ಧರ್ಮಸ್ಥಳ ಗ್ರಾಮದ 'ಬುರುಡೆ ಪ್ರಕರಣ'ಕ್ಕೆ ಸಂಬAಧ ಪಟ್ಟಂತೆ ಬುರುಡೆ ಗ್ಯಾಂಗ್‌ನ ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಕ್ಯಾಮೆರಾ ಮುಂದೆ ಹೇಳಬೇಕು ಎಂದು ನನಗೆ ಬೆದರಿಕೆ ಹಾಕಲಾಗಿತ್ತು ಎಂದು “ಮಾಸ್ಕ್ ಮ್ಯಾನ್'' ಚಿನ್ನಯ್ಯ ಹೈಕೋರ್ಟ್ಗೆ ತಿಳಿಸಿದ್ದಾನೆ. ಅಲ್ಲದೆ, ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರೇ ಅತ್ಯಾಚಾರ ಮಾಡಿ ಶವಗಳನ್ನು ಹೂಳಿದ್ದಾರೆ ಎಂದು ಹೇಳಿದರೆ ಶಿಕ್ಷೆ ವೀರೇಂದ್ರ ಹೆಗ್ಗಡೆ ಅವರಿಗೆ ಆಗುತ್ತದೆ ಎಂದು ಹೇಳಿ, ನ್ಯಾಯಾಲ ಯದ ಮುಂದೆ ಅದನ್ನು ಹೇಗೆ ವಿವರಿಸಬೇಕು ಎಂಬ ತರಬೇತಿಯನ್ನೂ ಕೊಟ್ಟಿದ್ದರು ಎಂದು ವಿವರಿಸಿದ್ದಾನೆ.

ಪ್ರಕರಣದ ಕುರಿತು ತನಿಖೆ ರಚಿಸಲು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದಾಗ ವೀರೇಂದ್ರ ಹೆಗ್ಗಡೆ ಅವರು ಜೈಲಿಗೆ ಹೋಗುವ ಸಮಯ ಬಂತು ಎಂದು ಬುರುಡೆ ಗ್ಯಾಂಗ್ ಸದಸ್ಯರು ಸಂಭ್ರಮ ಪಟ್ಟಿದ್ದರೂ ಎಂದೂ ವಿವರಿಸಿದ್ದಾನೆ. ಬುರುಡೆ ಪ್ರಕರಣದಲ್ಲಿ ಯಾವ್ಯಾವ ವ್ಯಕ್ತಿ ಗಳು ತನ್ನನ್ನು ಎಲ್ಲೆಲ್ಲಿ ಕರೆದುಕೊಂಡು ಹೋದರು, ಯಾವ ರೀತಿ ಆಮಿಷ ಒಡ್ಡಲಾಯಿತು ಯಾರೆಲ್ಲ ಬೆದರಿಕೆ ಒಡ್ಡಿದರು. ನ್ಯಾಯಾಂಗ ಅಧಿಕಾರಿಗಳು ಹಾಗೂ ಕೋರ್ಟ್ ಮುಂದೆ ಯಾವ ರೀತಿ ಹೇಳಿಕೆ ನೀಡಬೇಕೆಂದು ನೀಡಿದ ತರಬೇತಿ, ತಲೆ ಬುರುಡೆ ವಿಡಿಯೋ ಮಾಡಿದ ರೀತಿ, ಅವರು ಹೇಳಿದಂತೆ ನಡೆದುಕೊಳ್ಳದ ಕಾರಣ ಮಾಡಿದ ಹಲ್ಲೆ ಸೇರಿದಂತೆ ಹಲವು ಅಂಶಗಳನ್ನು ಚಿನ್ನಯ್ಯ ವಿವರಿಸಿದ್ದಾನೆ. ಪ್ರಕರಣದ ಅಂತಿಮ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಅತ್ಯಂತ ಶೀಘ್ರವಾಗಿ ಸಲ್ಲಿಸಲು ಹಾಗೂ ಪ್ರಾಥಮಿಕ ವಿಚಾರಣಾ ವರದಿಯಲ್ಲಿ ಹೆಸರಿಸಲಾದ ಪಿತೂರಿದಾರರ ವಿರುದ್ದ ಕ್ರಮ ಕೈಗೊಳ್ಳಲು ಎಸ್‌ಐಟಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್ಗೆ ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಹಲವು ಮಹತ್ವದ ಅಂಶಗಳು ಇವೆ.

