ಗೋಣಿಕೊಪ್ಪಲು, ಜೂ. ೧೨: ಕೆ. ಬಾಡಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ೪ನೇ ವಾರ್ಷಿಕ ಮಹಾಸಭೆ ಸಂಘದ ನೂತನ ಕಟ್ಟಡದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಮಾಚಿಮಾಡ ಎಂ. ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘದ ಆವರಣದ ಖಾಲಿ ಜಾಗದಲ್ಲಿ ಸಂಘದ ಸದಸ್ಯರ ಅನುಕೂಲಕ್ಕಾಗಿ ರೂ. ೩೦ ಲಕ್ಷ ವೆಚ್ಚದ ರಸಗೊಬ್ಬರ ದಾಸ್ತಾನು ಗೋದಾಮು ನಿರ್ಮಾಣ ಮಾಡಲು ಮಹಾಸಭೆಯಲ್ಲಿ ಅಧ್ಯಕ್ಷರು ಪ್ರಸ್ತಾಪಿಸಿದರು. ಇದಕ್ಕೆ ಸರ್ವ ಸದಸ್ಯರು ಒಕ್ಕೊರಲಿನ ಒಪ್ಪಿಗೆ ಸೂಚಿಸಿದರು. ಗೋದಾಮು ನಿರ್ಮಾಣಕ್ಕೆ ಸಂಘದ ಸದಸ್ಯರು ವೈಯಕ್ತಿಕವಾಗಿ ಆರ್ಥಿಕ ಸಹಕಾರ ನೀಡುವಂತೆ ಅಧ್ಯಕ್ಷ ತಿಮ್ಮಯ್ಯ ಮನವಿ ಮಾಡಿದರು. ಸದಸ್ಯರುಗಳು ಸಹಾಯ ಹಸ್ತ ನೀಡುವ ಭರವಸೆ ನೀಡಿದರು.
ಕೆ. ಬಾಡಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವನ್ನು ಕಳೆದ ೩ ವರ್ಷದ ಹಿಂದೆ ಆರಂಭಿಸಲಾಯಿತು. ಇದೀಗ ಸಂಘವು ಸ್ವಂತ ಕಟ್ಟಡದೊಂದಿಗೆ ಬ್ಯಾಂಕಿಗೆ ಬೇಕಾದ ಅಗತ್ಯ ಸಿಬ್ಬಂದಿಗಳನ್ನೊಳಗೊAಡAತೆ ಸಕಲ ಸೌಕರ್ಯಗಳು ಸಂಘದಿAದ ದೊರೆಯಲು ಅವಕಾಶ ಮಾಡಿಕೊಡಲಾಗಿದೆ. ಸಂಘವು ಈ ಬಾರಿ ಸಣ್ಣ ಪ್ರಮಾಣದಲ್ಲಿ ಲಾಭಾಂಶ ಹೊಂದಿದೆ. ಮುಂದಿನ ಸಾಲಿನಿಂದ ಸದಸ್ಯರಿಗೆ ಲಾಭಾಂಶದ ಡೆವಿಡೆಂಟ್ ನೀಡುವ ಚಿಂತನೆ ಇದೆ. ಸಂಘದ ಸರ್ವ ಸದಸ್ಯರು ಬ್ಯಾಂಕಿನ ಸದುಪಯೋಗವನ್ನು ಹೆಚ್ಚಾಗಿ ಪಡೆದುಕೊಳ್ಳುವಂತೆ ಅಧ್ಯಕ್ಷ ಮಾಚಿಮಾಡ ಎಂ. ತಿಮ್ಮಯ್ಯ ಮನವಿ ಮಾಡಿಕೊಂಡರು.
