ಮಡಿಕೇರಿ, ಜೂ. ೧೩: ಕಳೆದ ಎಂಟು ವರ್ಷಗಳಿಂದ ಜಿಲ್ಲೆಯ ಆಯ್ದ ಸಂಕಷ್ಟ ಕುಟುಂಬಗಳಿಗೆ ಆಹಾರದ ಕಿಟ್, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರಗಳನ್ನು ವಿತರಿಸುತ್ತಾ ಬರುತ್ತಿರುವ ಮಾನವೀಯ ಸ್ನೇಹಿತರ ಒಕ್ಕೂಟದ ಜಿಲ್ಲಾಮಟ್ಟದ ಕಾರುಣ್ಯ ಕಾರ್ಯಕ್ರಮ ತಾ. ೧೪ ರಂದು (ಇಂದು) ನಡೆಯಲಿದೆ.

ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ ಅವರು ವಹಿಸಲಿದ್ದು, ಮಡಿಕೇರಿ ನಗರÀಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಮಂತರ್ ಗೌಡ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್, ಒಕ್ಕೂಟದ ಸ್ಥಾಪಕ ಅನಿಲ್ ರೈ, ಡಾ. ಮುಸ್ತಫ ಮಾದಾಪುರ, ಸುಂಟಿಕೊಪ್ಪದ ಹಿರಿಯ ಸಹಕಾರಿ ಚೆಟ್ರಂಡ ಲೀಲಾ ಮೇದಪ್ಪ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕೂಟದ ವಕ್ತಾರ ಎಂ.ಇ. ಮಹಮ್ಮದ್ ತಿಳಿಸಿದ್ದಾರೆ.