ಚಿನ್ನಯ್ಯ ಅರ್ಜಿಯಲ್ಲಿ ಏನೇನಿದೆ?

ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಒಂದು ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಲಾಗಿತ್ತು., 'ಕುಡ್ಲ ರಾಮ್ ಪೇಜ್' ಚಾನೆಲ್‌ನ ಅಜಯ್ ಎಂಬ ಯೂಟ್ಯೂಬರ್ ಸುಮಾರು ೩೦ ರಿಂದ ೩೫ ವಿಡಿಯೋಗಳನ್ನು ರೆಕಾರ್ಡ್ ಮಾಡಿದರು. ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟಂತೆಯೇ ಹೇಳಿಕೆ ನೀಡುವಂತೆ ಬೆದರಿಸಲಾಯಿತು. ಜೀವ ಭಯದಿಂದ ಅವರ ಸೂಚನೆ ಪಾಲಿಸಿದೆ. ಸಮೀಎಂ.ಡಿ. ಸಹ ನನ್ನ ವಿಡಿಯೋ ರೆಕಾರ್ಡ್ ಮಾಡಿದ. ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್‌ಅವರು ಮನೆ ನಿರ್ಮಾಣಕ್ಕೆ ಐದು ಲಕ್ಷ ರು. ಮೊತ್ತದ ಚೆಕ್ ನೀಡುವುದಾಗಿ ಭರವಸೆ ನೀಡಿದರು. ಅದಕ್ಕೆ ಪ್ರತಿಯಾಗಿ, 'ಡಿಟೆಕ್ಸ್ ಚಂದ್ರು' ಎಂಬ ಯೂಟ್ಯೂಬ್ ಚಾನೆಲ್‌ನ ಮುಂದೆ ಅವರು ಹೇಳಿಕೊಟ್ಟ ಹೇಳಿಕೆ ನೀಡುವಂತೆ ಹೇಳಿದರು. ಅದರಂತೆ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಯಿತು ಎಂದು ಅರ್ಜಿಯಲ್ಲಿ ಚಿನ್ನಯ್ಯ ತಿಳಿಸಿದ್ದಾನೆ.

ತನ್ನನ್ನು ಮುಲ್ಕಿಯ ಆಶ್ರಮಕ್ಕೆ ಕರೆದುಕೊಂಡು ಹೋದಾಗ ಚಂದ್ರಶೇಖರ ಸ್ವಾಮೀಜಿ ಬೆಂಗಳೂರಿನ ಹಿರಿಯ ಅಧಿಕಾರಿ ಗಳನ್ನು ಸಂಪರ್ಕಿಸಿದರು. ನಾನು ದಾಖಲಿಸಿರುವ ದೂರು ಸ್ವೀಕರಿಸಲು ಮತ್ತು ಮಂಗಳೂರಿನ ಪೊಲೀಸ್ ಅಧೀಕ್ಷಕರ ಮೇಲೆ ಪ್ರಭಾವ ಬೀರುವಂತೆ ಬೆಂಗಳೂರಿನ ಹಿರಿಯ ಅಧಿಕಾ ರಿಯನ್ನು ಕೋರಿದರು. ನಂತರ, ಗಿರೀಶ್ ಮಟ್ಟಣ್ಣನವರ್, ಜಯಂತ್, ಸಮೀರ್‌ಎಂ.ಡಿ ಮತ್ತು ಯೂಟ್ಯೂಬರ್ ಅಜಯ್ ಅವರು ನನ್ನನ್ನು ಮಂಗಳೂರಿನ ಪೊಲೀಸ್ ಅಧೀಕ್ಷಕರ ಕಚೇರಿಗೆ ಕರೆದೊಯ್ಯುವುದಾಗಿ ತಿಳಿಸಿದರು.

