ಚೆಯ್ಯಂಡಾಣೆ, ಜೂ. ೧೩: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಕೆಎಸ್ ಡಬ್ಲ್ಯೂಎ) ಇದರ ಸೌದಿ ರಾಷ್ಟಿçÃಯ ಸಮಿತಿ ಮಹಾ ಸಭೆಯು ಇತ್ತೀಚಿಗೆ ನಡೆಯಿತು.

ರಾಷ್ಟಿçÃಯ ಸಮಿತಿ ಅಧ್ಯಕ್ಷರಾದ ಹಂಝ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಅಂತರರಾಷ್ಟಿçÃಯ ಸಮಿತಿ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕರೆ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಂಝ ಮುಸ್ಲಿಯಾರ್ ಸಾಂತ್ವನ ಸೇವೆಯ ಗುಣಗಳು, ಅದರಿಂದಾಗುವ ಉಪಕಾರಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ವೆಲ್ಫೇರ್ ಅಂತರರಾಷ್ಟಿçÃಯ ಸಮಿತಿಯ ಮಾಧ್ಯಮ ವಿಭಾಗದ ಅಧ್ಯಕ್ಷ ಇಸ್ಮಾಯಿಲ್ ಮೂರ್ನಾಡು ಶುಭ ಹಾರೈಸಿ ಮಾತನಾಡಿದರು.

ನಂತರ ಸಭೆಯ ಉಸ್ತುವಾರಿಗಳಾಗಿ ಆಗಮಿಸಿದ್ದ ಸಲಹಾ ಸಮಿತಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಅಂತರರಾಷ್ಟಿçÃಯ ಸಮಿತಿಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ವಹಿಸಿದರು.

ನೂತನ ಪದಾಧಿಕಾರಿಗಳು

ಅಧ್ಯಕ್ಷರಾಗಿ ಹಂಝ ಮುಸ್ಲಿಯಾರ್ ಚೋಕಂಡಳ್ಳಿ, ಉಪಾಧ್ಯಕ್ಷರಾಗಿ ಸಮದ್ ಕೊಟ್ಟಮುಡಿ, ನಜೀರ್ ಗುಂಡಿಗೆರೆ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ನೆಲ್ಲಿಹುದಿಕೇರಿ, ಕಾರ್ಯದರ್ಶಿಯಾಗಿ ಸಲಾಂ ಕುಂಜಿಲ, ಅಬೂಬಕ್ಕರ್ ಎಮ್ಮೆಮಾಡು, ಕೋಶಾಧಿಕಾರಿಯಾಗಿ ಷಂಶುದ್ದೀನ್ ಚಿಟ್ಟಡೆ, ಸಂಘಟನೆ ವಿಭಾಗಕ್ಕೆ ನಾಸಿರ್ ಮರ್ಝುಕಿ ಬಲಮುರಿ, ಸ್ವಾದಿಕ್ ಎಡಪಾಲ, ಶಿಕ್ಷಣ ವಿಭಾಗಕ್ಕೆ ಮುಸ್ತಫ ಸಖಾಫಿ ಗರಗಂದೂರು, ಕರೀಂ ಮುಸ್ಲಿಯಾರ್ ಸುಂಟಿಕೊಪ್ಪ, ಸಾಂತ್ವನ ವಿಭಾಗಕ್ಕೆ ಬಷೀರ್ ಕುಂಜಿಲ, ರಫೀಕ್ ಗರಗಂದೂರ್, ಮಾಧ್ಯಮ ವಿಭಾಗಕ್ಕೆ ಶಂಸು ತಕ್ಕಪಳ್ಳಿ, ಶರೀಫ್ ಪಿರಿಯಾಪಟ್ಟಣ, ನಿರ್ವಹಣ ವಿಭಾಗಕ್ಕೆ ಶಂಸು ಮುಸ್ಲಿಯಾರ್ ಪೆರಾಜೆ, ಶಿಹಾಬುದ್ದೀನ್ ಕಂಡಕರೆ, ಸಲಹಾ ಸಮಿತಿಗೆ ಫಾರೂಕ್ ಮುಸ್ಲಿಯಾರ್, ಆಬಿದ್ ಕಂಡಕರೆÀ, ಮುಸ್ತಫಾ ಕಡಂಗ, ಷಂಶುದ್ದೀನ್ ಕೊಳಕೇರಿ, ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ರಫೀಕ್ ನೆಲ್ಲಿಹುದಿಕೇರಿ ಸ್ವಾಗತಿಸಿ, ಸರ್ವರನ್ನು ವಂದಿಸಿದರು.