ಮಡಿಕೇರಿ, ಜೂ.೧೩: ಪರಿಸರ ಸ್ನೇಹಿ ಮಹಿಳೆಯರ ಸಂಘಟನೆಯಾದ ಬಾಂಡಿAಗ್ ಬ್ಲೂಮ್ಸ್- ನರ್ಚರಿಂಗ್ ನೇಚರ್ ಸಂಸ್ಥೆಯಿAದ ಹಲವು ರೀತಿಯ ಹಣ್ಣು ಹಂಪಲಿನ ಗಿಡಗಳನ್ನು ‘ದಿ ತಾಮರ ಕೂರ್ಗ್ ರೆಸಾರ್ಟ್ನಲ್ಲಿ ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಘಟನೆಯ ಸಂಸ್ಥಾಪಕಿ ಲಿಜೆಟ್ ಬಾಚಮಾಡ ಅವರು ಮಾತನಾಡಿ, “ವೃಕ್ಷೋ ರಕ್ಷಿತೇ ರಕ್ಷಿತಾಹಃ” ಕೊಡಗಿನಲ್ಲಿ ಹಲವಾರು ಸಂಸ್ಥೆಗಳು ಗಿಡಗಳನ್ನು ಅಧಿಕ ಸಂಖ್ಯೆಯಲ್ಲಿ ನೆಟ್ಟರೂ ಅದನ್ನು ಸಂರಕ್ಷಿಸಿ ಬೆಳೆಸುವುದರಲ್ಲಿ ವಿಫಲವಾಗಿವೆ. ಆದ್ದರಿಂದ ಗಿಡಗಳನ್ನು ನೆಡುವುದು ಮಾತ್ರವಲ್ಲ ಅದನ್ನು ಸಂರಕ್ಷಿಸುವುದು ಸಹ ನಮ್ಮ ಕರ್ತವ್ಯವಾಗಿರುತ್ತದೆ ಎಂದು ಸಂದೇಶವಿತ್ತರು. ಕಾರ್ಯಕ್ರಮದಲ್ಲಿ ಪುಲಿಯಂಡ ರೂಪ, ಆದೇಂಗಡ ತನುಜಾ, ತಡಿಯಂಗಡ ಸೌಮ್ಯ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.