ಇದಾದ ನಂತರ ನನ್ನನ್ನು ಮಂಗಳೂರಿನ ಕೆನರಾ ಕ್ಲಬ್ ಎಂಬ ಲಾಡ್ಜ್ನ ಮೊದಲ ಮಹಡಿಯ ಕೋಣೆಯಲ್ಲಿ ಇರಿಸಿದ್ದರು. ಆಗ ಮತ್ತೊಬ್ಬ ವಕೀಲರು ಅಲ್ಲಿಗೆ ಬಂದು ನನ್ನಿಂದ ಐದಾರು ಸಹಿಗಳನ್ನು ಪಡೆದರು. ಇದಾದ ಮೇಲೆ ಗಿರೀಶ್ ಮಟ್ಟಣ್ಣನವರ್, ಪ್ರದೀಪ್, ಸಮೀರ್‌ಎಂ.ಡಿ. ಮತ್ತು ಅಭಿಷೇಕ್ ನನ್ನನ್ನು ಬೆಂಗಳೂರಿಗೆ ಕರೆದೊಯ್ದರು. ಅಲ್ಲಿ ಹಿರಿಯ ವಕೀಲರೊಬ್ಬರು ಯಾವುದೇ ಮಾಹಿತಿ ಬಹಿರಂಗಪಡಿಸಿದರೆಜೀವಾವಧಿಶಿಕ್ಷೆಅನುಭವಿಸಬೇಕಾಗುತ್ತದೆ ಎಂದು ನನಗೆ ಎಚ್ಚರಿಸಿದರು ಎಂದಿದ್ದಾನೆ.

ವೀರೇAದ್ರ ಹೆಗ್ಗಡೆ ಹೆಸರು ಹೇಳಲು ಒತ್ತಡ

ತದನಂತರ, ಮೂರು ದಿನಗಳ ಕಾಲ ಹಿರಿಯ ವಕೀಲರ ಕಚೇರಿಯಲ್ಲಿ ನನಗೆ ತರಬೇತಿ ನೀಡಲಾಯಿತು. ಕಿರಿಯ ವಕೀಲರೊಬ್ಬರು ಬೋರ್ಡ್ ಮೇಲೆ ಬರೆದು ನ್ಯಾಯಾಂಗ ಅಧಿಕಾರಿಯ ಮುಂದೆ ನೀಡಬೇಕಾದ ಹೇಳಿಕೆಗಳ ಬಗ್ಗೆ ನನಗೆ ಮಾಹಿತಿ ನೀಡಿದರು. ನಂತರ ಹಿರಿಯ ವಕೀಲರು ತಮ್ಮ ಮಾಲೀಕತ್ವದ ಮ್ಯಾರೇಜ್ ಹಾಲ್ ಬಳಿ ಕರೆದೊಯ್ದು, ಗಿರೀಶ್ ಮಟ್ಟಣ್ಣನವರ್‌ಅವರಿಗೆ ಗುಂಡು ಹೊಡೆದ ರೀತಿಯಲ್ಲಿ ಅಭಿನಯಿಸುವಂತೆ ಹೇಳಿಕೊಟ್ಟು ಆ ರೀತಿ ವರ್ತಿಸುವಂತೆ ಮಾಡಿದರು ಎಂದು ಚಿನ್ನಯ್ಯ ತಿಳಿಸಿದ್ದಾನೆ. ನಂತರ ಹಿರಿಯ ವಕೀಲರು, ಹೀಗೆ ಬಿಂಬಿಸಿದರೆ ಬೆದರಿಕೆ ಹಾಕಿದ ವ್ಯಕ್ತಿಗೆ ಶಿಕ್ಷೆ ಆಗುತ್ತದೆ, ಅದರಂತೆ ವೀರೇಂದ್ರ ಹೆಗ್ಗಡೆ ಅತ್ಯಾಚಾರ ಮಾಡಿ ಶವಗಳನ್ನು ಹೂಳಿದ್ದಾರೆ ಎಂದು ನೀನು ಹೇಳಿದರೆ ಶಿಕ್ಷೆ ವೀರೇಂದ್ರ ಹೆಗ್ಗಡೆ ಅವರಿಗೆ ಆಗುತ್ತದೆ ಎಂದು ವಿವರಿಸಿದರು. ಹಿರಿಯ ವಕೀಲರ ಕಾನೂನು ತಂಡದ ಸದಸ್ಯರು, ನ್ಯಾಯಾಲಯದ ಮುಂದೆ ಹೇಗೆ ಹೇಳಿಕೆ ನೀಡಬೇಕೆಂದು ತರಬೇತಿ ನೀಡಿ ದರು. ಬಳಿಕ ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ನನ್ನನ್ನು ಮಲಗುವ ಕೋಣೆಗೆ ಕರೆದೊಯ್ದು, ಮಂಚದ ಕೆಳಗಿನ ಕಪ್ಪು ಕಿಟ್ ಬ್ಯಾಗ್ ಹೊರಗೆಳೆದು, ಅದರಿಂದ ತಲೆಬುರುಡೆ ತೆಗೆದು, ನನ್ನ ಕೈಯಲ್ಲಿ ಹಿಡಿಸಿದ್ದನ್ನು ಜಯಂತ್ ವಿಡಿಯೋ ರೆಕಾರ್ಡ್ ಮಾಡಿಸಿದರು ಎಂದು ವಿವರಿಸಿದ್ದಾನೆ.

