ಗೋಣಿಕೊಪ್ಪ ವರದಿ, ಜೂ. ೧೩: ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಜನ್ ಹಾಕಿ ಟೂರ್ನಿಯಲ್ಲಿ ಭಾನುವಾರ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ.

ಇವೈಸಿ ಬೇಗೂರು, ವೀರಾಜಪೇಟೆ ಟವರ್ಸ್, ಕುಶಾಲನಗರ ಟೈಕೂನ್ ಹಾಗೂ ಅಮ್ಮತ್ತಿ ಎಎಸ್‌ಸಿ ತಂಡಗಳು ಗೆಲುವು ಪಡೆದುಕೊಂಡಿವೆ. ಅಮ್ಮತ್ತಿ ಎಎಸ್‌ಸಿ ತಂಡವು ಕ್ಯಾಲ್ಸ್ ಎಎಸ್‌ಎಫ್ ತಂಡವನ್ನು ೩-೨ ಗೋಲುಗಳಿಂದ ಸೋಲಿಸಿತು. ಅಮ್ಮತ್ತಿ ಪರ ವಿಜಯ್ ನಂಜಪ್ಪ ೨ ಗೋಲು, ನಾಣಿ, ಕ್ಯಾಲ್ಸ್ ಪರ ಜೆಸ್ವಿನ್, ಬೆಳ್ಯಪ್ಪ ತಲಾ ಒಂದೊAದು ಗೋಲು ಹೊಡೆದರು. ಇವೈಸಿ ಬೇಗೂರು ತಂಡವು ಕೈಗ್ ಜೂಮರ್ಸ್ ವಿರುದ್ಧ ೩-೨ ಗೋಲುಗಳ ಜಯ ಪಡೆದುಕೊಂಡಿತು. ಬೇಗೂರು ಪರ ಪೆಮ್ಮಯ್ಯ, ನಾಣಿ, ಬೋಪಣ್ಣ, ಕೈಗ್ ಪರ ದಿವಿನ್, ಅಯ್ಯಪ್ಪ ತಲಾ ಒಂದೊAದು ಗೋಲು ಬಾರಿಸಿದರು. ವೀರಾಜಪೇಟೆ ಟವರ್ಸ್ ತಂಡ ಕಾಕೋಟ್ ಸ್ಟೆçöÊಕರ್ಸ್ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ಟವರ್ಸ್ ಆಟಗಾರ ತಿಮ್ಮಯ್ಯ ೨, ನಾಣಯ್ಯ ಮತ್ತು ಚೆಂಗಪ್ಪ ತಲಾ ಒಂದೊAದು ಗೋಲು ಹೊಡೆದರು. ಕುಶಾಲನಗರ ಟೈಕೂನ್ ತಂಡಕ್ಕೆ ಕ್ಯಾಲ್ಸ್, ಎಎಸ್‌ಎಫ್ ವಿರುದ್ಧ ೪-೦ ಗೋಲುಗಳ ಗೆಲುವು ಲಭಿಸಿತು.

ಇಂದಿನ ಪಂದ್ಯಗಳು

ಬೆ. ೯.೩೦ ; ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ಎ ಗಿ/s ಎಎಸ್ಸಿ ಅಮ್ಮತ್ತಿ

೧೦.೩೦ ; ಇವೈಸಿ ಬೇಗೂರ್ ಗಿ/s ಕುತ್ತ್ನಾಡ್ ಸ್ಟೆçöÊಕರ್ಸ್

೧೧.೩೦ ; ಅಂಜಿಗೇರಿ ನಾಡ್ ಗಿ/s ವೀರಾಜಪೇಟೆ ಕೊಡವ ಸಮಾಜ ಕ್ಲಬ್

ಮ.೧೨.೩೦ ; ವೀರಾಜಪೇಟೆ ಟವರ್ಸ್ ಗಿ/s ಕಿರ್ಗೂರ್