸ್ ಶಾಲೆಯ ವಿದ್ಯಾರ್ಥಿನಿ.
ರಾಷ್ಟçಮಟ್ಟದ ಪಂದ್ಯಾವಳಿಯು ತಾ. ೨೧ರಿಂದ ೩೦ರವರೆಗೆ ಪಂಜಾಬ್ ರಾಜ್ಯದ ಜಲಂಧರ್‌ನಲ್ಲಿ ನಡೆಯಲಿದೆ.
ರಾಜ್ಯಮಟ್ಟದ ಅಂತಿಮ ಪಂದ್ಯಾಟಕ್ಕೆ ಆಯ್ಕೆಯಾದವರಿಗೆ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಬಹುಮಾನ ವಿತರಿಸಿದರು. ಗೋಣಿಕೊಪ್ಪ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧಿಕಾರಿಗಳಾದ ಕಾಟಿಮಾಡ ಜಿಮ್ಮಿ, ಚೆಪ್ಪುಡಿರ ಕರ್ನಲ್ ಮುತ್ತಣ್ಣ, ಅಜ್ಜಿಕುಟ್ಟಿರ ಸುಬ್ರಮಣಿ, ಕೊಡಗು ಜಿಲ್ಲಾ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಗಳಾದ ಪುತ್ತಾಮನೆ ಪ್ರದೀಪ್, ತರಬೇತುದಾರರಾದ ಶರತ್ ನಾಯ್ಡು, ಮೇದಪ್ಪ ಹಾಗೂ ಕರ್ನಾಟಕ ರಾಜ್ಯದ ಬಾಕ್ಸಿಂಗ್ ಅಸೋಸಿಯೇಷನ್‌ನ ಇತರ ಗಣ್ಯರು ಹಾಜರಿದ್ದರು.
- ರಜನಿ ಎಸ್.ಎಂ.