ಹಿರಿಯ ವಕೀಲರ ಸೂಚನೆಯಂತೆಯೇ ನ್ಯಾಯಾಲಯದ ಮುಂದೆ ಹೇಳಿಕೆ ನೀಡಬೇಕು. ಇಲ್ಲದಿದ್ದರೆ ಕೊಂದು ಅದೇ ಜಾಗದಲ್ಲಿ ಹೂಳುತ್ತೇವೆ ಎಂದು ಇದೇ ವೇಳೆ ಬೆದರಿಕೆ ಹಾಕಿದರು. ಪತ್ನಿ ಮತ್ತು ಮಕ್ಕಳನ್ನೂ ಕೊಲ್ಲುವುದಾಗಿಯೂ ಬೆದರಿಸಿದರು. ಬಳಿಕ, ಹಿರಿಯ ವಕೀಲರು ನನ್ನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದೊಯ್ದರು. ಮೊದಲಿಗೆ ಪೊಲೀಸ್ ಠಾಣೆಗೆ ಹೋಗುತ್ತಿದ್ದೇವೆ ಎಂದು ಹೇಳಿ, ನಂತರ ಧರ್ಮಸ್ಥಳ -ಕಲ್ಲೇರಿ ಮಾರ್ಗದ ಮೂಲಕ ಉಪ್ಪಿನಂಗಡಿ ಕಡೆ ಕರೆದೊ ಯ್ದರು. ಅಲ್ಲಿ ಒಂದು ಎಸ್ಕಾರ್ಟ್ ವಾಹನ ಬಂತು. ಅದರಲ್ಲಿ ನನ್ನನ್ನು ನ್ಯಾಯಾಂಗ ಅಧಿಕಾರಿಯ ಬಳಿ ಕರೆದೊಯ್ದರು. ಹೀಗೆ ಹೋಗುವಾಗ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಿಂದ ತಂದ ತಲೆಬುರುಡೆಯನ್ನು ತೆಗೆದುಕೊಂಡು ಹೋಗುವಂತೆ ಮಾಡಿದರು. ಅನಂತರ ನ್ಯಾಯಾಂಗ ಅಧಿಕಾ ರಿಯ ಮುಂದೆ ಹಾಜರಾಗಿ ನನಗೆ ಹೇಳಿಕೊಟ್ಟ ಹೇಳಿಕೆಗಳನ್ನು ನ್ಯಾಯಾಲಯಕ್ಕೆ ಹೇಳಿದೆ. ಹೀಗೆ ಹೇಳಲು ನನಗೆ ಜೀವ ಬೆದರಿಕೆಯೊಡ್ಡಲಾಗಿತ್ತು ಎಂದು ಹೇಳಿಕೊಂಡಿದ್ದಾನೆ.