ಸAಘದ ನಿರ್ದೇಶಕ ಪೆಮ್ಮಣಮಾಡ ಬಿ. ರಮೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರಿಗೆ ಸವಲತ್ತುಗಳನ್ನು ಕಾಲಕಾಲಕ್ಕೆ ತಕ್ಕಂತೆ ನೀಡುವ ಸಲುವಾಗಿ ಕಳೆದ ೩ ವರ್ಷಗಳ ಹಿಂದೆ ಸಂಘವನ್ನು ಆರಂಭಿಸಲಾಯಿತು. ಇದೀಗ ಸ್ವಂತ ಕಟ್ಟಡದೊಂದಿಗೆ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಘದಲ್ಲಿ ಸದಸ್ಯರುಗಳು ಹೆಚ್ಚಿನ ವಹಿವಾಟು ನಡೆಸುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಮರಣನಿಧಿ ಸ್ಥಾಪಿಸುವಂತೆ ಸದಸ್ಯರುಗಳು ಆಡಳಿತ ಮಂಡಳಿಗೆ ಸಲಹೆ ನೀಡಿದರು. ಈ ಬಗ್ಗೆ ಚರ್ಚಿಸಿ ಅನುಷ್ಠಾನಕ್ಕೆ ತರುವ ಬಗ್ಗೆ ಆಡಳಿತ ಮಂಡಳಿ ಭರವಸೆ ನೀಡಿದರು.
ಮಹಾಸಭೆಯಲ್ಲಿ ಸಂಘದ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾದ ಬೊಳ್ಳೆರ ಟಿ. ನರುನ್ ಚಂಗಪ್ಪ, ಕಳ್ಳಿಚಂಡ ಎಸ್. ಧನಂಜಯ್ಯ, ಗುಡಿಯಂಗಡ ಎನ್. ರಾಜ, ಕಳ್ಳಿಚಂಡ ಟಿ. ಪೂವಯ್ಯ, ಮುಕ್ಕಾಟಿರ ಬಿ. ಬಿದ್ದಪ್ಪ, ಬಾಚರಣಿಯಂಡ ಎಂ. ಅಯ್ಯಪ್ಪ, ಪೆಮ್ಮಣಮಾಡ ಎನ್. ನವೀನ್, ಇವರ ಕಾರ್ಯವನ್ನು ಮಹಾಸಭೆಯು ಶ್ಲಾಘಿಸಿತು.
ಸನ್ಮಾನ
ನೂತನ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಸಿ.ವಿ. ನಾರಾಯಣ್ ಅವರನ್ನು ಮಹಾಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಇವರ ಸೇವೆಯನ್ನು ಪ್ರಶಂಸಿಸಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬೊಳ್ಳೆರ ಜಿ. ಸುಬ್ಬಯ್ಯ ನಿರ್ದೇಶಕರುಗಳಾದ ಆಳಮೇಂಗಡ ಎ. ಮೋಟಯ್ಯ, ಬೊಳ್ಳೆರ ಕೆ. ಅಪ್ಪಯ್ಯ, ಪೆಮ್ಮಣಮಾಡ ಬಿ. ರಮೇಶ್, ದೇಯಂಡ ಟಿ. ಜಯರಾಮ್, ಕೆ.ಎಸ್. ಲೀಲಾವತಿ, ಸಿ.ಜಿ. ನರೇಂದ್ರ, ಎಂ.ಡಿ. ಸಂಧ್ಯಾ, ಮೇಘನಾ ಚಂದ್ರಶೇಖರ್, ಗುಡಿಯಂಗಡ ಮೀನಾಕ್ಷಿ ರಾಜ, ಕಳ್ಳಿಚಂಡ ಪಿ. ಪ್ರಭಕುಮಾರಿ, ಸಂಘದ ಸಿಇಓ ಶ್ರೇಯಸ್ ದೇವಯ್ಯ, ಸಿಬ್ಬಂದಿ ಎಂ.ಎA. ನೀಲಮ್ಮ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ಸಂಘದ ಅಧ್ಯಕ್ಷ ಮಾಚಿಮಾಡ ಎಂ. ತಿಮ್ಮಯ್ಯ ಸ್ವಾಗತಿಸಿ, ಉಪಾಧ್ಯಕ್ಷ ಬೊಳ್ಳೆರ ಜಿ. ಸುಬ್ಬಯ್ಯ ವರದಿ ಮಂಡಿಸಿದರು. ನಿರ್ದೇಶಕ ದೇಯಂಡ ಜಯರಾಮ್ ವಂದಿಸಿದರು.