ಬುರುಡೆ ಪಿಎಸ್‌ಐಗೆ ಹಸ್ತಾಂತರ

ತದನAತರ ವಕೀಲರು ನನ್ನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಗಿರೀಶ್ ಮಟ್ಟಣ್ಣನವರ್ ಒದಗಿಸಿದ ತಲೆಬುರುಡೆಯನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ಒಪ್ಪಿಸಿದೆವು. ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರು ತಲೆಬುರುಡೆ ಒಬ್ಬ ಯುವತಿಯದ್ದು ಮತ್ತು ಬಂಗಲೆಗುಡ್ಡ ಪ್ರದೇಶದಲ್ಲಿ ಮಣ್ಣು ಅಗೆದಾಗ ದೊರೆತದ್ದು ಎಂದು ಹೇಳುವಂತೆ ನನಗೆ ಸೂಚಿಸಿದರು. ಬಳಿಕ, ನನ್ನನ್ನು ಮಂಗಳೂರಿಗೆ ಕರೆದೊಯ್ದರು. ಮಂಗಳೂರಿನ ಮಲ್ಲಿಕಟ್ಟೆಯ ಒಂದು ಲಾಡ್ಜ್ನಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಅಧಿಕಾರಿಗಳು ನನ್ನನ್ನು ಪ್ರಶ್ನಿಸಿದರು. ಅಲ್ಲಿ ಹೇಳಿಕೆ ನೀಡಿದ ನಂತರ ಉಜಿರೆ ಕಡೆಗೆ ಹೊರಟೆವು. ಪೊಲೀಸ್ ಠಾಣೆಯಲ್ಲಿ ನಾನು ಸತ್ಯ ಪ್ರಯತ್ನಿಸಿದ್ದರಿಂದ ಸಿಟ್ಟಾದ ಮಹೇಶ್ ಶೆಟ್ಟಿ ತಿಮರೋಡಿ ಸಿಟ್ಟಿನಿಂದ ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಆದರೆ ಗಿರೀಶ್ ಮಟ್ಟಣ್ಣನವರ್ ಅವರನ್ನು ತಡೆದು ಶಾಂತಗೊಳಿಸಿ, ನನ್ನನ್ನು ಬೇರೆ ವಾಹನದಲ್ಲಿ ಕಳುಹಿಸಲು ವ್ಯವಸ್ಥೆ ಮಾಡಿದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ತಿಳಿಸಿದ್ದಾನೆ.

ತಮಿಳಲ್ಲಿ ಮಾತಾಡಿದ ಪ್ರಕಾಶ್ ರಾಜ್

ನಂತರ ಗಿರೀಶ್ ಮಟ್ಟಣ್ಣನವರ್ ನನ್ನ ಅಳಿಯ ಮತ್ತು ಭಾವಮೈದುನನ ಮಗನನ್ನು ಕರೆಸಿ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎರಡು ದಿನ ಇರಿಸಿದರು. ನಂತರ ಗಿರೀಶ್ ಮಟ್ಟಣ್ಣನವರ್, ಜಯಂತ್, ಸಮೀರ್‌ಎಂ.ಡಿ., ಕುಡ್ಲ ರಾಮ್ ಪೇಜ್ ಯೂಟ್ಯೂಬ್ ಚಾನೆಲ್‌ನ ಅಜಯ್ ಅಂಚನ್ ಮತ್ತು ಅಭಿಷೇಕ್ ನನ್ನನ್ನು ಕೇರಳದ ಮಡಾಯಿಕಲ್ ದೇವಸ್ಥಾ ನಕ್ಕೆ ಮತ್ತು ನಂತರ ಒಂದು ರೆಸಾರ್ಟ್ಗೆ ಕರೆದೊಯ್ದರು. ಅಲ್ಲಿ ಎರಡು ದಿನ ತಂಗಿದ್ದೆವು. ಒಂದು ರಾತ್ರಿ ಸುಮಾರು ರಾತ್ರಿ ೮ ಗಂಟೆಗೆ, ಗಿರೀಶ್ ಮಟ್ಟಣ್ಣನವರ್ ಅವರು ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ನನಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ತಮಿಳಿನಲ್ಲಿ ಮಾತನಾಡಿ, ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡಬೇಕೆಂದು ಮತ್ತು ತಾವು ೨೯ನೇ ತಾರೀಕಿಗೆ ಬಂದು ಅಪ್ಪಿಕೊಳ್ಳುವುದಾಗಿ ಹೇಳಿದರು ಎಂದು ಉಲ್ಲೇಖಿಸಿದ್ದಾನೆ.

ಎಸ್‌ಐಟಿ ರಚನೆಯಾದಾಗ ಸಂಭ್ರಮ

ಕರ್ನಾಟಕ ಸರ್ಕಾರ ಎಸ್‌ಐಟಿ ರಚಿಸಿದ ವಿಷಯ ತಿಳಿದ ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಸಂಭ್ರಮಿಸಿ, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸುವ ಸಮಯ ಬಂದಿತು ಎಂದು ಹರ್ಷ ವ್ಯಕ್ತಪಡಿಸಿದರು. ೨೦೨೫ರ ಜು.೧೯ರಂದು ಎಸ್‌ಐಟಿ ರಚನೆ ಮಾಡಿದ ನಂತರ ನನ್ನನ್ನು ಮಂಗಳೂರಿಗೆ ಕರೆಸಿ, ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಮಾಡಿದರು. ಕದ್ರಿಯಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಹಿರಿಯ ವಕೀಲರು ಕರೆ ಮಾಡಿ ನಾನು ನಿರೀಕ್ಷಿಸಿದ ರೀತಿಯಲ್ಲಿ ನೀನು ಹೇಳಿಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾರನೇ ದಿನ ಸರಿಯಾದ ಹೇಳಿಕೆ ನೀಡದಿದ್ದರೆ ಎಸ್‌ಐಟಿ ಅಸ್ಥಿಪಂಜರ ಅವಶೇಷಗಳ ಉತ್ಪನನ ಕೈಗೊಳ್ಳುವುದಿಲ್ಲ ಎಂದೂ ತಿಳಿಸಿದರು ಎಂದು ಅರ್ಜಿಯಲ್ಲಿ ವಿವರಿಸಿದ್ದಾನೆ.

ನಂತರ ಗಿರೀಶ್ ಮಟ್ಟೆಣ್ಣನವರ್ ನನಗೆ ರಾತ್ರಿ ಸುಮಾರು ೭ ಗಂಟೆಯವರೆಗೆ ನೀಡಬೇಕಾದ ಹೇಳಿಕೆಗಳ ಬಗ್ಗೆ ತರಬೇತಿ ನೀಡಿದರು. ಮಹೇಶ್ ಶೆಟ್ಟಿ ತಿಮರೋಡಿ, ನನಗೆ ದೊಡ್ಡ ಮರಗಳಿರುವ ಬಂಗಲೆಗುಡ್ಡದ ಸ್ಥಳಗಳನ್ನು ಗುರುತಿಸಿ ಅಲ್ಲಿ ಉತ್ಪನನ ನಡೆಸಿ ಸರ್ಕಾರದ ಹಣ ವ್ಯಯ ಮಾಡಿಸುವಂತೆ ಸೂಚಿಸಿದರು. ಯೋಜನೆಯ ಬಜೆಟ್ ಸುಮಾರು ೨೦೦ ಕೋಟಿ ರು. ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ ೫೦ ಲಕ್ಷ ರು. ನೀಡುವುದಾಗಿ ಭರವಸೆ ನೀಡಿದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ಬಹಿರಂಗ ಪಡಿಸಿದ್ದಾನೆ. ನಂತರ ಸಹಾಯಕ ಆಯುಕ್ತರು (ಎ.ಸಿ.) ಅವರು ಭೂಮಿ ಯ ಮೇಲೈಯಲ್ಲಿ ಕಂಡುಬರುವ ಎಲುಬುಗಳನ್ನು ಗುರು ತಿಸಿದರೆ ಯಾವುದೇ ಪ್ರಯೋಜನವಿಲ್ಲ, ನೆಲದಡಿ ಹೂಳಿದ ಅಸ್ಥಿ ಅವಶೇಷಗಳನ್ನು ಗುರುತಿಸಿದರೆ ಮಾತ್ರ ಉಪಯುಕ್ತ ಎಂದು ನನಗೆ ತಿಳಿಸಿದರು. ಒಂದು ಸಂದರ್ಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ, ಸೌಜನ್ಯಾಳ ಸಂಬAಧಿ ಎಂದು ಹೇಳಲಾದ ಪುರಂದರ ಮತ್ತು ಬಾಬು ಗೌಡ ಬಂದು, ಹದಿಮೂರನೇ ಸ್ಥಳದಲ್ಲಿ ಉತ್ಪನನ ನಡೆಸಬೇಡ ಎಂದು ಸೂಚಿ ಸಿದರು. ಏಕೆಂದರೆ ಭಾರಿ ಮಳೆಯಿಂದ ಅಲ್ಲಿದ್ದ ಅವಶೇಷಗಳು ಕೊಚ್ಚಿಹೋಗಿರಬಹುದು ಎಂದು ತಿಳಿಸಿ ಮುಂದೆ ಇನ್ನೊಂದು ಸ್ಥಳ ತೋರಿಸುವಂತೆ ಸೂಚಿಸಿದರು ಎಂದಿದ್ದಾನೆ.

ಪತ್ನಿ ಕೊಲ್ಲುವ ಬೆದರಿಕೆ ಹಾಕಿದ್ದರು

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಜಯಂತ್, ಸಮೀರ್‌ಎಂ.ಡಿ., ಕುಡ್ಡರಾಮ್ ಪೇಜ್‌ನ ಅಜಯ್ ಅಂಚನ್ ಮತ್ತು ಡಿ-ಟಾಕ್ಸ್ನ ದಿನೇಶ್ ಅವರು ತಾವು ಹೇಳಿದ ಜಾಗಗಳನ್ನು ಶವಗಳನ್ನು ಹೂಳಿದ ಸ್ಥಳಗಳೆಂದು ಎಸ್‌ಐಟಿ ಅಧಿಕಾರಿಗಳಿಗೆ ತೋರಿಸುವಂತೆ ನನಗೆ ಪದೇಪದೇ ಸೂಚಿಸಿದರು. ಹಾಗೆ ಮಾಡದಿದ್ದರೆ ತಮ್ಮ ಪತ್ನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಭಯ ಮತ್ತು ಒತ್ತಡಕ್ಕೆ ಒಳಗಾಗಿ ವಿವಿಧ ಸ್ಥಳಗಳನ್ನು ಪೊಲೀಸರಿಗೆ ತೋರಿಸಿದೆ. ಆದರೆ ಅಂತಹ ಸ್ಥಳಗಳಲ್ಲಿ ಯಾವುದೇ ಶವ ಅಥವಾ ಅಸ್ಥಿ ಅವಶೇಷ ಸಿಗಲಿಲ್ಲ ಎಂದು ಚಿನ್ನಯ್ಯ ವಿವರವಾಗಿ ಹೇಳಿಕೊಂಡಿದ್ದಾನೆ.